ದಿನ ಭವಿಷ್ಯ | ಈ ರಾಶಿಯವರು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭವನ್ನು ಪಡೆಯುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಡಿಸೆಂಬರ್ 2025, 22:06 IST
Last Updated 11 ಡಿಸೆಂಬರ್ 2025, 22:06 IST
ದಿನ ಭವಿಷ್ಯ
ಮೇಷ
ಎಲ್ಲಾ ಕಾರ್ಯಗಳನ್ನು ಸಫಲಗೊಳಿಸಿಕೊಳ್ಳಲು ಪ್ರಯತ್ನಿಸಬೇಕು, ಅದರಿಂದಾಗಿ ಸ್ಪರ್ಧಾತ್ಮಕ ವಾತಾವರಣ ಇರಲಿದೆ. ಸಂಗಾತಿಯ ಜೊತೆ ಖುಷಿಯ ಸಮಯವನ್ನು ಕಳೆಯುವ ಅವಕಾಶ ದೊರೆಯುವುದು.
ವೃಷಭ
ಇದುವರೆಗೆ ನೀವು ಮಾಡಿ ಮುಗಿಸಬೇಕೆಂದು ಆಲೋಚಿಸಿದ್ದ ಮನೆಯ ಕೆಲಸಗಳನ್ನೆಲ್ಲಾ ಪೂರ್ಣಗೊಳಿಸುವಿರಿ. ಈ ದಿನದ ಕಾರ್ಯಗಳನ್ನು ಮೊದಲೇ ನಿಶ್ಚಯಿಸಿಕೊಂಡು ಕ್ರಮ ಪ್ರಕಾರವಾಗಿ ಮಾಡುವುದು ಉತ್ತಮ.
ಮಿಥುನ
ಹಲವು ಅವಕಾಶಗಳು ಸಿಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ಕಾರ್ಯ ಸಾಧನೆಗೆ ಅಧಿಕ ತಿರುಗಾಟ, ಗಣ್ಯರ ಭೇಟಿ ಅನಿವಾರ್ಯವಾಗುತ್ತದೆ. ಸಂಬಂಧಿಗಳ ಆಗಮನ ಹರ್ಷ ಉಂಟುಮಾಡುತ್ತದೆ.
ಕರ್ಕಾಟಕ
ಆತ್ಮ ಗೌರವದ ರಕ್ಷಣೆಯ ದೃಷ್ಟಿಯಿಂದ ಸಂದರ್ಭಗಳೊಡನೆ ರಾಜಿಮಾಡಿಕೊಳ್ಳುವುದು ಸೂಕ್ತ. ಹಿರಿಯರ ಆರೋಗ್ಯದ ಬಗ್ಗೆ ಯೋಚನೆ ಮಾಡಲೇಬೇಕಾಗುತ್ತದೆ. ಶೀತಬಾಧೆ ಉಂಟಾಗುವುದು.
ಸಿಂಹ
ಹಲವು ಪ್ರಯತ್ನದ ನಂತರ ಪ್ರವಾಸದ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ. ಮನೋಬಲದಿಂದ ಕಾರ್ಯ ಸಾಧಿಸಿಕೊಳ್ಳುವಿರಿ. ದೈವಾನುಗ್ರಹ ದಿಂದ ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭವನ್ನು ಪಡೆಯುವಿರಿ.
ಕನ್ಯಾ
ಆಯಾ ಋತುವಿನಲ್ಲಿ ಸಿಗುವಂತಹ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವವರು ದೊಡ್ಡ ಮಟ್ಟದಲ್ಲಿ ಸ್ವಉದ್ಯೋಗವನ್ನು ಆರಂಭ ಮಾಡಬಹುದು. ಅಪರೂಪದ ಸಮಾರಂಭಕ್ಕೆ ಶುಭಾಹ್ವಾನ ಬರಲಿದೆ.
ತುಲಾ
ನಿಮ್ಮ ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆ ಹಾಕುವುದರಿಂದ ಅಡೆತಡೆಗಳು ನಿವಾರಣೆಯಾಗಲಿವೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಾಧನೆಗೆ ಪುರಸ್ಕಾರಗಳು ದೊರಕಲಿವೆ.
ವೃಶ್ಚಿಕ
ಮೇಲಧಿಕಾರಿಗಳ ಒತ್ತಡದಿಂದ ಕೆಲಸದಲ್ಲಿ ಆಯಾಸವೆನಿಸಿದಾದರೂ ಅಧಿಕಾರಿಗಳ ಮನ ಗೆಲ್ಲುವಂತಾಗುತ್ತದೆ. ಖಾದ್ಯ ತೈಲಗಳ ಮಾರಾಟಗಾರರಿಗೆ ಲಾಭವಾಗುವುದು. ಸ್ವಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲವಿರುವುದು.
ಧನು
ಹಲವಾರು ಕಾರಣಗಳಿಗೆ ಸ್ನೇಹಿತರು ನಿಮ್ಮ ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸುವಂತಾಗುವುದು. ಆರ್ಥಿಕ ವೃದ್ಧಿ, ಆರೋಗ್ಯ ವೃದ್ಧಿ, ಆಕಸ್ಮಿಕ ಧನ ಪ್ರಾಪ್ತಿ ಯೋಗವಿದೆ.
ಮಕರ
ನ್ಯಾಯಾಲಯದಲ್ಲಿನ ವ್ಯಾಜ್ಯಗಳ ಬಗ್ಗೆ ಒಂದು ಅಂತಿಮವಾದ ನಿರ್ಧಾರವನ್ನು ತೆಗೆದುಕೊಳ್ಳಲು ವಕೀಲರ ಬಳಿ ವೈಯಕ್ತಿಕವಾಗಿ ಮಾತನಾಡಬೇಕಾಗುವುದು. ಸಹಚರರಲ್ಲಿ ವೃಥಾ ವೈರತ್ವ ಕಟ್ಟಿಕೊಳ್ಳದೆ ಕಾರ್ಯನಿರ್ವಹಿಸಿ.
ಕುಂಭ
ನಿಮ್ಮ ಸೌಭಾಗ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ವ್ರತಗಳನ್ನು ಮಾಡುವ ನಿರ್ಧಾರ ತೆಗೆದುಕೊಳ್ಳುವಿರಿ. ಮೇಲಧಿಕಾರಿಗಳು ನಿಮ್ಮ ಮೇಲಿಟ್ಟಿದ್ದ ಭರವಸೆ ಹುಸಿಯಾಗದಂತೆ ಕಾರ್ಯ ನಿರ್ವಹಿಸಲು ಅಶಕ್ತರಾಗುವ ಸಂಭವವಿದೆ.
ಮೀನ
ಉದ್ಯೋಗ ಬದಲಾವಣೆ ಮಾಡುವ ಯೋಚನೆಯು ಸರಿಯಲ್ಲ, ಇದೇ ಉದ್ಯೋಗದಲ್ಲಿ ವರಮಾನ ಹೆಚ್ಚಿಸಿಕೊಳ್ಳುವ ದಾರಿ ಹುಡುಕಿ. ವಾತಾವರಣದಲ್ಲಾಗುವ ಬದಲಾವಣೆಯು ದೇಹದ ಮೇಲೆ ಪ್ರಭಾವ ಬೀರಲಿದೆ.