ADVERTISEMENT

ಮನೆಮದ್ದುಗಳು: ಉದುರುವ ಕೂದಲಿಗೆ ಮಾಡಿ ಮದ್ದು

ಸೀತಾ ಎಸ್.ನಾರಾಯಣ
Published 16 ಜನವರಿ 2026, 23:30 IST
Last Updated 16 ಜನವರಿ 2026, 23:30 IST
<div class="paragraphs"><p>ತಲೆಗೂದಲು ಆರೈಕೆ</p></div>

ತಲೆಗೂದಲು ಆರೈಕೆ

   

ತಲೆಗೂದಲು ಉದುರುವುದು ಅಥವಾ ತಲೆ ಬೋಳಾಗುವುದು ಇತ್ತೀಚೆಗೆ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆ ಪುರುಷರಲ್ಲಿ ಮಾತ್ರವಲ್ಲದೆ ಮಹಿಳೆಯರಲ್ಲೂ ಕಾಣಿಸುತ್ತಿದೆ. ದಿನಕ್ಕೆ 50-100 ಕೂದಲಿಗಿಂತ ಹೆಚ್ಚಿಗೆ ಉದುರಿದಲ್ಲಿ ಅದು ಸಮಸ್ಯೆ ಎನಿಸಿಕೊಳ್ಳುತ್ತದೆ.

ಅದನ್ನು ತಡೆಗಟ್ಟಲು ಕೆಲವು ಮನೆಮದ್ದುಗಳು ಇಲ್ಲಿವೆ:

ADVERTISEMENT

• ಮೆಂತ್ಯಸೊಪ್ಪು, ಕರಿಬೇವು ಹಾಗೂ ದಾಸವಾಳ ಎಲೆ/ಹೂವು ಸಮಪ್ರಮಾಣ, ಬೇಕಿದ್ದಲ್ಲಿ ಸ್ವಲ್ಪ ತುಳಸಿ, ಲೋಳೆಸರವನ್ನೂ ಸೇರಿಸಿಕೊಂಡು ರುಬ್ಬಿ. ಈ ಮಿಶ್ರಣಕ್ಕೆ ಅರ್ಧ ಹೋಳು ನಿಂಬೆರಸ ಸೇರಿಸಿ ಕಲಸಿ ಕೂದಲಿನ ಬುಡಕ್ಕೆ ಹಚ್ಚಿ. 2-3 ಗಂಟೆ ಬಿಟ್ಟು ತೊಳೆದುಕೊಳ್ಳಿ. ಇದು ತಲೆಹೊಟ್ಟು ನಿವಾರಣೆಗೆ, ಶಿಲೀಂಧ್ರ ಸೋಂಕು ತಡೆಗಟ್ಟಲು, ಕೂದಲು ಹೇರಳವಾಗಿ ಬೆಳೆಯಲು ಹಾಗೂ ಕಪ್ಪಾಗಲು ಸಹಕಾರಿ.

•ಮೆಹೆಂದಿಪುಡಿ, ತುಳಸಿಪುಡಿ, ಮೆಂತ್ಯಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ನಿಂಬೆರಸ ಸೇರಿಸಿ, ಸ್ವಲ್ಪ ನೀರು ಹಾಕಿ ಕಲಸಿ ಲೇಪನವನ್ನು ತಯಾರಿಸಿ. ಮೆಹೆಂದಿ ಬಣ್ಣ ಬೇಡದಿದ್ದಲ್ಲಿ ಬಾದಾಮಿ ಎಣ್ಣೆ ಸೇರಿಸಬಹುದು. ಕೂದಲಿನ ಬುಡದಿಂದ ಕೊನೆಯವರೆಗೂ ಲೇಪಿಸಿ 2-3 ಗಂಟೆಗಳ ನಂತರ ತೊಳೆದುಕೊಳ್ಳಿ. ಇದು ತಲೆಹೊಟ್ಟು ನಿವಾರಣೆಗೆ ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿ.

•ಕೊಬ್ಬರಿಎಣ್ಣೆಯಿಂದ ಕೂದಲಿನ ಬುಡ ಹಾಗೂ ಕೂದಲಿಗೆ ವಾರಕ್ಕೊಮ್ಮೆ ಎರಡು ಬಾರಿ ಮಸಾಜ್ ಮಾಡಿದರೆ ತಲೆಗೂದಲು ಬಲವಾಗುತ್ತದೆ.

•ಲೋಳೆಸರ ಅಥವಾ ಈರುಳ್ಳಿ ರಸದ ಲೇಪನ ಹಚ್ಚಿ ಒಂದು ಗಂಟೆಯ ನಂತರ ತೊಳೆಯಬಹುದು.

• ಮೆಂತ್ಯ ಕಾಳನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಅರೆದು ತಲೆಗೆ ಲೇಪಿಸಿ, ಒಂದು ಗಂಟೆಯ ನಂತರ ತೊಳೆದುಕೊಳ್ಳಿ. ಮೆಂತ್ಯದ ಮೊಳಕೆಕಾಳಿನ ಸೇವನೆಯೂ ಕೂದಲಿನ ಬೆಳವಣಿಗೆಗೆ ಸಹಕಾರಿ.

• ತೆಂಗಿನಕಾಯಿ ತುರಿಯನ್ನು ರುಬ್ಬಿ ಹಾಲನ್ನು ತೆಗೆದು ಕೂದಲಿನ ಬುಡಕ್ಕೆ ಲೇಪಿಸಿ ಒಂದು ಗಂಟೆಯ ನಂತರ ತೊಳೆಯಿರಿ.

•ಮೊಳಕೆ ಬಂದ ಅಗಸೆ ಕಾಳುಗಳ ಸೇವನೆಯು ದೇಹಕ್ಕೆ ಅತ್ಯಗತ್ಯವಾದ ಒಮೇಗ– 3 ಕೊಬ್ಬಿನಾಮ್ಲವನ್ನು ಒದಗಿಸಿ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸುತ್ತದೆ.

•ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡುವುದು ಒಳ್ಳೆಯದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.