ADVERTISEMENT

ನಿದ್ರಾಹೀನತೆ, ಆತಂಕದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಸಿತ: ಅಧ್ಯಯನ

ಪಿಟಿಐ
Published 2 ಜನವರಿ 2026, 7:56 IST
Last Updated 2 ಜನವರಿ 2026, 7:56 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ನಿದ್ರಾಹೀನತೆ ಮತ್ತು ಆತಂಕವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ನಿದ್ರಾಹೀನತೆ ಮತ್ತು ಆತಂಕ ಈ ಎರಡರಲ್ಲಿ ಯಾವುದಾದರೂ ಒಂದು ಲಕ್ಷಣ ಕಂಡುಬಂದರೆ, ದೇಹದಲ್ಲಿ ಸೋಂಕು ತಡೆಗಟ್ಟುವ ಜೀವಕೋಶಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸೌದಿ ಅರೇಬಿಯಾದ ತೈಬಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿರುವುದಾಗಿ ಪಿಟಿಐ ವರದಿ ತಿಳಿಸಿದೆ.

ADVERTISEMENT

60 ವಿದ್ಯಾರ್ಥಿಗಳನ್ನೊಳಗೊಂಡ ಅಧ್ಯಯನದ ವರದಿಯನ್ನು ಫ್ರಾಂಟಿಯರ್ಸ್ ಇನ್ ಇಮ್ಯುನಾಲಜಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ವಿದ್ಯಾರ್ಥಿಗಳು ನಿದ್ರಾಹೀನತೆ ಮತ್ತು ಆತಂಕದ ಲಕ್ಷಣಗಳನ್ನು ವರದಿ ಮಾಡಿದ್ದರು. ಅವರ ರಕ್ತದ ಮಾದರಿಗಳನ್ನು ಪರಿಶೀಲಿಸಿದಾಗ ರೋಗ ನಿರೋಧಕ ಜೀವಕೋಶಗಳು ಕಡಿಮೆಯಾಗಿರುವುದು ಕಂಡು ಬಂದಿದೆ.

ಅಧ್ಯಯನದಲ್ಲಿ ಪಾಲ್ಗೊಂಡ ಶೇ 75ರಷ್ಟು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಆತಂಕದ ಲಕ್ಷಣಗಳು ಮತ್ತು ಶೇ 50ರಷ್ಟು ಮಹಿಳೆಯರಲ್ಲಿ ನಿದ್ರಾಹೀನತೆ ಸಮಸ್ಯೆ ವರದಿಯಾಗಿದೆ.

ದೇಹದಲ್ಲಿ ಸೋಂಕು ನಿರೋಧಕ ಜೀವಕೋಶಗಳು ಕಡಿಮೆಯಾದಂತೆ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಪರಿಣಾಮ ಕ್ಯಾನ್ಸರ್‌, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಕಾಡಬಲ್ಲದು. ಹೀಗಾಗಿ ನಿದ್ರಾಹೀನತೆ ಮತ್ತು ಆತಂಕದ ಸಮಸ್ಯೆಯನ್ನು ಪರಿಹರಿಸಿಕೊಂಡಲ್ಲಿ ರೋಗ ನಿರೋಧಕ ಶಕ್ತಿ ಕೊರತೆಯಿಂದ ಕಾಡಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎನ್ನುತ್ತದೆ ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.