ADVERTISEMENT

ವೀರ್ಯ ದಾನ ಮಾಡಿ 129 ಮಕ್ಕಳ ಜನನಕ್ಕೆ ಕಾರಣರಾದ 66 ವರ್ಷದ ಕ್ಲೈವ್ ಜೋನ್ಸ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 10:19 IST
Last Updated 27 ಜನವರಿ 2022, 10:19 IST
ಕ್ಲೈವ್ ಜೋನ್ಸ್
ಕ್ಲೈವ್ ಜೋನ್ಸ್   

ಜಗತ್ತಿನ ಸಮೃದ್ಧ ವೀರ್ಯ ದಾನಿಯೊಬ್ಬರು ತಮ್ಮಆರೋಗ್ಯವಂತ ವೀರ್ಯ ದಾನ ಮಾಡುವ ಮೂಲಕ 129 ಮಕ್ಕಳ ಜನನಕ್ಕೆ ಕಾರಣರಾಗಿದ್ದಾರೆ.

ಇಂಗ್ಲೆಂಡ್‌ ದೇಶದ ನಿವಾಸಿ ಕ್ಲೈವ್ ಜೋನ್ಸ್​ ವೀರ್ಯ ದಾನಿಯಾಗಿದ್ದಾರೆ. ತಾವು ಜಗತ್ತಿನ ಸಮೃದ್ಧ ವೀರ್ಯ ದಾನಿ ಎಂದು ಹೇಳಿಕೊಂಡಿದ್ದಾರೆ. 66 ವರ್ಷದ ಕ್ಲೈವ್ ಜೋನ್ಸ್ ನೀಡಿರುವ ವೀರ್ಯದಿಂದ 129 ಮಕ್ಕಳ ಜನನವಾಗಿದೆ. ಇನ್ನು 9 ಶಿಶುಗಳು ಗರ್ಭದಲ್ಲಿವೆ ಎಂದು ಇಲ್ಲಿನ ’ಮೇಲ್ ಆನ್‌ಲೈನ್‌’ ಮಾಧ್ಯಮಕ್ಕೆನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

'ವೀರ್ಯ ಬೇಕಿರುವವರನ್ನು ಫೇಸ್‌ಬುಕ್‌ ಮೂಲಕ ಸಂಪರ್ಕ ಮಾಡಿ ಅವರು ಸ್ಥಳಕ್ಕೆ ವಿಶೇಷವಾಗಿ ಸಿದ್ಧಪಡಿಸಿಕೊಂಡಿರುವ ವಾಹನದ ಮೂಲಕ ತೆರಳಿ ವೀರ್ಯ ದಾನ ಮಾಡಲಾಗುವುದು. ಒಟ್ಟು 10 ವೈದ್ಯಕೀಯ ವಿಧಾನಗಳ ಮೂಲಕ ವೀರ್ಯ ನೀಡುತ್ತೇನೆ' ಎಂದು ಜೋನ್ಸ್‌ ಹೇಳಿದ್ದಾರೆ.

ADVERTISEMENT

ವೃತ್ತಿಯಲ್ಲಿ ಗಣಿತ ಶಿಕ್ಷಕರಾಗಿರುವ ಜೋನ್ಸ್‌ ಅವರು ಒಟ್ಟು 150 ಮಕ್ಕಳ ಜನನಕ್ಕೆ ವೀರ್ಯ ದಾನ ಮಾಡಬೇಕು ಎಂಬ ಆಕಾಂಕ್ಷೆ ಹೊಂದಿದ್ದಾರೆ. ನನ್ನ ವೀರ್ಯದಿಂದ ಮಕ್ಕಳನ್ನು ಪಡೆದ ದಂಪತಿ ಫೇಸ್‌ಬುಕ್‌ನಲ್ಲಿ ಮಗುವಿನ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಆ ಚಿತ್ರಗಳನ್ನುನೋಡಿಸಂತೋಷ ಪಡುತ್ತೇನೆ ಎಂದು ಜೋನ್ಸ್‌ ಹೇಳಿದ್ದಾರೆ.

ಜೋನ್ಸ್‌ ಕುರಿತಂತೆ ಇಂಗ್ಲೆಂಡ್‌ , ಅಮೆರಿಕ ಹಾಗೂ ಯುರೋಪ್‌ ದೇಶದ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಸದ್ಯ ಅವರು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಇಂಟರ್ನೆಟ್‌ನಲ್ಲಿ ಟ್ರೆಂಡ್‌ ಆಗಿದ್ದಾರೆ.

ನೆಟ್ಟಿಗರುಕ್ಲೈವ್ ಜೋನ್ಸ್​​ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳಿಲ್ಲದದಂಪತಿಗಳಿಗೆ ಅವರು ನೆರವಾಗಿದ್ದಾರೆಎಂದು ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಸರಿಯಾದ ವೈದ್ಯಕೀಯ ಉಪಕರಣಗಳು ಇಲ್ಲದೇ ವ್ಯಾನ್‌ನಲ್ಲಿ ವೀರ್ಯ ಸಂಗ್ರಹ ಮಾಡುವುದು ಅಪಾಯಕಾರಿಯಾಗಬಹುದು. ಸೂಕ್ತ ವೈದ್ಯಕೀಯ ಮಾರ್ಗದರ್ಶನ ಪಡೆದುಕೊಳ್ಳಿ ಎಂದು ವೈದ್ಯರು ಜೋನ್ಸ್‌ಗೆ ಮನವಿ ಮಾಡಿದ್ದಾರೆ. ಹಾಗೇ ವೀರ್ಯ ಪಡೆಯುವ ದಂಪತಿಗಳಿಗೆಈ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ನ್ಯೂರ್ಯಾಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.