ADVERTISEMENT

ಏನಿದು ಕೊರೊನಾ ವೈರಸ್? ಸೋಂಕು ತಿಳಿಯುವುದು ಹೇಗೆ? ಮುನ್ನೆಚ್ಚರಿಕೆ ಕ್ರಮಗಳು ಏನು?

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 13:02 IST
Last Updated 3 ಮಾರ್ಚ್ 2020, 13:02 IST
   

ನವದೆಹಲಿ: ಚೀನಾದಲ್ಲಿ ಹರಡಿರುವ ಮಾರಣಾಂತಿಕ ಕೊರೊನಾ ವೈರಸ್‌ ಭಾರತಕ್ಕೂ ವ್ಯಾಪಿಸುತ್ತಿದ್ದು ಕೊರೊನಾ ವೈರಸ್ ಸೋಂಕು ತಗುಲಿದರೆ ತಿಳಿಯುವುದು ಹೇಗೆ? ಮುನ್ನೆಚರಿಕೆ ಕ್ರಮಗಳ ಮಾಹಿತಿ ಇಲ್ಲಿದೆ.

ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇಲ್ಲಿಯವರೆಗೂ ಮೃತಪಟ್ಟವರ ಸಂಖ್ಯೆ 3000ಕ್ಕೆ ಏರಿಕೆಯಾಗಿದ್ದು ಸುಮಾರು 75 ಸಾವಿರ ಜನರಲ್ಲಿ ಸೋಂಕು ಪತ್ತೆಯಾಗಿದೆ. ಭಾರತದಲ್ಲಿ ಇದುವರೆಗೂ 5ಕೊರೊನಾ ವೈರಸ್‌ ಪತ್ತೆಯಾಗಿರುವುದು ದೃಡಪಟ್ಟಿದೆ.

ಏನಿದುಕೊರೊನಾ ವೈರಸ್?

ADVERTISEMENT

ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ತಳಿಯ ‘ಮಿಡಲ್‌ ಈಸ್ಟ್‌ ರೆಸ್‌ಫಿರೇಟರಿಸಿಂಡ್ರೋಮ್‌ಕೊರೋನರಿ ವೈರಸ್‌’ (2019–CoV/ mers)ನೆಗಡಿ ಹಾಗೂ ಶ್ವಾಸಕೋಶಸೋಂಕಿಗೆ ಕಾರಣವಾಗುತ್ತದೆ. ಇದಕ್ಕೆಒಳಗಾದವರು ನ್ಯುಮೋನಿಯಾಕ್ಕೆ ತುತ್ತಾಗಿ ಸಾವನ್ನಪ್ಪುತ್ತಾರೆ. ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಈ ವೈರಸ್‌ ಕಾಣಿಸುತ್ತದೆ.ನೆಗಡಿ, ಶೀತದಿಂದ ಬಳಲುತ್ತಿರುವವರು ಕೊರೊನಾ ವೈರಸ್‌ ಸೋಂಕಿಗೆ ಬಹುಬೇಗನೆ ತುತ್ತಾಗುತ್ತಾರೆ. ಸಾಮಾನ್ಯವಾಗಿ ಈ ವೈರಸ್‌ ಬಾವಲಿ, ಹಾವುಗಳು ಸೇರಿದಂತೆ ವನ್ಯ ಜೀವಿಗಳ ಮೂಲಕ ಹರಡುತ್ತದೆ ಎಂದು ಪ್ರಾಥಮಿಕ ಸಂಶೋಧನೆಗಳು ತಿಳಿಸಿವೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ)ವುಕೊರೊನಾ ವೈರಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಳೆದ ಜನವರಿಯಲ್ಲಿ ಹಲವು ಪೋಸ್ಟರ್‌ಗಳನ್ನು ಟ್ವೀಟ್‌ ಮಾಡಿತ್ತು.

