
ವೆಜ್ ಮೊಮೊ
ಎಐ ಚಿತ್ರ
ಮೊಮೊ ಒಂದು ಜನಪ್ರಿಯ ತಿಂಡಿಯಾಗಿದೆ. ಭಾರತ, ಚೀನಾ, ನೇಪಾಳದಂತ ದೇಶಗಳಲ್ಲಿ ಫಾಸ್ಟ್ ಫುಡ್ ಸಾಲಿಗೆ ಸೇರುವುದಾದರೂ ಇದನ್ನು ಆರೋಗ್ಯಕರ ರೀತಿಯಲ್ಲಿ ಮಾಡಿಕೊಂಡು ಸವಿಯಬಹುದಾಗಿದೆ. ಹೀಗೆ ರುಚಿಕರವಾದ ವೆಜ್ ಮೊಮೊವನ್ನು ಮನೆಯಲ್ಲಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.
ವೆಜ್ ಮೊಮೊ
ಬೇಕಾಗುವ ಸಾಮಾಗ್ರಿಗಳು
ಗೋಧಿಹಿಟ್ಟು, ಕಾಳುಮೆಣಸಿನಪುಡಿ, ಉಪ್ಪು, ಕ್ಯಾರೆಟ್, ಎಲೆಕೋಸು, ಈರುಳ್ಳಿ, ದೊಡ್ಡ ಮೆಣಸಿನಕಾಯಿ, ಶುಂಠಿ ತುರಿ, ಕೊತ್ತಂಬರಿ ಸೊಪ್ಪು, ಕೆಂಪುಮೆಣಸಿನ ಪುಡಿ.
ಮಾಡೋದು ಹೇಗೆ?
ಒಂದು ಬಾಣಲೆಗೆ ಗೋಧಿಹಿಟ್ಟು ಉಪ್ಪು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಐದು ನಿಮಿಷ ಹಾಗೇ ಇಡಬೇಕು. ಇನ್ನೊಂದು ಬಾಣಲೆಗೆ ಒಂದು ಬಟ್ಟೆ ಹಾಕಿ ಎಲ್ಲ ತರಕಾರಿ ಚೂರುಗಳನ್ನು ಹಾಕಿ ಗಂಟು ಹಾಕಿ ನೀರನ್ನು ಹಿಂಡಿ ತೆಗೆದಿಟ್ಟುಕೊಳ್ಳಬೇಕು. ಈ ಮಿಶ್ರಣಕ್ಕೆ ಕಾಳು ಮೆಣಸಿನಪುಡಿ, ಕೊತ್ತಂಬರಿ ಸೊಪ್ಪು, ಕೆಂಪುಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈಗ ಕಲಸಿಟ್ಟ ಗೋಧಿಹಿಟ್ಟು ಉಂಡೆ ಮಾಡಿ ತಯಾರಿಸಿಕೊಂಡ ತರಕಾರಿ ಮಸಾಲೆಯನ್ನು ತುಂಬಿ ಸ್ಟಫ್ ಮಾಡಿ ಹಬೆಯಲ್ಲಿ ಬೇಯಿಸಿಬೇಕು. ಈಗ ರುಚಿಕರವಾದ ವೆಜ್ ಮೊಮೊ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.