ADVERTISEMENT

ಹರಭರ ಕಬಾಬ್‌ | ಹೀಗೆ ಮಾಡಿ ತಿಂದರೆ ರುಚಿಯೇ ಬೇರೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 8:38 IST
Last Updated 12 ನವೆಂಬರ್ 2022, 8:38 IST
ಹರಭರ್ ಕಬಾಬ್‌
ಹರಭರ್ ಕಬಾಬ್‌   

ಹರಭರ ಕಬಾಬ್‌

ಬೇಕಾಗುವ ಸಾಮಗ್ರಿಗಳು:2 ಕಟ್ಟು ಪಾಲಕ್‌ ಸೊಪ್ಪು, ಒಂದು ಹಸಿಮೆಣಸು, ಒಂದು ಕ್ಯಾಪ್ಸಿಕಂ, ಅರ್ಧ ಕಪ್‌ ಬೀನ್ಸ್‌, ಅರ್ಧ ಕಪ್‌ ಹಸಿರು ಬಟಾಣಿ, ಅರ್ಧ ಕಪ್‌ ಬೇಯಿಸಿದ ಆಲೂಗಡ್ಡೆ, ಅರ್ಧಕಪ್‌ ಪನ್ನೀರ್‌, 3 ಚಮಚ ಕೊತ್ತಂಬರಿ ಸೊಪ್ಪು, ಒಂದು ಚಮಚ ಕಾರ್ನ್‌ ಪ್ಲೋರ್‌, 2 ಚಮಚ ಬ್ರೆಡ್‌ ಪುಡಿ, ಕಾಲು ಚಮಚ ಮೆಣಸಿನಪುಡಿ, ದನಿಯಾ ಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:ಮೊದಲು ಪಾಲಕ್ ಸೊಪ್ಪನ್ನು ಒಂದು ಬಾಣಲೆಯಲ್ಲಿ ಬೇಯಿಸಿಕೊಂಡು ಅದರಲ್ಲಿನ ನೀರು ತೆಗೆದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಬೇಕು. ಮತ್ತೊಂದು ಬಾಣಲೆಗೆಎಣ್ಣೆ ಹಾಕಿ ಕಾದ ನಂತರ ಹೆಚ್ಚಿದ ಹಸಿಮೆಣಸು ಮತ್ತು ಕ್ಯಾಪ್ಸಿಕಂ, ಬೀನ್ಸ್, ಹಸಿಬಟಾಣಿಯನ್ನು ಬಾಡಿಸಿಕೊಳ್ಳಬೇಕು. ಅವಶ್ಯಕತೆ ಇದ್ದಲ್ಲಿ ಆಲೂಗಡ್ಡೆಯನ್ನು ಬಳಸಬಹುದು. ಈ ಮಿಶ್ರಣವನ್ನು ಜಾರ್‌ನಲ್ಲಿರುವ ಪಾಲಕ್ ಸೊಪ್ಪಿನ ಜೊತೆಗೆ ಸೇರಿಸಿ, ನೀರು ಹಾಕದೇ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಇದನ್ನು ಒಂದು ಪಾತ್ರೆಗೆ ಹಾಕಿ ಇದರ ಜೊತೆಗೆ ಬೇಯಿಸಿದ ಆಲೂಗಡ್ಡೆ, ಪನ್ನೀರ್, ಕೊತ್ತಂಬರಿ ಸೊಪ್ಪು, ಕಾರ್ನ್ ಫ್ಲೋರ್, ಬ್ರೆಡ್ ಕ್ರಮ್ಬ್ಸ್, ಮೆಣಸಿನಕಾಯಿ ಪುಡಿ, ದನಿಯಾ ಪುಡಿ, ಗರಂ ಮಸಾಲ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲೆಸಿಕೊಳ್ಳಬೇಕು. ನೀರನ್ನು ಉಪಯೋಗಿಸಬಾರದು. ಬಳಿಕ ಇದನ್ನು ಚಪ್ಪಟೆ ರೂಪದಲ್ಲಿ ಮಾಡಿಕೊಂಡು ಬ್ರೆಡ್ ಕ್ರಮ್ಬ್ಸ್ ಮೇಲೆ ಉರುಳಾಡಿಸಿ. ಮೇಲೊಂದು ಗೋಡಂಬಿ ಇಟ್ಟು ಬಂಗಾರದ ಬಣ್ಣ ಬರುವವರೆಗೂ ಎಣ್ಣೆಯಲ್ಲಿ ಕರಿಯಬೇಕು. ಇದನ್ನು ಕೊತ್ತಂಬರಿ ಸೊಪ್ಪಿನ ಚಟ್ನಿಯೊಂದಿಗೆ ಸವಿಯಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.