ಸಂಜೆ ವೇಳೆ ಕಾಫಿ ಜೊತೆ ಚುರುಮುರಿ ಇದ್ದರೆ ಅದರ ರುಚಿಯೇ ಬೇರೆ. ಅದರಲ್ಲಿಯೂ ಜಿಟಿ ಜಿಟಿ ಮಳೆಯಲ್ಲಿ ಚುರುಮುರಿ ಭಿನ್ನ ಅನುಭವ ನೀಡುತ್ತದೆ. ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ 10 ನಿಮಿಷದಲ್ಲಿ ಚಿರುಮುರಿ ತಯಾರಿಸುವ ಸುಲಭ ವಿಧಾನ ತಿಳಿಯೋಣ ಬನ್ನಿ.
ಖಾರ ಚುರುಮುರಿ ಮಾಡಲು ಬೇಕಾಗುವ ಸಾಮಾಗ್ರಿಗಳು:
2 ಕಪ್ ಗರಿಗರಿ ಮಂಡಕ್ಕಿ
1/4 ಚಮಚ ಅರಿಶಿನ ಪುಡಿ
1 ಚಮಚ ಖಾರದ ಪುಡಿ
ಕೊತ್ತಂಬರಿ ಸೊಪ್ಪು
ಶೇಂಗಾ
ಅಡುಗೆ ಎಣ್ಣೆ
ಈರುಳ್ಳಿ
ಟೊಮೊಟೊ
ಕ್ಯಾರೆಟ್
ಉಪ್ಪು
ನಿಂಬೆಹಣ್ಣು
ಮಾಡುವ ವಿಧಾನ:
ಹಂತ 1: ಈರುಳ್ಳಿ, ಕೊತ್ತಂಬರಿ ಸೊಪ್ಪು, ಟೊಮೆಟೊ, ಸಣ್ಣದಾಗಿ ಹಚ್ಚಿಕೊಳ್ಳಿ. ಹಾಗೂ ಕ್ಯಾರೆಟ್ ತೊಳೆದು ತುರಿದುಕೊಳ್ಳಿ.
ಹಂತ 2: ನಂತರ ಒಂದು ಬಾಣಲೆಯಲ್ಲಿ 2 ಚಮಚ ಅಡುಗೆ ಎಣ್ಣೆ ಹಾಕಿ, ಸಿಪ್ಪೆ ತೆಗೆದ ಶೇಂಗಾ ಬೀಜವನ್ನು ಹುರಿದುಕೊಳ್ಳಿ.
ಹಂತ 3: ಬಳಿಕ ಒಂದು ಪಾತ್ರೆಯಲ್ಲಿ ಮಂಡಕ್ಕಿ, 1/4 ಚಮಚ ಅರಿಶಿನ ಪುಡಿ, 1 ಚಮಚ ಖಾರ ಪುಡಿ, ತೊಳೆದು ಹಚ್ಚಿಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಟೊಮೊಟೊ, ಎಣ್ಣೆಯಲ್ಲಿ ಹುರಿದ ಶೇಂಗಾ, ತುರಿದ ಕ್ಯಾರೆಟ್, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಟಿಕೆಯಷ್ಟು ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿ.
ಕಾಫಿ ಜತೆ ಸವಿಯಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.