ADVERTISEMENT

ಸುಲಭ ವಿಧಾನದಲ್ಲಿ ಮಾಡಬಹುದಾದ ಅವರೆಕಾಳು ಉಪ್ಪಿಟ್ಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2025, 12:46 IST
Last Updated 20 ನವೆಂಬರ್ 2025, 12:46 IST
   

ಒಂದೇ ರೀತಿಯ ಉಪ್ಪಿಟ್ಟು ತಿಂದು ಬೇಜಾರು ಆಗಿದ್ದರೆ, ಅವರೆಕಾಳು ಉಪ್ಪಿಟ್ಟು ಮಾಡಿ ಸವಿಯಬಹುದು.ಇದನ್ನು ಬಹು ಬೇಗನೆ ಸುಲಭವಾಗಿ ಯಾವ ರೀತಿ ಮಾಡಬಹುದು ಎಂಬುವುದರ ಕುರಿತು ಮಾಹಿತಿ ಇಲ್ಲಿದೆ.

ಅವರೆಕಾಳು ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು

1–2 ಕಪ್ ಸಣ್ಣ ರವೆ

ADVERTISEMENT

1 ಕಪ್ ಅವರೆಕಾಳು

2–3 ಹಸಿರು ಮೆಣಸಿನಕಾಯಿ

1–2 ಈರುಳ್ಳಿ

ಕಾಲು ಚಮಚ ಸಾಸಿವೆ

ಕರಿ ಬೇವು

ಅಡುಗೆ ಎಣ್ಣೆ

ರುಚಿಗೆ ತಕ್ಕಷ್ಟು ಉಪ್ಪು

ಕಾಯಿ ತುರಿ

ಮಾಡುವ ವಿಧಾನ

ಮೊದಲು ಅವರೆಕಾಳನ್ನು ಬೇಯಿಸಿಕೊಳ್ಳಿ. ನಂತರ ರವೆಯನ್ನು ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ.

ನಂತರ ಒಂದು ಪಾತ್ರೆಯಲ್ಲಿ ಸಾಸಿವೆ, ಕರಿ ಬೇವು, ಈರುಳ್ಳಿ, ಕಾಯಿ ತುರಿ, ಅವರೆಕಾಳು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಹುರಿದ ರವೆ ಹಾಕಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು, ಉಪ್ಪು ಹಾಕಿ ಮಿಶ್ರಣ ಮಾಡಿ, ನೀರು ಇಂಗುವ ತನಕ ಬೇಯಿಸಿಕೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.