ADVERTISEMENT

ದಿನ ಭವಿಷ್ಯ: ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಫೆಬ್ರುವರಿ 2026, 18:30 IST
Last Updated 14 ಫೆಬ್ರುವರಿ 2026, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಹಿರಿಯ ಅಧಿಕಾರಿಗಳೊಬ್ಬರ ಭೇಟಿಯಿಂದ ಎಲ್ಲಾ ಕಾರ್ಯಗಳು ಸರಾಗವಾಗುವವು. ಸುತ್ತಲಿನ ಜನರೊಂದಿಗೆ ಬೆರೆಯುವುದರ ಪ್ರಯೋಜನ ಅನುಭವಕ್ಕೆ ಬರಲಿದೆ. ವಿಲಾಸೀ ಜೀವನ ಶೈಲಿಯ ಆಸೆ ಈಡೇರುವುದು.
  • ವೃಷಭ
  • ಚಿನ್ನ ಬೆಳ್ಳಿ ವ್ಯಾಪಾರಿಗಳಿಗಿಂದು ಹೆಚ್ಚು ವ್ಯಾಪಾರದ ಜೊತೆಗೆ ಅಂಗಡಿಯಲ್ಲಿ ಬೆಲೆ ಬಾಳುವ ವಸ್ತುಗಳು ಕಾಣೆಯಾಗಬಹುದು. ಮುಂಬರುವ ಶುಭ ಕಾರ್ಯಕ್ಕೆ ಹೆಚ್ಚಿನ ತಯಾರಿಯನ್ನು ನಡೆಸಿಕೊಳ್ಳಬೇಕಾಗಬಹುದು.
  • ಮಿಥುನ
  • ಆದಾಯಕ್ಕೇನೂ ಕೊರತೆಯಿರದು. ಆದರೂ ಖರ್ಚು- ವೆಚ್ಚದಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ವೈದ್ಯರ ತಪಾಸಣೆಯಿಂದ ಬಂದ ಫಲಿತಾಂಶ ನಿಮಗೆ ಹಾಗು ನಿಮ್ಮ ಕುಟುಂಬದವರಿಗೆ ಆತಂಕವನ್ನು ಸೃಷ್ಟಿ ಮಾಡಲಿದೆ.
  • ಕರ್ಕಾಟಕ
  • ಉಳಿದವರಿಗಿಂತ ಎಲ್ಲ ಕೆಲಸವನ್ನು ಏಕಾಗ್ರತೆಯಿಂದ ಸಾಧಿಸಲು ಯತ್ನಿಸುವಿರಿ. ಅದರ ಫಲವಾಗಿ ಯಶಸ್ಸು ಸಿಗುವುದು. ಮನೆ ಕಟ್ಟಲು ಅಥವಾ ಮನೆಯನ್ನು ನವೀಕರಿಸಲು ಹಣದ ವ್ಯವಸ್ಥೆ ಸಹೋದರರಿಂದ ಆಗಲಿದೆ.
  • ಸಿಂಹ
  • ಗಿಡ ಮೂಲಿಕೆಯಂತಹ ಔಷಧದ ಬಳಕೆಯಿಂದ ಹೆಂಡತಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣುವುದು. ಸಂಪೂರ್ಣವಾಗಿ ನಿಮದೇ ಜವಬ್ದಾರಿಯಲ್ಲಿ ಇರುವ ತಮ್ಮಂದಿರ ಓದಿನಲ್ಲಿ ಉತ್ತಮ ಪ್ರಗತಿಕಾಣುವಿರಿ.
  • ಕನ್ಯಾ
  • ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನಿಮ್ಮ ಹಟದಿಂದಾಗಿ ಕೆಲ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಬಹುದು. ಮನೆಯಲ್ಲಿ ಸಮಾರಂಭ ನಡೆಸಲು ದಿನ ಗೊತ್ತು ಮಾಡುವಿರಿ.
  • ತುಲಾ
  • ಇಂದಿನ ದಿನಚರಿಯ ಹೊರತು ಪಡಿಸಿದ ಕೆಲಸಕ್ಕೆ ನಿಮ್ಮ ಸುಪ್ತ ಮನಸ್ಸು ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸುತ್ತಿದೆ. ಈ ದಿನ ವೈದ್ಯರನ್ನು ಭೇಟಿ ಮಾಡಬೇಕಾದ ಸ್ಥಿತಿಯು ಎದುರಾಗಬಹುದು.
  • ವೃಶ್ಚಿಕ
  • ಸಂಗೀತ, ಸಾಹಿತ್ಯ, ಚಿತ್ರರಂಗದ ಕಲಾವಿದರಿಗೆ ಕೈತುಂಬಾ ಕೆಲಸ ಇದ್ದರೂ ಆರ್ಥಿಕವಾಗಿ ಶ್ರಮಕ್ಕೆ ತಕ್ಕಂತಹ ಫಲ ಸಿಗಲಾರದು. ಚಿತ್ರರಂಗದವರಿಗೆ ಖ್ಯಾತಿ, ಹೊಸ ಹೊಸ ಗೌರವಾನ್ವಿತ ಅವಕಾಶ ದೊರೆಯುವುದು.
  • ಧನು
  • ಚಾಲಕ ವೃತ್ತಿಯವರು ನಿಯಮ ಬದ್ಧವಾಗಿ ವಾಹನ ಚಾಲನೆ ಮಾಡುವುದು ಒಳ್ಳೆಯದು. ನೆಡೆದ ಒಂದು ಘಟನೆಯಿಂದಾಗಿ ಯಾವುದಕ್ಕೆ ಹಾಗು ಯಾರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂಬುದು ನಿಮಗೆ ತಿಳಿಯಲಿದೆ.
  • ಮಕರ
  • ಬದಲಾಗುವ ಬದುಕಿನ ಗತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಹಾಲು ಅಥವಾ ಹಾಲಿನ ಪದಾರ್ಥ ಮಾರಾಟಗಾರರಿಗೆ ಲಾಭ. ಆಲೋಚನೆಗಳನ್ನು ಕಾರ್ಯ ರೂಪಕ್ಕೆ ಇಳಿಸಲು ಸೂಕ್ತ ಸಮಯವಲ್ಲ.
  • ಕುಂಭ
  • ಸಿದ್ಧ ಉಡುಪು ಮಾರಾಟಗಾರರಿಗೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಣೆ ಮಾಡಲು ಈ ದಿನ ಉತ್ತಮ. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ಸಿಗುವ ಸಮಯ ಬರುವುದು. ವೈದ್ಯ ವೃತ್ತಿಯವರಿಗೆ ತೃಪ್ತಿಕರ ವರಮಾನ ಪ್ರಾಪ್ತಿ.
  • ಮೀನ
  • ಸ್ನೇಹಿತರ ಅನಿವಾರ್ಯ ಸ್ಥಿತಿಗಳಿಂದ ನೀವು ಅವರ ಜಮೀನಿನ ಕೆಲಸ ಗಳನ್ನು ನೋಡಿಕೊಳ್ಳಬೇಕಾಗುವುದು. ದಿನಸಿ ವ್ಯಾಪಾರ ವಹಿವಾಟುಗಳು ಹೆಚ್ಚಿನ ಲಾಭ ತರಲಿದೆ. ವಾಹನಗಳ ಚಾಲಕರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.