ಮಕ್ಕಳ ಆಟ ಪಾಠ ನೋಡಲು ಚೆಂದ. ಅವರ ಚಟುವಟಿಕೆ ನಮ್ಮಲ್ಲಿಯೂ ಚೈತನ್ಯವನ್ನೂ ಸಂತಸವನ್ನೂ ತರುತ್ತದೆ.
ನನ್ನ ಅಕ್ಕನ ಮಗಳು ಮೂರು ವರ್ಷದ ಪುಟಾಣಿ. ಕುಳಿತಲ್ಲಿ ಕೂರದ, ನಿಂತಲ್ಲಿ ನಿಲ್ಲದ ಚೂಟಿ ಹುಡುಗಿ. ಆದರೆ ‘ಅತಿಯಾದರೆ ಅಮೃತವು ವಿಷ’ – ಎನ್ನುವ ಗಾದೆ ಹೇಳುವಂತೆ ಈ ಪುಟ್ಟ ಬಾಲಕಿಯ ಕೀಟಲೆ ದಿನೇ ದಿನೇ ಅತಿಯಾಗುತ್ತ ಹೋಯಿತು. ಇದಕ್ಕೆ ಕಾರಣ – ಹೌದು‘ ನನ್ನ ಸಂಶಯದಂತೆಯೇ ಅದು ‘ಎಡಿಎಚ್‌ಡಿ’ (ಅಟೆಂಷನ್ ಡೆಫಿಸಿಟ್ ಹೈಪರ್ ಆ್ಯಕ್ಟಿವ್ ಡಿಸಾರ್ಡರ್)!
‘ನನ್ನ ಮಗ ಯಾವಾಗಲೂ ಅಸ್ತವ್ಯಸ್ತನಾಗಿದ್ದಾನೆ’, ‘ಮಗಳಿಗೆ ಯಾವುದರ ಮೇಲೂ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ’, ‘ಈ ಮಗು ಯಾವಾಗಲೂ ಅತಿಯಾಗಿ ಚಟುವಟಿಕೆಯಿಂದ ಇರುತ್ತದೆ’ - ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ . ಶಾಲೆಯಲ್ಲಿ ಮಗು ಆಟ–ಪಾಠಗಳ ಕಡೆಗೆ ಗಮನವನ್ನು ಕೇಂದ್ರೀಕರಿಸಲು ಕಷ್ಟಪಡುವ ಸನ್ನಿವೇಶವನ್ನು ಅನೇಕ ಬಾರಿ ಶಿಕ್ಷಕರು ಗುರುತಿಸಬಹುದು. ಇಂತಹ ಸಂದರ್ಭಗಳು ನಮ್ಮ ನಡುವೆ ಅನೇಕ ಬಾರಿ ನಡೆಯುತ್ತವೆ. ಆದರೆ ಇದನ್ನು ಗಮನಿಸುವಲ್ಲೂ , ಅರ್ಥ ಮಾಡಿಕೊಳ್ಳುವುದರಲ್ಲೂ ನಾವು ವಿಫಲರಾಗುತ್ತೇವೆ; ಕೆಲವೊಮ್ಮೆ ಮಕ್ಕಳನ್ನು ವೃಥಾ ದಂಡಿಸುತ್ತೇವೆ. ಆದರೆ ವಾಸ್ತವದಲ್ಲಿ ಇದೊಂದು ವೈದ್ಯಕೀಯ ಸ್ಥಿತಿ, ಎಂದರೆ ಅನಾರೋಗ್ಯದ ಲಕ್ಷಣ. ಈ ಸಮಸ್ಯೆ ಇರುವವರಿಗೆ ಸರಿಯಾದ ಬೆಂಬಲ ಮತ್ತು ಚಿಕಿತ್ಸೆಗಳು ದೊರೆತರೆ ಅವರು ಕೂಡ ಎಲ್ಲರಂತೆ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯ. ಇದರ ಬಗ್ಗೆ ಸರಿಯಾದ ತಿಳಿವಳಿಕೆಯ ಕೊರತೆಯಿಂದಾಗಿ ಅನೇಕರು ತೊಂದರೆಯನ್ನು
ಅನುಭವಿಸುತ್ತಾರೆ.