ವಿಶ್ವ ಆರೋಗ್ಯ ಸಂಸ್ಥೆ, ಚೀನಾ, ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳುಕೊರೊನಾ ವೈರಸ್ ಕುರಿತಂತೆ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಇದುವರೆಗೂ ಪರಿಣಾಮಕಾರಿ ಲಸಿಕೆ ಅಥವಾ ಔಷಧಿಯನ್ನು ಸಂಶೋಧನೆ ಮಾಡಲಾಗಿಲ್ಲ. ಪ್ರಸ್ತುತ ಆ್ಯಂಟಿಬಯೋಟಿಕ್‌ ಮಾದರಿಯ ಔಷಧಿಗಳು ಮತ್ತು ಇತರೆ ಜೀವರಕ್ಷಕ ಸಾಧನಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ವೈರಸ್‌ ಸೋಂಕಿನಲಕ್ಷಣಗಳು...

* ಕೆಮ್ಮು

* ಜ್ವರ

* ಸೀನುವುದು

* ಉಸಿರಾಟ ಸಮಸ್ಯೆ

* ವಾಂತಿ ಮತ್ತು ಭೇಧಿ (ಕೆಲವು ರೋಗಿಗಳಲ್ಲಿ ಮಾತ್ರ)

* ರೋಗಿಗಳಲ್ಲಿಸೋಂಕುನಿಯಂತ್ರಣಕ್ಕೆ ಬಾರದಿದ್ದಾಗ ನ್ಯುಮೋನಿಯಾ ಹಾಗೂ ಕಿಡ್ನಿ ವೈಪಲ್ಯ ಉಂಟಾಗಿಸಾವು ಸಂಭವಿಸುತ್ತದೆ.

ಹರಡುವ ವಿಧಾನ

* ಸೋಂಕಿತರ ನೇರ ಸಂಪರ್ಕದಿಂದ ಈ ವೈರಸ್‌ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು

* ಸೋಂಕಿತರ ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಇತರರಿಗೆ ಹಬ್ಬುವುದು

* ಸೋಂಕಿತರು ಬಳಸಿದ ವಸ್ತುಗಳನ್ನು ಇತರರು ಬಳಸಿದರೆ (ಕರವಸ್ತ್ರ, ಟವೆಲ್‌, ವಸ್ತ್ರ, ಇತ್ಯಾದಿ) ಅವರಿಗೂ ಹರಡುವ ಸಾಧ್ಯತೆ

* ಮೂಗು, ಬಾಯಿ, ಕಣ್ಣಿನ ಮೂಲಕ ಕೊರೊನಾ ವೈರಸ್‌ ಸುಲಭವಾಗಿ ದೇಹ ಸೇರುವುದು

ಮುನ್ನೆಚ್ಚರಿಕೆ ಕ್ರಮಗಳು...

* ಪದೇ ಪದೇ ಸಾಬೂನು ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದು.

* ಕೈ ತೊಳೆಯದೇ ಕಣ್ಣು, ಬಾಯಿ, ಮೂಗನ್ನು ಮುಟ್ಟದೇ ಇರುವುದು.

* ಸೋಂಕಿತರಿಂದ ಸಾಧ್ಯವಾದಷ್ಟು ದೂರ ಇರುವುದು.

* ಮುಖಗವಸು ಅಥವಾ ಮಾಸ್ಕ್‌ಬಳಕೆ ಮಾಡುವುದು

* ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಬೇಕು

* ವನ್ಯಜೀವಿಗಳು ಹಾಗೂ ಫಾರ್ಮ್‌ಗಳಲ್ಲಿ ಬೆಳೆಸಿರುವ ಪ್ರಾಣಿಗಳನ್ನು ಮುಟ್ಟುವಾಗ ಸುರಕ್ಷಿತಾ ಕವಚಗಳನ್ನು ಬಳಕೆ ಮಾಡುವುದು.

* ಶೀತ, ನೆಗಡಿ, ಜ್ವರ ಕಾಣಿಸಿಕೊಂಡರೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು.

* ಮೇಲಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.