ADVERTISEMENT

ದಿನ ಭವಿಷ್ಯ | 2023 ಜುಲೈ 26: ಈ ರಾಶಿಯವರು ಬೇರೆಯವರು ಮಾಡಿದ ಉಪಕಾರ ಮರೆಯಬೇಡಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಜುಲೈ 2023, 19:30 IST
Last Updated 25 ಜುಲೈ 2023, 19:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನಿಮ್ಮ ಮೇಲೆ ಪ್ರೀತಿ ತೋರಿಸಲು ಶುರು ಮಾಡಿದ ನೆಂಟರ ಬುದ್ಧಿಯು ಕಪಟವಾದದ್ದು ಎಂದು ನೀವು ಅರಿಯಬೇಕು. ಮಕ್ಕಳ ಮನೆಯಲ್ಲಿ ಪುಣ್ಯದ ಫಲವಾಗಿ ಸುಖ ಸಮೃದ್ಧಿಗಳಿರುತ್ತವೆ.
  • ವೃಷಭ
  • ಕೆಲಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ಹಲವಾರು ತರಬೇತಿಗಳನ್ನು ನೀವೇ ತೆಗೆದುಕೊಳ್ಳಲು ಯೋಚನೆ ನಡೆಸುವಿರಿ. ರಿಯಾಯಿತಿಯ ವಸ್ತ್ರ ಖರೀದಿಯಿಂದಾಗಿ ಹಣವನ್ನು ಉಳಿತಾಯ ಮಾಡುವಿರಿ.
  • ಮಿಥುನ
  • ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಹೊಂದಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವವರು ಸಣ್ಣ ಕಂಪನಿಗಳಲ್ಲಿ ಉದ್ಯೋಗ ಅನುಭವವನ್ನು ಹೊಂದಿದ ನಂತರ ಅಂಥ ಪ್ರಯತ್ನವನ್ನು ಮಾಡುವುದು ಸೂಕ್ತವಾದದ್ದು.
  • ಕರ್ಕಾಟಕ
  • ಮನೆಯಲ್ಲಿ ದೇವರ ಪ್ರಾರ್ಥನೆಯನ್ನು ನಡೆಸಿದ ನಂತರ ದೊರೆತ ಸಂತಾನಭಾಗ್ಯದ ಫಲವಾಗಿ ಹರ್ಷ ತುಂಬಿರುತ್ತದೆ. ಔದ್ಯೋಗಿಕವಾಗಿ ಅನುಭವಸ್ಥರಿಂದ ಕೇಳಿ ಪಡೆದ ಸಲಹೆ ಸೂಚನೆಗಳಿಂದಾಗಿ ಅಭಿವೃದ್ಧಿ ಹೊಂದುವಿರಿ.
  • ಸಿಂಹ
  • ಕಲ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವ ರೀತಿಯಲ್ಲಿ ವಿವಾಹವು ನಿಗದಿಯಾಗುವ ಸಾಧ್ಯತೆ ಇರುವುದು. ಒಬ್ಬ ವ್ಯಕ್ತಿಯು ನಿಮ್ಮ ಮೇಲೆ ನಂಬಿಕೆ ಇಟ್ಟು ಮಾಡಿದಂಥ ಉಪಕಾರವನ್ನು ಮರೆಯಬೇಡಿ.
  • ಕನ್ಯಾ
  • ನಿಶ್ಚಿತ ಕಾರ್ಯಗಳು ಪ್ರಕೃತಿಯಲ್ಲಿನ ಅನಿಶ್ಚಿತ ಬದಲಾವಣೆಗಳಿಂದಾಗಿ ಹಿಂದುಮುಂದಾಗಬಹುದು. ವಾತಾವರಣದ ಫಲವಾಗಿ ಮಂಡಿ ಹಾಗೂ ಸಂದುಗಳಲ್ಲಿ ನೋವು ಕಾಣಿಸುವುದು. ಆಹಾರದಲ್ಲಿ ಅದನ್ನು ಸರಿಪಡಿಸಿಕೊಳ್ಳಿ.
