ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಸವಾಲನ್ನು ಎದುರಿಸುವ ಶಕ್ತಿ ಹೆಚ್ಚಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಜುಲೈ 2024, 0:38 IST
Last Updated 12 ಜುಲೈ 2024, 0:38 IST
   
ಮೇಷ
  • ಜೀವನದ ಪ್ರಮುಖ ಘಟ್ಟವೊಂದರಲ್ಲಿ ಅನಾರೋಗ್ಯದಿಂದಾಗಿ ಸರಿಯಾದ ರೀತಿಯಲ್ಲಿ ಕ್ಷಣವನ್ನು ಅನುಭವಿಸಲು ಆಗುವುದಿಲ್ಲ. ಹರಿತವಾದ ಮಾತುಗಳು ತಾಯಿಯ ಮನಸ್ಸನ್ನು ನೋಯಿಸುವ ಸಾಧ್ಯತೆ ಇದೆ.
  • ವೃಷಭ
  • ಅತ್ಯಂತ ಆತ್ಮೀಯರಿಂದಲೇ ಭೂಮಿಯ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಮಗಳಿಂದ ಶುಭ ಸುದ್ದಿ ತಿಳಿಯುವಿರಿ. ಇಲ್ಲ ಸಲ್ಲದ ವಿಷಯಗಳಲ್ಲಿ ತಲೆ ಹಾಕಲು ಹೋಗದಿರುವುದು ಕ್ಷೇಮ
  • ಮಿಥುನ
  • ಕ್ರೂರ ಅಧಿಕಾರಿಗಳ ವಿರುದ್ಧ ತಿರುಗಿಬೀಳುವಲ್ಲಿ ಪ್ರಮುಖ ಪಾತ್ರ ವಹಿಸುವಿರಿ. ಹೊಸ ಮನೆ ಕೆಲಸಗಳ ಜವಾಬ್ದಾರಿ ನಿಮ್ಮದಾಗಿ ಮಾಡಿಕೊಳ್ಳುತ್ತಿರುವ ಕಾರಣ ಬಿಡುವಿಲ್ಲದ ದುಡಿಮೆಯ ದಿನಗಳು ನಿಮ್ಮದಾಗಲಿದೆ.
  • ಕರ್ಕಾಟಕ
  • ಭಾಗ್ಯವಂತರಾದ ನಿಮಗೆ ಹೊಸ ಯೋಜನೆಯು ಸುಲಭವೆನಿಸಲಿದೆ. ಹಲವು ದಿನಗಳ ಬಳಿಕ ಕುಟುಂಬದ ಹಿರಿಯ ವ್ಯಕ್ತಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳುವಿರಿ.
  • ಸಿಂಹ
  • ಬದಲಾವಣೆಯ ಅಲೆಯನ್ನು ನಿರೀಕ್ಷಿಸುತ್ತಿರುವ ನೀವು ಉತ್ತಮ ರೀತಿ ನೀತಿಗಳನ್ನು ಅಳವಡಿಸಿಕೊಳ್ಳುವಿರಿ. ತಮ್ಮನ ಮಕ್ಕಳ ಮದುವೆಯಲ್ಲಿ ಅತ್ಯಂತ ಹೆಚ್ಚಿನ ಓಡಾಟ ನಡೆಸುವಿರಿ.
  • ಕನ್ಯಾ
  • ಮನೆಯ ಕಟ್ಟಡದ ದುರಸ್ತಿ ಕಾರ್ಯಗಳು ಅನಿವಾರ್ಯ. ಔಷಧ ಮಾರಾಟಗಳಲ್ಲಿ ಸಂಪಾದನೆ ಹೆಚ್ಚಲಿದೆ. ಕೆಲವು ವ್ಯಕ್ತಿಗಳ ದ್ವೇಷದ ಕೃತ್ಯಗಳ ಫಲವಾಗಿ ನೀವು ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ.
  • ತುಲಾ
  • ಹಿರಿಯರಲ್ಲಿ ನಿಮ್ಮ ತಪ್ಪಿಲ್ಲದಿದ್ದರೂ ವಯಸ್ಸಿಗೆ ಬೆಲೆ ಕೊಟ್ಟು ಕ್ಷಮೆಯನ್ನು ಕೇಳಿ. ಕಾರ್ಯ ಕಲಾಪಗಳ ಒತ್ತಡದಲ್ಲಿ ಸ್ನೇಹಿತರ ವರ್ಗಕ್ಕೆ ಸಮಯ ನೀಡಬೇಕಾಗುತ್ತದೆ. ಸಾಧು ಸಂತರ ದರ್ಶನ ಮಾಡುವಿರಿ.
  • ವೃಶ್ಚಿಕ
  • ಈ ಹಿಂದೆ ನಡೆದ ದುರ್ಘಟನೆ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುವುದು ಸೂಕ್ತ. ಸಂಗಾತಿಯ ಜತೆ ನೀವಂದುಕೊಂಡ ಖುಷಿಯ ಸಮಯ ಕಳೆಯುವ ಅವಕಾಶ ದೊರೆಯುವುದು. ಸಂತೋಷ ನೆಮ್ಮದಿ ಇರಲಿದೆ.
  • ಧನು
  • ದೇವರ ಆಭರಣ ತಯಾರಿಕೆ ಅಥವಾ ದೇವಾಲಯದ ಕೆಲಸದ ಗುತ್ತಿಗೆದಾರರಿಗೆ ಹೊಸ ಗುತ್ತಿಗೆ ಸಿಗುವ ಸಂಭವಗಳಿವೆ. ಸೋದರ ಮಾವನ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.
  • ಮಕರ
  • ಸವಾಲನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಆಗುವುದು. ಈ ದಿನದ ಕಾರ್ಯಗಳನ್ನು ಮೊದಲೇ ನಿಶ್ಚಯಿಸಿಕೊಂಡು ಕ್ರಮ ಪ್ರಕಾರವಾಗಿ ಮಾಡುವುದು ಉತ್ತಮ. ನಂಜು ಉಂಟಾಗುತ್ತದೆ.
  • ಕುಂಭ
  • ಸಮಯವನ್ನು ಯಾಚಿಸುತ್ತಿರುವುದರಿಂದ ಸ್ವಂತ ಕೆಲಸಗಳು ನಿಧಾನ ಗತಿಯಲ್ಲಿ ಸಾಗಲಿವೆ. ಮಗಳಿಗೆ ಹೆಸರಿಡುವ ವಿಷಯವಾಗಿ ಹಲವಾರು ಚರ್ಚೆ ಆಗುತ್ತದೆ. ಉದ್ಯೋಗದಿಂದ ಒಳ್ಳೆಯ ಅನುಭವ ಸಿಗಲಿದೆ.
  • ಮೀನ
  • ತಂದೆ, ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ. ಮಿತ್ರವರ್ಗದಿಂದ ದುಃಖದ ಸಮಾಚಾರ ಕೇಳಬೇಕಾಗಬಹುದು. ದೀರ್ಘ ಪ್ರಯಾಣ ಮುಗಿಸಿ ಮರಳಲಿದ್ದೀರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.