ADVERTISEMENT

ದಿನ ಭವಿಷ್ಯ: ದ್ವಿಚಕ್ರ ವಾಹನ ಮಾರಾಟಗಾರರಿಗೆ ಲಾಭ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಆಗಸ್ಟ್ 2024, 23:30 IST
Last Updated 4 ಆಗಸ್ಟ್ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಯಶಸ್ಸು ಹಿರಿಯರ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ತರುತ್ತದೆ. ನಿರೀಕ್ಷಿಸಿದ ಕಾರ್ಯಗಳು ಅವಿಘ್ನವಾಗಿ ನೆರವೇರಿ ನೆಮ್ಮದಿ ಉಂಟಾಗುವುದು. ದ್ವಿಚಕ್ರ ವಾಹನ ಮಾರಾಟಗಾರರಿಗೆ ಲಾಭವಿದೆ.
  • ವೃಷಭ
  • ವೃತ್ತಿಗಿಂತ ಪ್ರವೃತ್ತಿಯಲ್ಲಿ ಆಸಕ್ತಿ ಹೆಚ್ಚಲಿದೆ. ಅದರಲ್ಲಿ ಹೆಚ್ಚಿನ ಲಾಭವಿದೆ. ಬೆಂಕಿಯಿಂದ ಅನಾಹುತ ಸಂಭವಿಸಬಹುದು, ಜಾಗ್ರತರಾಗಿರಿ. ಸಾಮಾಜಿಕ ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ.
  • ಮಿಥುನ
  • ನಿರುದ್ಯೋಗಿಗಳ ಅಲೆದಾಟ ತಪ್ಪಿ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ. ಸತ್ಕಾರ್ಯಗಳಲ್ಲಿ ಬಂಧುಗಳ ಸಕ್ರಿಯ ಪಾತ್ರವಿದ್ದು ಸಹಕರಿಸುವರು. ಕೋರ್ಟು ವ್ಯವಹಾರಗಳ ಓಡಾಟ ತಪ್ಪಲಿದೆ.
  • ಕರ್ಕಾಟಕ
  • ಆದಾಯದಲ್ಲಿ ಸಣ್ಣ ಹೊಡೆತ ಎದುರಿಸುವಂತಾಗಬಹುದು. ಅದರ ಕಾರಣವನ್ನು ಹುಡುಕಿ ಪಾಠದ ರೀತಿಯಲ್ಲಿ ತೆಗೆದುಕೊಳ್ಳುವುದು ಉತ್ತಮ. ವಾಹನ ರಿಪೇರಿಗಾಗಿ ಖರ್ಚು ಮಾಡಬೇಕಾಗುವುದು.
  • ಸಿಂಹ
  • ಮನೆತನದ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿರುವವರಿಗೆ ಹಿರಿಯರಿಂದ ಪಡೆದ ಸಲಹೆಯು ಹೊಸ ಬುನಾದಿಯಾಗಲಿದೆ.  ಹವ್ಯಾಸಕ್ಕೆ ಬಿಡುವು ಮಾಡಿಕೊಳ್ಳುವಿರಿ.
  • ಕನ್ಯಾ
  • ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಕಲ್ಪನೆಗಿಂತ ಅಧಿಕ ಕಮಿಷನ್‌ ದೊರೆಯಲಿದೆ. ಹೊಸ ಮನೆಯ ನಿರ್ಮಾಣ ಕಾರ್ಯಗಳು ಚುರುಕುಗತಿಯಲ್ಲಿ ಸಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ.
  • ತುಲಾ
  • ವಿದ್ಯಾರ್ಥಿಗಳಿಗೆ  ನಿರ್ಮಿಸಿಕೊಂಡ ಅನುಕೂಲಕರ ವಾತಾವರಣವು ವಿದ್ಯಾಭ್ಯಾಸದಲ್ಲಿ ಮುನ್ನಡೆ ತಂದುಕೊಡಲಿದೆ. ವೈದ್ಯರಿಗೆ ವೃತ್ತಿಯಲ್ಲಿ ಸವಾಲೆನಿಸುವ ವಿಷಯಗಳಲ್ಲಿ ಯಶಸ್ಸು ಕಂಡುಬರಲಿದೆ.
  • ವೃಶ್ಚಿಕ
  • ಸಣ್ಣ ಪುಟ್ಟ ವಿಚಾರವಾಗಿ ಅಥವಾ ಇತರರ ಮಾತುಗಳಿಗೆ ಕಿವಿ ಕೊಟ್ಟು ಅತ್ತೆ ಸೊಸೆಯ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ವೈಯಕ್ತಿಕ ಕೆಲಸಗಳಿಗೆ ನೀವಂದುಕೊಂಡ ಯಾವುದೇ ಅಡಚಣೆ ಇರುವುದಿಲ್ಲ.
  • ಧನು
  • ಕೆಲಸ ಕಾರ್ಯಗಳ ಬಗ್ಗೆ ನಿಗಾ ಕೊಡುವಂತೆ ಅಧಿಕಾರಿಗಳಿಂದ ತೀಕ್ಷ್ಮವಾದ ಸಂದೇಶ ಬರಲಿದೆ. ಧಾನ್ಯಗಳ ಮಾರಾಟಗಾರರಿಗೆ ಉತ್ತಮ ಲಾಭ. ಮನಸ್ಸಿನ ಭಾವನೆಗಳನ್ನು ಹೊರ ಹಾಕುವಂತಾಗಲಿದೆ.
  • ಮಕರ
  • ಜವಾಬ್ದಾರಿಯುಕ್ತ ನಡೆ, ದಿಟ್ಟತನದ ಜೊತೆಗೆ ಸ್ವಲ್ಪ ತಂತ್ರಗಾರಿಕೆ ತೋರಿದರೆ ಅಧಿಕಾರಿಗಳ ಗಮನ ಸೆಳೆಯುವುದು ಕಷ್ಟ ಆಗುವುದಿಲ್ಲ. ದೇವರ ಸೇವೆಯಿಂದ ಕೌಟುಂಬಿಕ ಸಮಸ್ಯೆಗಳು ದೂರವಾಗಲಿವೆ.
  • ಕುಂಭ
  • ಸ್ವಶಕ್ತಿಯಿಂದ ಜೀವನದಲ್ಲಿ ಮುಂಬರುವ ದಾರಿ ಆರಿಸಿಕೊಳ್ಳಿ. ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ಮಿತ್ರರಿಂದ ಸಹಕಾರ ಒದಗಿ ಬರಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಬೇಕಾದೀತು.
  • ಮೀನ
  • ಪಿತ್ರಾರ್ಜಿತ ಆಸ್ತಿಗಳ ವಿಚಾರದಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಿಬರಲಿದೆ. ಧ್ಯಾನ ಮತ್ತು ಯೋಗದತ್ತ  ಗಮನ ಹರಿಸುವಿರಿ. ವೈಯಕ್ತಿಕ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುವ ಸಂಭವವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.