ಯಾವ ಚಟುವಟಿಕೆಯ ಬಗ್ಗೆಯೂ ಗಮನವನ್ನು ಕೇಂದ್ರೀಕರಿಸಲು ಕಷ್ಟ.
ಅತಿಯಾದ ಚಟುವಟಿಕೆ ಅಥವಾ ಆವೇಗದ ನಡವಳಿಕೆ.
ಹಿಡಿದ ಕೆಲಸವನ್ನು ಪೂರ್ಣಗೊಳಿಸದಿರುವುದು. ಇವು ಪ್ರಮುಖ ಲಕ್ಷಣಗಳು
ಇವು ಪ್ರಮುಖ ಲಕ್ಷಣಗಳು
1. ಕಂಬೈನ್ಡ್ (ಎಡಿಎಚ್‌ಡಿ) ಶೇ 60- 70
2. ಪ್ರಮುಖವಾಗಿ ಗಮನದ ಕೊರತೆ (ಎಡಿಡಿ) ಶೇ 25 - 30
3. ಪ್ರಮುಖವಾಗಿ ಹೈಪರ್ ಆ್ಯಕ್ಟಿವ್ ಮತ್ತು ಇಂಪ್ಲೀಸಿವ್ (ಎಚ್‌ಐ) ಶೇ 8- 10
ಸಾಮಾಜಿಕ ಜಾಗೃತಿ: ಎಡಿಎಚ್‌ಡಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದರಿಂದ ಉಂಟಾಗುವ ಸಾಮಾಜಿಕ ಕಳಂಕವನ್ನು ತೊಡೆದುಹಾಕಲು ಸಾಮಾಜಿಕ ಜಾಗೃತಿಯನ್ನು ಮೂಡಿಸಬೇಕು. ಎಡಿಎಚ್‌ಡಿ ಎಂದರೆ ಕೇವಲ ‘ಆಲಸ್ಯ’ ಅಥವಾ ‘ತುಂಟಾಟ’ ಅಲ್ಲ– ಎಂಬ ಅರಿವನ್ನು ಜನರಲ್ಲಿ ಹಲವು ಮಾಧ್ಯಮಗಳ ಮೂಲಕ ಮೂಡಿಸಬೇಕಿದೆ.
ಪೋಷಕರ ಪಾತ್ರ: ಮಕ್ಕಳಿಗೆ ರಚನಾತ್ಮಕ ದಿನಚರಿಯನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಬಹುಮುಖ್ಯವಾಗಿರುತ್ತದೆ.
ಶಿಕ್ಷಕರಿಗೆ: ಮಕ್ಕಳು ತರಗತಿಯಲ್ಲಿ ಗಮನವನ್ನು ಕೇಂದ್ರೀಕರಿಸಲು, ಅವರಿಗೆ ಸಣ್ಣ ಕೆಲಸಗಳನ್ನು ವಿಭಜಿಸಿ ನೀಡಿ, ವಿಶೇಷ ಬೋಧನಾಕ್ರಮವನ್ನು ಅನುಸರಿಸಬೇಕಾಗುತ್ತದೆ. ಈ ಸಮಸ್ಯೆ ಇರುವ ಮಕ್ಕಳಿಗೆ ಬೋಧಿಸಲು ಸಹಾನುಭೂತಿ ಮತ್ತು ತಾಳ್ಮೆ ಅತಿ ಮುಖ್ಯವಾಗಿರುತ್ತದೆ.
ವೈದ್ಯಕೀಯ ಸಹಾಯ: ಮೇಲಿನ ಯಾವುದೇ ಲಕ್ಷಣ ಕಂಡುಬಂದರೆ ಮನೋವೈದ್ಯರ ಸಲಹೆಯನ್ನು ಸರಿಯಾದ ಸಮಯದಲ್ಲಿ ಪಡೆಯುವುದು ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.