ADVERTISEMENT

ಆರೋಗ್ಯಕ್ಕೆ ಪೂರಕ ಹಣ್ಣು– ತರಕಾರಿ ಮಿಶ್ರ ಸಲಾಡ್‌

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 20:00 IST
Last Updated 16 ಆಗಸ್ಟ್ 2020, 20:00 IST
ಸಾಬುದಾನಿ ಸಲಾಡ್‌
ಸಾಬುದಾನಿ ಸಲಾಡ್‌   

ಸೇಬು– ಸಾಬುದಾನಿ ಸಲಾಡ್

ಬೇಕಾಗುವ ಸಾಮಗ್ರಿಗಳು: ಸಾಬುದಾನಿ – 1/2 ಕಪ್‌, ಶೇಂಗಾ – 8ರಿಂದ 10 ಕಾಳು, ಗೋಡಂಬಿ – 4, ಹೆಚ್ಚಿದ ಸೌತೆಕಾಯಿ – 1/2ಕಪ್‌, ಸೇಬುಹಣ್ಣು – 1/2ಕಪ್ (ಹೆಚ್ಚಿದ್ದು), ದಾಳಿಂಬೆ – 1/2ಕಪ್‌, ಹಸಿಮೆಣಸು – 1, ಕೊತ್ತಂಬರಿ ಸೊಪ್ಪು – ಸ್ವಲ್ಪ, ತೆಂಗಿನತುರಿ – 1/4 ಕಪ್‌, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – 1/4 ಟೀ ಚಮಚ, ನಿಂಬೆರಸ

ತಯಾರಿಸುವ ವಿಧಾನ: ಸಾಬುದಾನಿಯನ್ನು ಚೆನ್ನಾಗಿ ತೊಳೆದು ಹಿಂದಿನ ದಿನ ರಾತ್ರಿ ನೆನೆ ಹಾಕಿ. ಬೆಳಿಗ್ಗೆ ಸಾಬುದಾನಿಯನ್ನು ನೀರಿನಿಂದ ತೆಗೆದು 20 ನಿಮಿಷಗಳ ಕಾಲ ಆರಲು ಬಿಡಿ. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಅದಕ್ಕೆ ಶೇಂಗಾ ಹಾಗೂ ಗೋಡಂಬಿ ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಸಾಬುದಾನಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮೃದುವಾಗುವವರೆಗೂ ಹುರಿದುಕೊಳ್ಳಿ. ಅದನ್ನು ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ. ನಂತರ ಉಳಿದ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ನಿಂಬೆರಸ ಸೇರಿಸಿ.

ADVERTISEMENT

ದಾಳಿಂಬೆ– ಹೆಸರುಕಾಳು ಸಲಾಡ್‌

ಬೇಕಾಗುವ ಸಾಮಗ್ರಿಗಳು: ಮೊಳಕೆ ಬರಿಸಿದ ಹೆಸರುಕಾಳು – 1 ಕಪ್‌, ದಾಳಿಂಬೆಹಣ್ಣು – 1 ಕಪ್, ಕೊತ್ತಂಬರಿ ಸೊಪ್ಪು – ಸ್ವಲ್ಪ, ಸೌತೆಕಾಯಿ – 1(ತುರಿದಿದ್ದು), ಹಸಿಮೆಣಸು – 3, ನಿಂಬೆರಸ – 1/2ಚಮಚ, ತೆಂಗಿನತುರಿ – ಸ್ವಲ್ಪ, ಕ್ಯಾರೆಟ್ – 1 (ತುರಿದಿದ್ದು)

ತಯಾರಿಸುವ ವಿಧಾನ: ಮೊಳಕೆ ಬಂದ ಹೆಸರುಕಾಳಿಗೆ ದಾಳಿಂಬೆ, ಸೌತೆಕಾಯಿ ತುರಿ, ಕ್ಯಾರೆಟ್ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ತೆಂಗಿನತುರಿ, ಚಿಟಿಕೆ ಉಪ್ಪು ಹಾಗೂ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ. ಹಸಿಕಾಳಿನ ಕೋಸಂಬರಿ ಹಬ್ಬದಲ್ಲಿ ನೈವೇದ್ಯಕ್ಕೂ ಸೈ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.