ADVERTISEMENT

ದಿನ ಭವಿಷ್ಯ: ಸೌಜನ್ಯ, ಸರಳತೆಯಿಂದ ಹುದ್ದೆಗೆ ಮೆರುಗು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಜನವರಿ 2024, 18:30 IST
Last Updated 3 ಜನವರಿ 2024, 18:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಜವಾಬ್ದಾರಿಯನ್ನು ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ. ಪ್ರಭಾವಿ ವ್ಯಕ್ತಿಗಳ ಜತೆಗಿನ ಒಡನಾಟ ಮತ್ತು ಓಡಾಟ ಹೆಚ್ಚಿನ ಸ್ಥಾನಮಾನ ತಂದು ಕೊಡಲಿದೆ.
  • ವೃಷಭ
  • ಈ ದಿನ ಎಂಥ ಅನಿವಾರ್ಯ ಪರಿಸ್ಥಿತಿಗೂ ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ನಿಮ್ಮ ಕೆಲಸಕ್ಕೆ ಸೋಮಾರಿತನ ಅಥವಾ ಸಮಯದ ಅಭಾವ ಎದುರಾಗುತ್ತದೆ.
  • ಮಿಥುನ
  • ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕಾಗುವುದು. ಧೈರ್ಯಮಾಡಿ ಕಾರ್ಯೋನ್ಮುಖರಾದರೆ ಅಭಿವೃದ್ಧಿ ಹೊಂದುವಿರಿ. ಪ್ರಯತ್ನಕ್ಕಿಂತ ಮಿಗಿಲಾದ ಧನಾದಾಯ ಇರಲಿದೆ.
  • ಕರ್ಕಾಟಕ
  • ಸಂತೋಷಕ್ಕೆ ನಿಮ್ಮ ಹತ್ತಿರದವರಿಂದ ತಡೆ ಉಂಟಾಗಬಹುದು. ಹೊಸ ಜನರ ಸಂಪರ್ಕವನ್ನು ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿರಿ. ಶ್ರೀರಾಮನಾಮ ಭಜನೆಯಿಂದ ಕಾರ್ಯಗಳ ಅಭಿವೃದ್ಧಿಯಾಗುವುದು.
  • ಸಿಂಹ
  • ದುರಭ್ಯಾಸಗಳಿಗೆ ಒಳಗಾಗದಂತೆ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಿ. ಉಳಿತಾಯದ ಹಣದ ಹೊಂದಾಣಿಕೆಯಿಂದ ಸಾಲ ಮಾಡುವ ಪರಿಸ್ಥಿತಿ ದೂರಾಗುವುದು. ವ್ಯವಹಾರದಲ್ಲಿ ಪೈಪೋಟಿ ಹೆಚ್ಚಲಿದೆ.
  • ಕನ್ಯಾ
  • ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಂದ ಮಾನಸಿಕ ಅಸಮಾಧಾನ ಕಾಡಲಿದೆ. ಒಳಾಂಗಣ ವಿನ್ಯಾಸಕಾರರಿಗೆ ಬೇಡಿಕೆ ಇರುವುದು. ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಹೆಚ್ಚಿನ ಬಂಡವಾಳ ಹೂಡಬಹುದು.
  • ತುಲಾ
  • ಪರಿಶ್ರಮವಿಲ್ಲದೇ ಕೆಲಸ ದೊರೆತಿದ್ದಕ್ಕೆ ಸಂತಸವಿದ್ದು ಹೊಸ ಸಂಸ್ಥೆಯಲ್ಲಿನ ಕೆಲಸಗಳು ಸುಲಭ ಮತ್ತು ಸಂತೋಷಮಯ ಎನಿಸುವುದು. ಕೆಲವೊಂದು ಬದಲಾವಣೆಯನ್ನು ರೂಢಿಸಿಕೊಳ್ಳಬೇಕಾಗುವುದು.
  • ವೃಶ್ಚಿಕ
  • ಕಷ್ಟ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸಕಾಲಕ್ಕೆ ಸ್ನೇಹಿತರಿಂದ ಹಣದ ಸಹಾಯ ಸಿಗಲಿದೆ. ಸರ್ಕಾರದ ಕಂಟ್ರಾಕ್ಟ್ ಕೆಲಸ ದೊರೆತು ಸಂತೋಷವಾಗುವುದು. ಫಲಿತಾಂಶವು ಬರಲಿದೆ.
  • ಧನು
  • ಇನ್ನೊಬ್ಬರ ಮಾತುಗಳನ್ನು ಆಲಿಸಿಕೊಂಡು ವಿಚಾರಗಳನ್ನು ತೀರ್ಮಾನಿಸುವುದಕ್ಕಿಂತ ಸ್ವತಃ ಪರೀಕ್ಷೆ ನಡೆಸಿ ತೀರ್ಮಾನಕ್ಕೆ ಬರುವುದು ಸರಿಯಾದ ಮಾರ್ಗವೆನಿಸುತ್ತದೆ. ಸೌಜನ್ಯ, ಸರಳತೆಯಿಂದ ಹುದ್ದೆಗೆ ಮೆರುಗು.
  • ಮಕರ
  • ಕೇವಲ ವ್ಯಾವಹಾರಿಕವಾಗಿ ಅಲ್ಲದೆ ಪಾರಮಾರ್ಥಿಕ ದೃಷ್ಟಿಯಲ್ಲಿಯೂ ವಿಷಯಗಳನ್ನು ಯೋಚನೆ ಮಾಡುವುದು ಉತ್ತಮ. ವೃತ್ತಿಗೆ ಹೊರತಾದ ಕೆಲಸ ಮಾಡುವುದರಲ್ಲಿ ಆಸಕ್ತಿ ಹೆಚ್ಚಲಿದೆ. ಹಣಕಾಸಿನಲ್ಲಿ ಹಿಡಿತವಿರಲಿ
  • ಕುಂಭ
  • ಗುರಿ ಸಾಧನೆಯತ್ತ ಆಸಕ್ತಿಯಿಂದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಹೆಚ್ಚಿನ ಪ್ರಯತ್ನಗಳಿಂದ ಉತ್ತಮ ಉದ್ಯೋಗವನ್ನು ಗಳಿಸಿಕೊಳ್ಳಬಹುದು. ಕಿರು ಪ್ರವಾಸದ ಮಾತು ಬರಲಿದೆ.
  • ಮೀನ
  • ಲೆಕ್ಕಚಾರದ ಜವಾಬ್ದಾರಿಯನ್ನು ಹೊತ್ತಿರುವವರು ಈ ದಿನ ಹೆಚ್ಚಿನ ಗಮನದಿಂದ ಕೆಲಸ ನಿರ್ವಹಿಸಿ. ಇಲ್ಲವಾದಲ್ಲಿ ಸಮಸ್ಯೆಗೆ ಸಿಲುಕುವಂತಾಗುವುದು. ಕಬ್ಬಿಣದ ವ್ಯವಹಾರದ ನಿರ್ವಹಣೆಗೆ ಸಾಲ ಮಾಡಬೇಕಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.