ADVERTISEMENT

ಹೋಟೆಲ್ ರುಚಿಯ ಆಲೂ ಪರೋಟ ಮನೆಯಲ್ಲೇ ಮಾಡಿ.. ಇಲ್ಲಿದೆ ರೆಸಿಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2025, 11:04 IST
Last Updated 11 ಅಕ್ಟೋಬರ್ 2025, 11:04 IST
   

ವಾರಂತ್ಯದಲ್ಲಿ ಏನಾದರೂ ವಿಭಿನ್ನ ಅಡುಗೆ ಮಾಡುವ ಯೋಜನೆಯಲ್ಲಿದ್ದರೆ ಸುಲಭ ವಿಧಾನದಲ್ಲಿ ಬಹು ಬೇಗನೆ ಆಲೂ ಪರೋಟ/ಚಪಾತಿ ಮಾಡಬಹುದು. ಹಾಗಿದ್ದರೆ ಇದನ್ನು ಮಾಡುವುದು ಹೇಗೆ ಎಂದು ನೋಡೋಣ.

ಆಲೂ ಪರೋಟ /ಚಪಾತಿ ಮಾಡಲು ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು / ಮೈದಾ

ADVERTISEMENT

5–6 ಆಲೂಗಡ್ಡೆ

1/2 ಕಪ್ ಕೊತ್ತಂಬರಿ ಸೊಪ್ಪು

1/4 ಕಪ್ ಶುಂಠಿ

4–5 ಹಸಿರು ಮೆಣಸಿನಕಾಯಿ

1 ಕಪ್ ಈರುಳ್ಳಿ

1 ಚಮಚ ಧನಿಯಾ ಪುಡಿ

1 ಚಮಚ ಗರಂ ಮಸಾಲ ಪುಡಿ

1/4 ಅರಶಿನ ಪುಡಿ

1 1/2 ಚಮಚ ಖಾರಪುಡಿ

ರುಚಿಗೆ ತಕ್ಕಷ್ಟು

ಅಡುಗೆ ಎಣ್ಣೆ

ಮಾಡುವ ವಿಧಾನ

  • ಗೋಧಿ ಅಥವಾ ಮೈದಾ ಹಿಟ್ಟಿಗೆ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಪಾತಿ ಹದಕ್ಕೆ ಕಲಸಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ‌

  • ನಂತರ ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಈರುಳ್ಳಿ, ಶುಂಠಿಯನ್ನು ತೊಳೆದು ಹೆಚ್ಚಿಕೊಳ್ಳಿ.

  • ಬೇಯಿಸಿಕೊಂಡ ಆಲೂಗಡ್ಡೆ ಸಿಪ್ಪೆ ತೆಗೆದು ಸ್ಮ್ಯಾಶ್‌ ಮಾಡಿಕೊಳ್ಳಿ. ನಂತರ ಅದಕ್ಕೆ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಈರುಳ್ಳಿ, ಶುಂಠಿ, ಖಾರಪುಡಿ, ಅರಶಿನ ಪುಡಿ, ಗರಂ ಮಸಾಲ ಪುಡಿ, ಧನಿಯಾ ಪುಡಿ ಮಿಶ್ರಣ ಮಾಡಿ ಕಲಸಿಕೊಳ್ಳಿ ನಂತರ ಬೇಕಿದ್ದಲ್ಲಿ ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬಹುದು ಅಥವಾ ಹಾಗೆಯೇ ಮಸಾಲೆ ಮಿಶ್ರಣವನ್ನು ಬಳಸಿಕೊಳ್ಳಬಹುದು.

  • ಚಪಾತಿ/ಪರೋಟ ಎಷ್ಟು ಬೇಕೊ ಅಷ್ಟಕ್ಕೆ ಆಲೂ ಮಸಾಲೆ ಮಿಶ್ರಣದ ಉಂಡೆಗಳನ್ನು ಕಟ್ಟಿಕೊಳ್ಳಿ.

  • ನಂತರ ಪೂರಿ ಆಕಾರದ ಹಿಟ್ಟಿನೊಳಗೆ ಆಲೂಮಸಾಲೆ ಮಿಶ್ರಣ ಹಾಕಿ ಒಂದೊಂದಾಗಿ ಲಟ್ಟಿಸಿಕೊಂಡು ತವದ ಮೇಲೆ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ನಂತರ ಖಾರ ಚಟ್ನಿ ಅಥವಾ ಸಾಗು ಜತೆ ಸವಿಯಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.