ADVERTISEMENT

ರಸಾಸ್ವಾದ: ಮಾವಿನ ಹಣ್ಣಿನ ಸಿಹಿತಿನಿಸು

ವೇದಾವತಿ ಎಚ್.ಎಸ್.
Published 16 ಮೇ 2025, 19:59 IST
Last Updated 16 ಮೇ 2025, 19:59 IST
ಮಾವಿನ ಹಣ್ಣಿನ ಕುಲ್ಫಿ
ಮಾವಿನ ಹಣ್ಣಿನ ಕುಲ್ಫಿ   

ಕೊಕೊನಟ್ ಲಡ್ಡು 

ಬೇಕಾಗುವ ಸಾಮಗ್ರಿಗಳು: ಡೆಸಿಕೇಟೆಡ್ ಕೊಕೊನಟ್ 1 ಕಪ್, ಸಿಹಿ ಮಾವಿನ ಹಣ್ಣಿನ ಪ್ಯೂರಿ (ಗಟ್ಟಿಯಾದ ರಸ), ಕಂಡೆನ್ಸಡ್ ಮಿಲ್ಕ್ 1/2 ಕಪ್.


ತಯಾರಿಸುವ ವಿಧಾನ: ಸಿಹಿ ಮಾವಿನ ಹಣ್ಣನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿ ಪ್ಯೂರಿ ತಯಾರಿಸಿಕೊಳ್ಳಿ. ಡೆಸಿಕೇಟೆಡ್ ಕೊಕೊನಟ್ ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಹುರಿಯಿರಿ. ಬಳಿಕ ಮಾವಿನ ಹಣ್ಣಿನ ಪ್ಯೂರಿ, ಕಂಡೆನ್ಸಡ್ ಮಿಲ್ಕ್ ಹಾಕಿ ಮಿಶ್ರಣ ಮಾಡಿ. ಗಟ್ಟಿಯಾಗುವರೆಗೆ ಮಧ್ಯಮ ಉರಿಯಲ್ಲಿ ಮಗುಚಿ. ಗಟ್ಟಿಯಾಗಲು ಐದಾರು ನಿಮಿಷ ಸಾಕು. ಆರಿದ ಬಳಿಕ ನಿಮಗೆ ಬೇಕಾದ ಗಾತ್ರಕ್ಕೆ ಉಂಡೆಗಳನ್ನು ಕಟ್ಟಿ. ಕೊನೆಯಲ್ಲಿ ಡೆಸಿಕೇಟೆಡ್ ಕೊಕೊನಟ್‌ನಲ್ಲಿ ಉರುಳಿಸಿ.

ADVERTISEMENT
ಸಾಬುದಾನಿ ಮ್ಯಾಂಗೋ ಫ್ರೂಟ್ಸ್ ಕಸ್ಟರ್ಡ್.
ಮಾವಿನ ಹಣ್ಣಿನ ಕೊಕೊನಟ್ ಲಡ್ಡು.
ಮಾವಿನ ಹಣ್ಣಿನ ಬರ್ಫಿ.

ಕುಲ್ಫಿ 

ಬೇಕಾಗುವ ಸಮಗ್ರಿಗಳು: ಹಾಲು 1 ಲೀಟರ‍್ ಸಕ್ಕರೆ 4 ಟೇಬಲ್ ಚಮಚ ಸಿಹಿ ಮಾವಿನ ಹಣ್ಣು 2 ಏಲಕ್ಕಿ ಪುಡಿ 1/4 ಟೀ ಚಮಚ ಅಲಂಕರಿಸಲು ಪಿಸ್ತಾ ಚೂರುಗಳು.

ತಯಾರಿಸುವ ವಿಧಾನ: ಹಾಲನ್ನು ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ಹಾಲು ಗಟ್ಟಿಯಾಗಿ ಅರ್ಧಕ್ಕೆ ಬಂದಾಗ ಸಕ್ಕರೆ ಸೇರಿಸಿ. ಸಕ್ಕರೆ ಪೂರ್ತಿ ಕರಗಿದ ಬಳಿಕ ಒಲೆಯನ್ನು ಆರಿಸಿ ಆರಲು ಬಿಡಿ. ಮಾವಿನ ಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿ. ಜೊತೆಗೆ ತಯಾರಿಸಿಕೊಂಡ ಹಾಲನ್ನು ಏಲಕ್ಕಿ ಪುಡಿಯನ್ನು ಸೇರಿಸಿ ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಚಿಕ್ಕ ಗ್ಲಾಸ್ ಅಥವಾ ಐಸ್‌ಕ್ರೀಮ್ ತಯಾರಿಸುವ ಮೌಲ್ಡ್ಗೆ ಹಾಕಿ ಗಟ್ಟಿಯಾಗಿ ಮುಚ್ಚಿ ನಾಲ್ಕರಿಂದ ಐದು ಗಂಟೆ ರೆಫ್ರಿಜರೇಟರ್‌ನಲ್ಲಿಟ್ಟು ಬಳಿಕ ತೆಗೆದು ಕತ್ತರಿಸಿ. ಕೊನೆಯಲ್ಲಿ ಪಿಸ್ತಾದಿಂದ ಅಲಂಕರಿಸಿ ಸವಿಯಿರಿ.

