ADVERTISEMENT

ಯಾವೆಲ್ಲ ಸಿಹಿ ಮಧುಮೇಹಿಗಳಿಗೂ ಸ್ನೇಹಿ?

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 0:30 IST
Last Updated 11 ಜನವರಿ 2025, 0:30 IST
<div class="paragraphs"><p>ಕ್ಯಾರೆಟ್ ಹಲ್ವಾ&nbsp;</p></div>

ಕ್ಯಾರೆಟ್ ಹಲ್ವಾ 

   

ಹಬ್ಬ ಹರಿದಿನಗಳಲ್ಲಿ ಸಿಹಿ ಹಂಚುವುದು ಸಾಮಾನ್ಯ.  ಇಂಥ ಸಂದರ್ಭಗಳಲ್ಲಿ ಮಧುಮೇಹ ಹೊಂದಿರುವವರಿಗೆ ಮುಜುಗರವಾಗುತ್ತದೆ. ಮಧುಮೇಹಿಗಳು ಸಿಹಿಭಕ್ಷ್ಯವನ್ನು ತ್ಯಜಿಸಿದೆ, ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬಹುದು. ಹಾಗೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. 

ಸಿಹಿ ತಿನ್ನುವುದರಿಂದ ಮಾತ್ರ ರಕ್ತದ ಸಕ್ಕರೆ ಮಟ್ಟ ಜಾಸ್ತಿಯಾಗುವುದಲ್ಲ. ಬದಲಿಗೆ ನೀವು ಕಾರ್ಬೋಹೈಡ್ರೇಟ್ ಸೇವನೆಯ ಮೇಲೆ ಹೆಚ್ಚು ಗಮನ ಇಟ್ಟುಕೊಳ್ಳಬೇಕು. ಸಕ್ಕರೆ, ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ ಮತ್ತು ಫೈಬರ್ ಅನ್ನು ಒಳಗೊಂಡಂತೆ ಕಾರ್ಬೋಹೈಡ್ರೇಟ್‌ಗಳು ರಕ್ತದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಸಿಹಿತಿಂಡಿಗಳು ಸಾಮಾನ್ಯವಾಗಿ ಡೆಕ್ಸ್ಟ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಂಥ ಸರಳ ಸಕ್ಕರೆ ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಅವು ರಕ್ತದಲ್ಲಿನ ಸಕ್ಕರೆ ಅಂಶದ ಏರಿಕೆಗೆ ಕಾರಣವಾಗಬಹುದು.

ADVERTISEMENT

 ಆಹಾರದ ವಿಚಾರದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಅಂತ ಇದೆ. ಆ ಜಿಐ ಅನ್ನು ಅರ್ಥಮಾಡಿಕೊಳ್ಳುವುದರಿಂದ  ಯಾವ ಆಹಾರ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಲು ಸಹಾಯ ಆಗುತ್ತದೆ. ಜಿಐ ಇಂಡೆಕ್ಸ್ ಆಹಾರದ ಸ್ಕೋರಿಂಗ್ ವ್ಯವಸ್ಥೆಯಾಗಿದೆ.

ಈ ಕುರಿತು ಅಬಾಟ್‌ನ ನ್ಯೂಟಿಷಿಯನಿಸ್ಟ್‌ ಡಾ. ಇರ್ಫಾನ್ ಶೇಖ್ ಅವರು, ಆಹಾರದಲ್ಲಿ ಹೆಚ್ಚು ನಾರಿನಂಶ (ಸಜ್ಜೆ, ಜೋಳ ಮತ್ತು ರಾಗಿ), ಗೋಧಿ ಹಿಟ್ಟಿನ ಬ್ರೆಡ್, ಹಣ್ಣುಗಳು, ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು (ಬೇಳೆಗಳನ್ನು) ಬಳಸಬೇಕು. ಅವುಗಳು ಸರಳ ಕಾರ್ಬೋಹೈಡ್ರೇಟ್ ಸೇವನೆಯನ್ನು ಸಮತೋಲನಗೊಳಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ ಎನ್ನುತ್ತಾರೆ ಅವರು.

ಬೆಂಗಳೂರಿನ ಲೈಫ್‌ಕೇರ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್ ಮಧುಮೇಹ ತಜ್ಞ ಡಾ.ಎಲ್. ಶ್ರೀನಿವಾಸಮೂರ್ತಿ ಡಯಾಬಿಟೀಸ್ ಸ್ಪೆಸಿಫಿಕ್ ನ್ಯೂಟ್ರಿಷನ್ (ಡಿಎಸ್ಎನ್) ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದೈನಂದಿನ ಊಟದಲ್ಲಿ ಅವಶ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ವಿಶೇಷ ಪೌಷ್ಟಿಕಾಂಶ ಪಾನೀಯಗಳನ್ನು ಸೇವಿಸುವುದರಿಂದ ಪೋಷಕಾಂಶ ಕೊರತೆಯನ್ನು ಸರಿದೂಗಿಸಬಹುದು ಎನ್ನುತ್ತಾರೆ. 

ಡಿಎಸ್ಎನ್ ಮಧುಮೇಹಿಗಳಿಗೆ ಹೇಗೆ ಸಹಾಯ ಮಾಡುತ್ತದೆ?