  • ತುಲಾ
  • ಬದಲಾದ ನಿಮ್ಮ ವೇಳಾಪಟ್ಟಿಗೆ ಸರಿಯಾಗುವಂತೆ ನಡೆದುಕೊಳ್ಳುವ ಪತ್ನಿಯ ಮೇಲೆ ಗೌರವ ಹೆಚ್ಚಾಗುವುದು. ಫಲದಾಯಿಕೆಯಾದ ರಾಜರಾಜೇಶ್ವರಿಯನ್ನು ಪ್ರಾರ್ಥಿಸಿ , ಅಭೀಷ್ಟಗಳನ್ನು ನೆರವೇರಿಸಿಕೊಳ್ಳಿ.
  • ವೃಶ್ಚಿಕ
  • ಬೆಲೆಬಾಳುವ ವಸ್ತುವಿನ ಖರೀದಿಯಿಂದ ಮನೆಯಲ್ಲಿ ತಾಯಿ ಅಥವಾ ಹಿರಿಯರು ಮುನಿಸಿಕೊಳ್ಳುವರು. ನಿಮ್ಮ ಕೆಲಸಕ್ಕೆ ಅನಿರೀಕ್ಷಿತ ಬದಲಾವಣೆ ಬರಬಹುದು. ಕೃಷಿ ಚಟುವಟಿಕೆಗಳು ವೃಷ್ಟಿಯಿಂದ ಚುರುಕುಗೊಳ್ಳುವವು.
  • ಧನು
  • ಕಾರಣಾಂತರದಿಂದ ಸಿಕ್ಕಂಥ ಬಿಡುವಿನ ಸಮಯ ಸದುಪಯೋಗ ಪಡಿಸಿಕೊಳ್ಳುವಿರಿ. ಜೊತೆ ಸ್ಪರ್ಧಿಸುತ್ತಿದ್ದವರಿಗೆ ಎಚ್ಚರ ತಪ್ಪಿದಲ್ಲಿ ಜಯ ಸಿಗುವುದು. ಅಧಿಕ ಕೊಬ್ಬಿನ ಅಂಶದ ಆಹಾರವನ್ನು ತ್ಯಜಿಸಿ.
  • ಮಕರ
  • ಪ್ರವಾಸಕ್ಕಾಗಿ ಹೋದ ಪ್ರದೇಶದಲ್ಲಿ ಕೆಲವು ತೊಂದರೆಗಳಾಗುವಂಥ ಸಂದರ್ಭಗಳಿವೆ. ಮನೆಬದಿಯ ಜವಾಬ್ದಾರಿಗಳು ಅಣ್ಣನ ಅನಾರೋಗ್ಯದಿಂದ ಹೆಚ್ಚಾಗುವುದು. ನಟನೆ ಮಾಡುವವರಿಗೆ ಉತ್ತಮ ಅವಕಾಶಗಳಿವೆ.
  • ಕುಂಭ
  • ಪ್ರಕೃತಿಸಹಜವಾದ ಅವಿನಾಭಾವ ಸಂಬಂಧಗಳನ್ನು ಕಂಡು ನಿಮ್ಮಲ್ಲಿನ ಸಾಹಿತ್ಯ ಅಥವಾ ಚಿತ್ರಕಲಾ ಪ್ರಜ್ಞೆಯು ಎಚ್ಚೆತ್ತುಕೊಳ್ಳುವುದು. ಪತಿ ಪತ್ನಿಯರಲ್ಲಿ ಸಾಮರಸ್ಯ ಇರುವುದು. ಅಧಿಕಾರಿಗಳಿಂದ ಪ್ರಶಂಸೆ ಮಾತು ಕೇಳುವಿರಿ.
  • ಮೀನ
  • ವಾತ ಅಥವಾ ಪಿತ್ತದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಾಣಾಯಾಮ ಯೋಗದಂಥ ಮಾರ್ಗ ಉತ್ತಮವಾದುದು. ಬಂಧು ಮಿತ್ರರಲ್ಲಿ ಕಲಹಗಳು ಆಗದಂತೆ ಎಚ್ಚರವಹಿಸಿರಿ.
  • ಮೇಷ

  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.