
ದಿನೇ ದಿನೇ ಹೆಚ್ಚುತ್ತಿರುವ ಅನೇಕ ಆರೋಗ್ಯ ಸಮಸ್ಯೆಗೆ ಎಳೆ ಮಕ್ಕಳು ಬಲಿ ಆಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಆರೈಕೆ ಬಗ್ಗೆ ಪೋಷಕರು ಹೆಚ್ಚಿನ ಗಮನ ವಹಿಸಬೇಕು ಎನ್ನುತ್ತಾರೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು . ಶಿಶುಗಳ ರೋಗನಿರೋಧಕ ಶಕ್ತಿ ಹೆಚ್ಚಳ ಹಾಗೂ ಅವರನ್ನು ಅನಾರೋಗ್ಯದಿಂದ ಮುಕ್ತರಾಗಿಸಲು ಕೆಲವು ಕಿವಿಮಾತುಗಳು ಇಲ್ಲಿವೆ.
ಮಕ್ಕಳ ರೋಗನಿರೋಧಕ ಶಕ್ತಿಹೆಚ್ಚಳಕ್ಕೆ ಇಲ್ಲಿವೆ ಕೆಲವು ಸಲಹೆಗಳು
ಸ್ವರ್ಣಪ್ರಾಶನ (ಜೇನುತುಪ್ಪ, ತುಪ್ಪ ಮತ್ತು ಕೆಲವು ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿ).
ರೋಗನಿರೋಧಕ ಶಕ್ತಿ ವೃದ್ಧಿ(immuno modulation)
ಪದೇಪದೇ ಉಸಿರಾಟದ ತೊಂದರೆಗಳನ್ನು ತಡೆಯುವಲ್ಲಿ ಸಹಕಾರಿ
(ಗಮನಿಸಿ: ಆಯುರ್ವೇದ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮಕ್ಕಳಿಗೆ ಈ ಔಷಧಿ ನೀಡಬೇಕು.)
ಹರಿದ್ರಾಖಂಡ
ಹರಿದ್ರಾಖಂಡ ಒಂದು ಪ್ರಸಿದ್ಧ ಕಫಹರ ಮತ್ತು ಅಲರ್ಜಿ ನಿವಾರಕ ಆಯುರ್ವೇದ ಔಷಧಿ.
ಹರಿದ್ರಾಖಂಡ ಒಔಷಧಿಯು ಅಲರ್ಜಿಕ್ ನೆಗಡಿ,ಕೆಮ್ಮುಗಳ ನಿಯಂತ್ರಣಕ್ಕೆ ಸಹಕಾರಿ
ಉಸಿರಾಟದ ತೊಂದರೆ ಇರುವ ಮಕ್ಕಳಲ್ಲಿ ವೈದ್ಯರ ಸಲಹೆಯೊಂದಿಗೆ ಬಳಸಿಬೇಕು
ಆಯುರ್ವೇದ ಚಿಕಿತ್ಸೆ – ಮೂಲ ಕಾರಣಕ್ಕೆ ಪರಿಹಾರ
ಪದೇಪದೇ ಉಸಿರಾಟದ ತೊಂದರೆ ಇರುವ ಮಕ್ಕಳಿಗೆ ಆಯುರ್ವೇದದಲ್ಲಿ
ಪ್ರತಿಮರ್ಷ ನಸ್ಯ (ಅನು ತೈಲ / ಶದ್ಬಿಂದು ತೈಲ)
ಕಫಹರ ಮತ್ತು ರಸಾಯನ ಔಷಧಗಳು
ಆಹಾರ–ವಿಹಾರ ಮಾರ್ಗದರ್ಶನ (ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸುವುದು)
ದೀರ್ಘಕಾಲೀನ, ಸುರಕ್ಷಿತ ಚಿಕಿತ್ಸೆಯನ್ನೂ ಪಡೆದುಕೊಳ್ಳಬಹುದು.
ಪೋಷಕರಿಗೆ ಸಲಹೆ
ಮಕ್ಕಳ ಆರೋಗ್ಯವು ಋತುಚರ್ಯೆಯ ಪಾಲನೆಯ ಮೇಲೆ ನಿಂತಿದೆ. ಹೇಮಂತ ಋತುವಿನಲ್ಲಿ ಪೋಷಕರು ಆಹಾರ, ಜೀವನಶೈಲಿ ಮತ್ತು ಸರಳ ಆಯುರ್ವೇದ ಕ್ರಮಗಳನ್ನು ಅನುಸರಿಸಿದರೆ, ಮಕ್ಕಳನ್ನು ಪುನಃಪುನಃ ಉಸಿರಾಟದ ಸೋಂಕುಗಳಿಂದ ರಕ್ಷಿಸಬಹುದು.
(ಲೇಖಕರು: ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು, ಹುಬ್ಬಳ್ಳಿಯ ಆಯುರ್ವೇದ ಕಾಲೇಜು ಆಸ್ಪತ್ರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.