ಡಯಾಬಿಟೀಸ್ ಸ್ಪೆಸಿಫಿಕ್ ನ್ಯೂಟ್ರಿಷನ್ ಮಧುಮೇಹಿಗಳು ಯಾವುದೇ ಗಿಲ್ಟ್ ಇಲ್ಲದೆ ಸಿಹಿ ತಿನ್ನಲು ಅವಕಾಶ ಮಾಡಿಕೊಡುತ್ತದೆ. ಡಿಎಸ್ಎನ್ ಉತ್ಪನ್ನಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಅವುಗಳನ್ನು ಹೆಚ್ಚು ಕಾರ್ಬ್, ಹೆಚ್ಚು ಸಕ್ಕರೆ ಇರುವ ಖಾದ್ಯಗಳ ಬದಲಿಗೆ ಬಳಸಬಹುದಾಗಿದೆ. ಇದಕ್ಕಾಗಿ ಇಲ್ಲಿವೆ ಕೆಲವು ಸಲಹೆಗಳು

ಡಿಎಸ್ಎನ್ ಶೇಕ್‌ಗಳು: ಸಕ್ಕರೆ ಹೊಂದಿರುವ ಮಿಲ್ಕ್‌ ಶೇಕ್‌ಗಳು ಅಥವಾ ಸ್ಮೂಥಿಗಳ ಬದಲಿಗೆ ಡಿಎಸ್ಎನ್ ಶೇಕ್ ಮಿಕ್ಸ್ ಅನ್ನು ಬೆರ್ರಿ ಅಥವಾ ಅಂಜೂರದ ಹಣ್ಣುಗಳಂತಹ ಮಧುಮೇಹ-ಸ್ನೇಹಿ ಹಣ್ಣುಗಳ ಜೊತೆ ಸೇರಿಸಿ ಶೇಕ್ ತಯಾರಿಸಿ ಸೇವಿಸಬಹುದು.

ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳು: ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ತಯಾರಿಸುವಾಗ ಹೆಚ್ಚು ಕಾರ್ಬ್ ಇರುವ ಸಾಮಗ್ರಿಗಳ ಬದಲಿಗೆ ಡಿಎಸ್ಎನ್ ಪುಡಿ ಅಥವಾ ಬಾದಾಮಿ ಅಥವಾ ಓಟ್ ಹಿಟ್ಟಿನಂತಹ ಕಡಿಮೆ ಜಿಐ ಇರುವ ಹಿಟ್ಟುಗಳನ್ನು ಬಳಸಿ.

ಕಡಿಮೆ ಜಿಐ ಆಹಾರಗಳು: ಬಾಸ್ಮತಿ ಅಕ್ಕಿಯಂತಹ ಹೆಚ್ಚು ಜಿಐ ಹೊಂದಿರುವ ಅಕ್ಕಿಯ ಬದಲಿಗೆ ಬ್ರೌನ್ ರೈಸ್‌ ಬಳಸಿ. ಗೋಧಿ ಚಪಾತಿಯ ಬದಲಿಗೆ ರಾಗಿ, ಸಜ್ಜೆ ಅಥವಾ ಜೋಳದ ರೊಟ್ಟಿಯನ್ನು ಬಳಸಿ ನಿಮ್ಮ ಊಟವನ್ನು ಮಧುಮೇಹ ಸ್ನೇಹಿ ಊಟವಾಗಿಸಿ.

ಶ್ರೀಖಂಡ

ಸಿಹಿಯನ್ನು ಹೀಗೆ ಮಾಡಿ...

ಕ್ಯಾರೆಟ್ ಹಲ್ವಾ: ಏಲಕ್ಕಿ ಮತ್ತು ಹುರಿದ ಬಾದಾಮಿಗಳನ್ನು ಹಾಲಿನಲ್ಲಿ ಬೆರೆಸಿದ ಕ್ಯಾರೆಟ್ ಗೆ ಸೇರಿಸಿ. ಎಣ್ಣೆ ಅಂಶ ಆವಿಯಾಗುವವರೆಗೆ ಬೇಯಿಸಿ. ಕಡೆಗೆ ಹುರಿದ ಬಾದಾಮಿ ತುಂಡುಗಳನ್ನು ಅದರ ಮೇಲೆ ಹರಡಿ ಅಲಂಕರಿಸಿ.

ಹಾಲಿನ ಪಾಯಸ: ಶ್ಯಾವಿಗೆಯನ್ನು ಬಂಗಾರ ಬಣ್ಣ ಆಗುವವರೆಗೆ ತುಪ್ಪದಲ್ಲಿ ಹುರಿಯಿರಿ. ನಂತರ ಅದು ದಪ್ಪವಾಗುವವರೆಗೆ ಹಾಲಿನಲ್ಲಿ ಬೇಯಿಸಿ. ಬಣ್ಣ ಮತ್ತು ಪರಿಮಳಕ್ಕಾಗಿ ಕೇಸರಿ ಸೇರಿಸಿ. ನಂತರ ಅದರ ಮೇಲೆ ಒಣ ಹಣ್ಣಿನ ಬೀಜಗಳನ್ನು ಉದುರಿಸಿ.

ಹೆಸರುಬೇಳೆ ಪಾಯಸ: ಹೆಸರು ಬೇಳೆ ಮತ್ತು ಅಕ್ಕಿಯನ್ನು ನಿಧಾನ ಬೆಂಕಿಯಲ್ಲಿ ಬೇಯಿಸಿ. ಸ್ವಲ್ಪ ತುಪ್ಪವನ್ನು ಸೇರಿಸಿ ಮತ್ತು ಹುರಿದ ಬೀಜಗಳು ಹಾಗೂ ಬೆಚ್ಚಗಿನ ಹಾಲನ್ನು ಮಿಶ್ರ ಮಾಡಿ. ಈ ಕುರಿತು ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಶ್ರೀಖಂಡ: ಏಲಕ್ಕಿ ಮತ್ತು ಬಾದಾಮಿ ಮತ್ತು ಪಿಸ್ತಾಗಳನ್ನು ದಪ್ಪನಾದ ಮೊಸರಿನ ಜೊತೆ ಸೇರಿಸಿ ತಂಪಾದ ಖಾದ್ಯವಾಗಿ ಪರಿವರ್ತಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.