ADVERTISEMENT

ಬದಲಾದ ಜೀವನಶೈಲಿ: ನಗರದಲ್ಲಿ ಹೆಚ್ಚಿದ ಅಪಸ್ಮಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 20:00 IST
Last Updated 17 ನವೆಂಬರ್ 2019, 20:00 IST
   

ಬೆಂಗಳೂರು: ಬದಲಾದ ಜೀವನಶೈಲಿ, ಮೊಬೈಲ್ ವ್ಯಸನ ಸೇರಿದಂತೆ ವಿವಿಧ ಕಾರಣಗಳಿಂದ ನಗರದಲ್ಲಿ ಅಪಸ್ಮಾರಕ್ಕೆ ಒಳಪಡುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದುಸಕ್ರ ವರ್ಲ್ಡ್ ಆಸ್ಪತ್ರೆ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದ್ದು, ನಗರದಲ್ಲಿ ಸುಮಾರು 5 ಲಕ್ಷ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ.

ಸಕ್ರ ವರ್ಲ್ಡ್‌ ಆಸ್ಪತ್ರೆಯೊಂದರಲ್ಲೇ ಕಳೆದ ವರ್ಷ 2 ಸಾವಿರ ರೋಗಿಗಳು ಅಪಸ್ಮಾರ ರೋಗಕ್ಕೆ ಚಿಕಿತ್ಸೆ ಪಡೆದಿದ್ದಾರೆ. ರೋಗಿಗಳ ಸಂಖ್ಯೆಯಲ್ಲಿ ಶೇ 5 ರಷ್ಟು ಹೆಚ್ಚಳವಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ‘ಮಿದುಳಿನ ಬೆಳವಣಿಗೆ ಕುಂಠಿತ, ಗಡ್ಡೆ ಬೆಳೆಯುವುದು, ಅತಿಯಾದ ಜ್ವರ ಸೇರಿದಂತೆ ವಿವಿಧ ಕಾರಣಗಳಿಂದ ಸಾಮಾನ್ಯವಾಗಿ ಅಪಸ್ಮಾರ ರೋಗ ಕಾಣಿಸಿಕೊಳ್ಳುತ್ತದೆ. ಆದರೆ, ಇದೀಗ ನಿದ್ರೆಗೆಡುವಿಕೆ, ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡ, ಮೊಬೈಲ್‌ನಂತಹ ಆಧುನಿಕ ಸಾಧನಗಳಿಗೆ ಒಗ್ಗಿಕೊಂಡಿರುವುದು ಕೂಡಾ ಅಪಸ್ಮಾರ ರೋಗಿಗಳ ಸಂಖ್ಯೆ ಹೆಚ್ಚಳವಾಗಲು ಕಾರಣ’ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ನರವಿಜ್ಞಾನಿ ಡಾ.ಆರ್.ಶಿವಕುಮಾರ್, ‘ಜೀವನಶೈಲಿಯನ್ನು ಬದಲಿಸಿಕೊಂಡಿರುವುದು ಅಪಸ್ಮಾರ ರೋಗಕ್ಕೆ ಪ್ರಮುಖ ಕಾರಣವಾಗುತ್ತಿದೆ. ಮಧುಮೇಹದ ಸಮಸ್ಯೆ ಎದುರಿಸುತ್ತಿರುವವರು ಅಪಸ್ಮಾರಕ್ಕೆ ಒಳಪಟ್ಟಲ್ಲಿ ಅಪಾಯದ ಸಾಧ್ಯತೆಗಳು ಅಧಿಕ. ಔಷಧಗಳ ಮೂಲಕ ಈ ರೋಗಿಯನ್ನು ಗುಣಪಡಿಸಬಹುದಾಗಿದೆ‌’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.