ADVERTISEMENT

ಆರೋಗ್ಯಕ್ಕೆ ತಾಮ್ರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 19:30 IST
Last Updated 3 ಜನವರಿ 2020, 19:30 IST

ಬಹುತೇಕ ಮಂದಿಗೆ ತಾಮ್ರವೆಂದರೆ ನೆನಪಾಗುವುದು ಪಾತ್ರೆಗಳು. ಆದರೆ ಇದು ನಮ್ಮ ದೇಹಕ್ಕೆ ಎಷ್ಟು ಅಗತ್ಯವೆಂದರೆ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಇದು ಸಹಾಯ ಮಾಡುತ್ತದೆ. ದೇಹದಲ್ಲಿ ಇದರ ಅಂಶ ಕಡಿಮೆಯಾದರೆ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಿ ಆ ಮೂಲಕ ಆಮ್ಲಜನಕವನ್ನು ದೇಹ ಹೀರಿಕೊಳ್ಳುವ ಕ್ಷಮತೆಯೂ ಕ್ಷೀಣಿಸುತ್ತದೆ. ಇದರ ಮಟ್ಟವನ್ನು ಆಹಾರದ ಮೂಲಕ ಹೆಚ್ಚಿಸಿಕೊಳ್ಳಬಹುದು.

ಮಾಂಸದಲ್ಲಿ ಕೇವಲ ರೈಬೊಫ್ಲೇವಿನ್‌, ವಿಟಮಿನ್‌12, ಎ, ಕಬ್ಭಿಣದ ಅಂಶ, ಪ್ರೊಟೀನ್‌ ಮಾತ್ರವಲ್ಲ, ತಾಮ್ರದ ಅಂಶವೂ ಇರುತ್ತದೆ. ಹೀಗಾಗಿ ಹೆಚ್ಚು ಕೊಬ್ಬಿಲ್ಲದ ಲೀನ್‌ ಮೀಟ್‌ ಸೇವನೆಗೆ ವೈದ್ಯರು ಶಿಫಾರಸ್ಸು ಮಾಡುತ್ತಾರೆ.

ಕಡಲಿನ ಮೀನು, ಸಿಗಡಿ ಮೊದಲಾದವು ಪೌಷ್ಟಿಕಾಂಶಯುಕ್ತ ಆಹಾರ. ಇದರಲ್ಲಿ ಸತು, ವಿಟಮಿನ್‌ ಬಿ12 ಜೊತೆ ತಾಮ್ರದ ಅಂಶವೂ ಲಭ್ಯ.

ADVERTISEMENT

ಇವೆಲ್ಲವುಗಳ ಮಧ್ಯೆ ತರಕಾರಿ ಮತ್ತು ಹಣ್ಣನ್ನು ಮರೆಯಲಾದೀತೇ? ಟೊಮೆಟೊ, ಅಣಬೆ ಹಾಗೂ ಆಲೂಗೆಡ್ಡೆ ಸೇವನೆಯಿಂದ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ತಾಮ್ರದ ಅಂಶವನ್ನು ಪಡೆಯಬಹುದು. ಒಣಗಿಸಿದ 100 ಗ್ರಾಂ ಟೊಮೆಟೋದಲ್ಲಿ 1423 ಎಂಸಿಜಿ ತಾಮ್ರವಿರುತ್ತದೆ ಎನ್ನುತ್ತಾರೆ ತಜ್ಞರು.

ಶೇಂಗಾ, ಪಿಸ್ತಾ, ಅಕ್ರೂಟ್‌, ಗೋಡಂಬಿಯನ್ನು ನಿಯಮಿತವಾಗಿ ಸೇವಿಸಿದರೆ ಒಮೆಗಾ–3 ಫ್ಯಾಟಿ ಆಸಿಡ್‌, ಪ್ರೊಟೀನ್‌, ನಾರಿನಂಶದ ಜೊತೆಗೆ ತಾಮ್ರದ ಅಂಶವೂ ಸಿಗುತ್ತದೆ. ಕುಂಬಳದ ಬೀಜ, ಕಾಮಕಸ್ತೂರಿ, ಎಳ್ಳು, ಸೂರ್ಯಕಾಂತಿ ಮೊದಲಾದ ಬೀಜಗಳಲ್ಲೂ ಇದು ಹೇರಳವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.