ADVERTISEMENT

ಸಂಧಿವಾತ ಸಮಸ್ಯೆ ಸಂವಾದ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:00 IST
Last Updated 19 ನವೆಂಬರ್ 2018, 20:00 IST
ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘದ ವೆಬ್‌ಸೈಟ್‌ಗೆ ಭಾರತೀಯ ರುಮಟಾಲಜಿ ತಜ್ಞ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ದೆಬಸಿಸ್ ದಂಡ ಚಾಲನೆ ನೀಡಿದರು.
ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘದ ವೆಬ್‌ಸೈಟ್‌ಗೆ ಭಾರತೀಯ ರುಮಟಾಲಜಿ ತಜ್ಞ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ದೆಬಸಿಸ್ ದಂಡ ಚಾಲನೆ ನೀಡಿದರು.   

ನಮ್ಮಲ್ಲಿಶೇ20ರಷ್ಟು ಜನರು ಸಂಧಿವಾತ ಸಮಸ್ಯೆಯಿಂದ ನರಳುತ್ತಿದ್ದಾರೆ.ಆದರೆ ಅದಕ್ಕೆ ತಕ್ಕ ತಜ್ಞ ವೈದ್ಯರ ಕೊರತೆ ಇದೆ.ಅಲ್ಲದೆ,ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಚಿಕಿತ್ಸಾ ಘಟಕಗಳಿಲ್ಲ.ರೋಗಿಗಳಿಗೆ ಸೂಕ್ತವಾದ ಮತ್ತು ಅಗತ್ಯವಾದ ಮಾಹಿತಿ,ಜಾಗೃತಿ ಹಾಗೂ ಚಿಕಿತ್ಸೆಗೆ ಇದರಿಂದ ತೊಡಕುಂಟಾಗುತ್ತಿದೆ.

ಆಸ್ಪತ್ರೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಸುಸಜ್ಜಿತವಾದ ಘಟಕಗಳನ್ನು ಆರಂಭಿಸುವುದು ಇಂದಿನ ಆಗತ್ಯ.ಈ ಬಗ್ಗೆ ಚರ್ಚೆ, ಸಂವಾದಗಳು ನಡೆದದ್ದು ನಗರದ ಐಪಿಐ ಭವನದಲ್ಲಿಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘ ಏರ್ಪಡಿಸಿದ್ದಸಂಧಿವಾತ ರೋಗಿಗಳ ಸಮಾವೇಶದಲ್ಲಿ.

‘ಸಂಧಿವಾತ ಔಷಧದ ಬೆಲೆಯೂ ದುಬಾರಿಯಾಗಿದೆ.ಔಷಧ ತಯಾರಿಕೆಯ ಉತ್ಪಾದನಾ ವೆಚ್ಚ ಕಡಿಮೆ ಇದ್ದರೂ,ಔಷಧ ಬೆಲೆ ಮಾತ್ರ ನಿಯಂತ್ರಣಕ್ಕೆ ಸಿಗುತ್ತಿಲ್ಲ’ ಎಂದು ಭಾರತೀಯ ರುಮಟಾಲಜಿ ತಜ್ಞ ವೈದ್ಯರ ಸಂಘದರಾಷ್ಟ್ರೀಯ ಅಧ್ಯಕ್ಷಡಾ.ದೆಬಸಿಸ್ ದಂಡ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಸಂಧಿವಾತ ಘಟಕಗಳಿಗೆ ಪ್ರೋತ್ಸಾಹ ನೀಡುವಂತೆ,ಔಷಧಗಳ ಬೆಲೆಯನ್ನು ನಿಯಂತ್ರಿಸುವಂತೆರುಮಟಾಲಜಿ ಸಂಘದಿಂದ ಸರ್ಕಾರಕ್ಕೆ ಮನವಿ ಮಾಡಬೇಕು’ ಎಂದು ಅವರು ಅಭಿಪ್ರಾಯ ಪಟ್ಟರು.

ಇದೇ ವೇಳೆ ಸಂಧಿವಾತ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು,ತಜ್ಞರು ಮತ್ತು ರೋಗಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡುವwww.irakarnataka.orgವೆಬ್‌ಸೈಟ್ ಉದ್ಘಾಟನೆ ಮಾಡಲಾಯಿತು.ರೋಗಿಗಳು ಹಾಗೂ ಸಂಬಂಧಿಕರು ಮತ್ತು ತಜ್ಞವೈದ್ಯರು ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

ಹಿರಿಯ ಸಂಧಿವಾತ ತಜ್ಞ ಡಾ.ಮಹೇಂದ್ರನಾಥ್ ತಮ್ಮ ಐದು ದಶಕಗಳ ಅನುಭವನ್ನು ಹಂಚಿಕೊಂಡರು. ‘ಇತ್ತೀಚಿಗೆ ಆಗಿರುವ ಸಂಶೋಧನೆಗಳಿಂದ ಸಂಧಿವಾತ ರೋಗದ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.ಇದು ಸಂತಸದ ಸಂಗತಿ.ಆದರೆ ಇದನ್ನು ಪ್ರತಿಯೊಬ್ಬ ರೋಗಿಗೂ ತಲುಪುವಂತೆ ಮಾಡುವ ಕೆಲಸವಾಗಬೇಕು’ ಎಂದರು.

ಸಮಾವೇಶದಲ್ಲಿ ಸುಮಾರು100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ವಿಚಾರವಿನಿಮಯ ಮಾಡಿಕೊಂಡರು.

ಬೆಳಗಾವಿ,ಹುಬ್ಬಳ್ಳಿ,ಬಳ್ಳಾರಿ,ತುಮಕೂರು,ಮೈಸೂರು,ಕೋಲಾರ ಮುಂತಾದ ಜಿಲ್ಲೆಗಳಿಂದ ರೋಗಿಗಳು ಆಗಮಿಸಿದ್ದರು. ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ.ಧರ್ಮಾನಂದ್,ಜಂಟಿ-ಕಾರ್ಯದರ್ಶಿ ಡಾ.ನಾಗರಾಜ. ಎಸ್., ಹಿರಿಯ ಸಂಧಿವಾತ ತಜ್ಞ ಡಾ.ರಮೇಶ್ ಜೋಯಿಸ್ ಸೇರಿದಂತೆ ಅನೇಕ ವೈದ್ಯರು ರೋಗಿಗಳಿಗೆ ಮಾಹಿತಿ ಮತ್ತು ಸಲಹೆಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.