
ಪಲಾವ್, ರೊಟ್ಟಿಯಂತಹ ಆಹಾರವನ್ನು ಚಟ್ನಿ ಜತೆ ಸೇವಿಸುವುದು ಸಾಮಾನ್ಯ. ಆದರೆ ಪಚಡಿಯ ಜೊತೆಗೂ ತಿನ್ನಬಹುದು. ಸೌತೆಕಾಯಿ, ಮಾವಿನ ಕಾಯಿ, ಸೇರಿದಂತೆ ಅನೇಕ ವಿಧದ ಪಚಡಿ ಮಾಡುತ್ತಾರೆ. ಇವಲ್ಲದೆ ಸೀಮೆ ಬದನೆಕಾಯಿ, ಪಡವಲ ಕಾಯಿಗಳಿಂದಲೂ ಪಚಡಿ ಮಾಡಬಹುದು. ಈ ಪಚಡಿ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ.
ಸೀಮೆ ಬದನೆಕಾಯಿ ಪಚಡಿ ಮಾಡಲು ಬೇಕಾಗುವ ಸಾಮಗ್ರಿಗಳು
ಸೀಮೆ ಬದನೆಕಾಯಿ– 1 ಬಟ್ಟಲು
ಮೊಸರು: 1–2 ಕಪ್
ಹಸಿರು ಮೆಣಸಿನಕಾಯಿ: 3–4
ಉಪ್ಪು: ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ: 1–2 ಚಮಚ
ಸಾಸಿವೆ: ಅರ್ಧ ಚಮಚ
ಕೊತ್ತಂಬರಿ ಸೊಪ್ಪು: ಅರ್ಧ ಕಪ್
ಮಾಡುವ ವಿಧಾನ: ಸೀಮೆ ಬದನೆಕಾಯಿಯನ್ನು ತೊಳೆದು, ಸಣ್ಣ ತುಂಡುಗಳಾಗಿ ಮಾಡಿಕೊಂಡು ಬೇಯಿಸಿಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ ಮೊಸರು, ಕತ್ತರಿಸಿಕೊಂಡ ಹಸಿರುಮೆಣಸಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಬಳಿಕ ಅದಕ್ಕೆ ಒಗ್ಗರಣೆ ಹಾಕಿ. ಒಗ್ಗರಣೆಗೆ ಸಣ್ಣ ಪಾತ್ರೆಗೆ ಎಣ್ಣೆ, ಚಿಟಿಕೆ ಕೆಂಪು ಮೆಣಸು, ಕಡಲೆಬೇಳೆ, ಸಾಸಿವೆ ಹಾಕಿ. ಒಗ್ಗರಣೆಯನ್ನು ಮಿಶ್ರಣಕ್ಕೆ ಸೇರಿಸಿ. ನಂತರ, ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ ಸೀಮೆ ಬದನೆಕಾಯಿ ಪಚಡಿ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.