ADVERTISEMENT

ದಿನ ಭವಿಷ್ಯ: ಇತರರ ಭಾವನೆಗಳಿಗೆ ಆದ್ಯತೆಯನ್ನು ನೀಡುವುದು ಅನಿವಾರ್ಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಡಿಸೆಂಬರ್ 2025, 18:30 IST
Last Updated 14 ಡಿಸೆಂಬರ್ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಇತರರ ಭಾವನೆಗಳಿಗೆ ಆದ್ಯತೆಯನ್ನು ನೀಡುವುದು ಅನಿವಾರ್ಯ. ವಿದೇಶಿ ಬಂಡವಾಳಗಳಿಂದ ಲಾಭ ಗಳಿಸುವ ಅವಕಾಶ ಬರಲಿದೆ. ಸರ್ಕಾರಿ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ.
  • ವೃಷಭ
  • ವ್ಯಾವಹಾರಿಕ ವಿಚಾರಗಳು ನಿಧಾನವಾಗಿ ಬೆಳವಣಿಗೆ ಕಾಣುತ್ತವೆ. ವೈವಾಹಿಕ ಸಂಬಂಧಗಳಲ್ಲಿ ಹಾಗೂ ಕೌಟುಂಬಿಕ ಸಂಬಂಧಗಳಲ್ಲಿ ಶಾಂತವಾಗಿ ವರ್ತಿಸಿ. ಹೊಸದಾದ ವಿಚಾರಗಳನ್ನು ಕಲಿಯುವಿರಿ.
  • ಮಿಥುನ
  • ಮಾತನಾಡುವ ಕಲೆಯೇ ವರದಾನವಾಗಿ ಪರಿಣಮಿಸುವುದು. ಸಭೆ ಸಮಾರಂಭಗಳು ಅಥವಾ ಒಪ್ಪಂದಗಳು ಲಾಭದಾಯಕ. ರಾತ್ರಿಯ ಸಮಯ ಹೆಚ್ಚು ಯೋಚನೆಗಳನ್ನು ಬಿಟ್ಟುಬಿಡಿ.
  • ಕರ್ಕಾಟಕ
  • ಸುತ್ತ ಮುತ್ತ ನಡೆಯುವ ಘಟನೆಗಳು ಭಾವುಕರನ್ನಾಗಿ ಮಾಡುತ್ತವೆ. ಸ್ವಂತ ಆರೋಗ್ಯ ಹಾಗೂ ಸಂತೋಷದ ಬಗ್ಗೆ ಗಮನ ಹರಿಸಿ. ಎಲ್ಲದಕ್ಕೂ ಕೌಟುಂಬಿಕ ಸಹಕಾರ ಸಿಗಲಿದೆ.
  • ಸಿಂಹ
  • ಶ್ರಮ ಹಾಗೂ ಕರ್ತವ್ಯ ನಿಷ್ಠೆ ಇಂದು ಪ್ರಕಾಶವಾಗುವುದು. ವೃತ್ತಿಯಲ್ಲಿ ಅಭಿವೃದ್ಧಿ ಕಾಣುವಿರಿ. ಸ್ವಾಭಿಮಾನಕ್ಕೆ ಧಕ್ಕೆ ಬರುವಂಥ ಸನ್ನಿವೇಶಗಳಿಂದ ದೂರ ಉಳಿಯಿರಿ.
  • ಕನ್ಯಾ
  • ಎಲ್ಲವನ್ನೂ ಮೊದಲೇ ಅಚ್ಚುಕಟ್ಟಾಗಿ ವೇಳಾಪಟ್ಟಿಯನ್ನು ಹಾಕಿಕೊಂಡಲ್ಲಿ ಲಾಭದಾಯಕ ದಿನ . ಹಣಕಾಸಿನ ವಹಿವಾಟು ಉತ್ತಮವಾಗಿದ್ದು ಮಾರಾಟ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳಿ.
  • ತುಲಾ
  • ಕೆಲಸದಲ್ಲಿ ತೊಡಕನ್ನುಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಜಯಶೀಲರಾಗುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
  • ವೃಶ್ಚಿಕ
  • ವೈಯಕ್ತಿಕ ಜೀವನದಲ್ಲಿ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ. ಕೆಲಸ ಮಾಡುವ ಮುನ್ನ ವಾಸ್ತವಾಂಶ ಗಳನ್ನು ಅರಿತುಕೊಳ್ಳುವ ಪ್ರಯತ್ನ ಒಳ್ಳೆಯದು.
  • ಧನು
  • ಹೊಸ ವಿನ್ಯಾಸದ ಉಡುಪುಗಳು ಕೆಲವು ಸ್ಥಳಗಳಿಗೆ ಸರಿಯಾಗದಿರಬಹುದು. ಒತ್ತಡ ತರುವ ಕೆಲಸಗಳಿಂದ ದೂರ ಉಳಿಯಿರಿ. ಸಣ್ಣ ಮಕ್ಕಳಿಂದಾಗಿ ಮರ್ಯಾದೆಯು ಹೋಗಬಹುದು.
  • ಮಕರ
  • ನಿಪುಣತೆಯಿಂದ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳುವ ಯೋಗ. ತಂದೆ-ತಾಯಿ ಅಥವಾ ಮನೆಯವರ ಮಾತಿನತ್ತ ಗಮನ ಹರಿಸಿ. ಕಲ್ಪನಾಶಕ್ತಿ ಚುರುಕಾಗಿ ಕೆಲಸ ಮಾಡಲಿದೆ.
  • ಕುಂಭ
  • ಕೆಲಸ ಕಾರ್ಯಗಳಲ್ಲಿ ಬಾಧೆಯಾಗಿ ನಿಲ್ಲುತ್ತಿದ್ದ ವ್ಯಕ್ತಿಯು ಆ ದಾರಿಯಿಂದ ದೂರ ಸರಿಯಲಿದ್ದಾರೆ. ಸ್ನೇಹಿತರಲ್ಲಿ ಅನಗತ್ಯ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು.
  • ಮೀನ
  • ವಿವಾಹ ಪ್ರಸ್ತಾಪಗಳು ಬಲಗೊಂಡು ಕಂಕಣ ಭಾಗ್ಯ ಕೂಡಿಬರಲಿದೆ. ಮೊಂಡುತನವನ್ನು ಬಿಟ್ಟು ಪೋಷಕರ ಮಾತುಗಳನ್ನು ಕೇಳಲೇಬೇಕಾಗುತ್ತದೆ. ಆಧ್ಯಾತ್ಮಿಕ ವಿಷಯಗಳತ್ತ ಮನಸ್ಸು ವಾಲಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.