ಬರ್ಫಿ

ಬೇಕಾಗುವ ಸಾಮಗ್ರಿಗಳು: ಹಾಲು 2 ಕಪ್ (500 ಎಮ್ ಎಲ್) ಸಕ್ಕರೆ 1 ಕಪ್ ಡೆಸಿಕೇಟೆಡ್ ಕೊಕೆನಟ್ ಮೂರುವರೆ ಕಪ್ (250 ಗ್ರಾಂ) ಸಿಹಿ ಮಾವಿನ ಹಣ್ಣು ಮಧ್ಯಮ ಗಾತ್ರದ್ದು 2 ಏಲಕ್ಕಿ ಪುಡಿ 1/2 ಟೀ ಚಮಚ ತುಪ್ಪ 1 ಟೇಬಲ್ ಚಮಚ.

ತಯಾರಿಸುವ ವಿಧಾನ: ಮಾವಿನ ಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಹಾಲು ಮತ್ತು ಸಕ್ಕರೆಯನ್ನು ಬಾಣಲೆಗೆ ಹಾಕಿ ಸಕ್ಕರೆ ಕರೆಗುವರೆಗೆ ಮಿಶ್ರಣ ಮಾಡಿ. ಬಳಿಕ ಡೆಸಿಕೇಟೆಡ್ ಕೊಕೊನಟ್ ಪೌಡರ‍್ ಸೇರಿಸಿ ಮಿಶ್ರಣ ಮಾಡಿ. ನಂತರ ತಯಾರಿಸಿಕೊಂಡ ಮಾವಿನ ಹಣ್ಣಿನ ಪೇಸ್ಟ್ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣವು ಪೂರ್ತಿ ಗಟ್ಟಿಯಾಗುವರೆಗೆ ಮಧ್ಯಮ ಉರಿಯಲ್ಲಿ ಮಗುಚಿ. ಮಿಶ್ರಣವು ಗಟ್ಟಿಯಾದ ಬಳಿಕ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ಮಾಡಿ. ಈ ಬರ್ಫಿಯು ಗಟ್ಟಿಯಾಗಲು ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ. ಬಳಿಕ ಕತ್ತರಿಸಿ ಸವಿಯಿರಿ.

ಸಾಬುದಾನಿ ಮ್ಯಾಂಗೋ ಫ್ರೂಟ್ಸ್ ಕಸ್ಟರ್ಡ್

ಬೇಕಾಗುವ ಸಾಮಾಗ್ರಿಗಳು: ಸಾಬುದಾನಿ 1 ಕಪ್ ನೀರು ಒಂದೂವರೆ ಕಪ್ ಹಾಲು 1/2 ಲೀಟರ್ ವೆನಿಲ್ಲಾ ಕಸ್ಟರ್ಡ್ ಪೌಡರ್ 2 ಟೇಬಲ್ ಚಮಚ ಸಕ್ಕರೆ ಒಂದೂವರೆ ಕಪ್ಹಣ್ಣುಗಳು: ಸಿಹಿ ಮಾವಿನ ಹಣ್ಣು 1 ಕಪ್ ದ್ರಾಕ್ಷಿ 1/2 ಕಪ್ ಸೇಬು 1/2 ಕಪ್ ಸಪೋಟ 1/2 ಕಪ್ ದಾಳಿಂಬೆ 1/2 ಕಪ್ ಬಾಳೆಹಣ್ಣು 1/2 ಕಪ್ ಎಲ್ಲಾ ಹಣ್ಣುಗಳನ್ನು ಒಂದೇ ರೀತಿಯಲ್ಲಿ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಿಮಗೆ ಇಷ್ಟವಾದ ಹಣ್ಣುಗಳನ್ನು ಹಾಕಬಹುದು.

ತಯಾರಿಸುವ ವಿಧಾನ: ಸಾಬುದಾನಿಯನ್ನು ತೊಳೆದು ನಂತರ ಬಾಣಲೆಯಲ್ಲಿ ನೀರನ್ನು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಕುದಿಸಿ.ವೆನಿಲ್ಲಾ ಕಸ್ಟರ್ಡ್ ಪೌಡರ್‌ಗೆ ಸ್ವಲ್ಪ ತಣ್ಣನೆಯ ಹಾಲನ್ನು ಹಾಕಿ ಮಿಶ್ರಣ ಮಾಡಿ. ಕುದಿಸಿದ ಮಿಶ್ರಣಕ್ಕೆ ಕರಗಿಸಿಕೊಂಡ ಕಸ್ಟರ್ಡ್ ಪೌಡರ್ ಮಿಶ್ರಣವನ್ನು ಹಾಕಿ. ಈ ಮಿಶ್ರಣವೂ ಗಟ್ಟಿಯಾಗುತ್ತಾ ಬಂದಾಗ ಒಲೆಯನ್ನು ಅರಿಸಿ ಪೂರ್ತಿ ಆರಲು ಬಿಡಿ. ಅರಿದ ನಂತರ ಹಣ್ಣುಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಒಂದರಿಂದ ಎರಡು ಗಂಟೆ ಫ್ರಿಡ್ಜ್ ನಲ್ಲಿಟ್ಟು ತಣ್ಣಗೆ ಮಾಡಿ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.