ADVERTISEMENT

ದಿನ ಭವಿಷ್ಯ: ಹವ್ಯಾಸದ ಕೆಲಸವನ್ನು ಸಂತಸದಿಂದ ಮಾಡುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಡಿಸೆಂಬರ್ 2025, 18:30 IST
Last Updated 16 ಡಿಸೆಂಬರ್ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೆಲಸಗಾರರಲ್ಲಿ ಒಮ್ಮತಾಭಿಪ್ರಾಯ ಮೂಡಿಸಲು ಅನುಸರಿಸಿದ ಮಾರ್ಗ ಮೆಚ್ಚಿ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಮನೆ ಕಟ್ಟುವ ಬಗ್ಗೆ ಹಿರಿಯರ ಹಾಗೂ ಮನೆಯವರ ಅಭಿಪ್ರಾಯವನ್ನು ಸಂಗ್ರಹಿಸಿ.
  • ವೃಷಭ
  • ಶತ್ರುಗಳು ವಂಚನೆ ಮಾಡುವ ಸಲುವಾಗಿ ಮಿತ್ರರಾಗುವಂತೆ ನಟನೆ ಮಾಡಿಯಾರು. ಸ್ವಪ್ನದಲ್ಲಿ ಕೂಡಾ ಅಂಥವರ ಬಗ್ಗೆ ಜಾಗ್ರತರಾಗಿರಿ. ಧನಾಗಮನ ಬಹುಪಾಲು ಅನವಶ್ಯಕವಾಗಿ ವೆಚ್ಚವಾಗಲಿದೆ.
  • ಮಿಥುನ
  • ಗೃಹಿಣಿಯರು ಆಹಾರ ತಯಾರಿಕೆಯ ವಿಚಾರದಲ್ಲಿ ಉತ್ತಮ ಹೊಗಳಿಕೆಯ ಮಾತುಗಳನ್ನು ಎದುರು ನೋಡಬಹುದು. ಸಾಹಿತ್ಯ ವಲಯದಲ್ಲಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.
  • ಕರ್ಕಾಟಕ
  • ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದರಿಂದಾಗಿ ಇತರರ ಅವಲಂಬನೆ ಕಡಿಮೆಯಾಗುವುದು. ಹಲವು ದಿನಗಳ ನಂತರ ಹವ್ಯಾಸದ ಕೆಲಸವನ್ನು ಸಂತಸದಿಂದ ಮಾಡುವಿರಿ.
  • ಸಿಂಹ
  • ಸಹೋದರರಲ್ಲಿನ ಸ್ವತ್ತು ವಿಚಾರದಲ್ಲಿ ಬಂಧುಗಳು ನೆರವಿಗೆ ಬರಲಿದ್ದು, ತಂದೆಯವರ ಮಾತಿನಂತೆಯೇ ನಡೆಯಲು ಒಪ್ಪುವಿರಿ. ರಾಸಾಯನಿಕ ವಸ್ತುಗಳ ಮಾರಾಟದಿಂದ ಲಾಭ ಕಾಣುವಿರಿ. ಚಿಂತೆಗೊಳಗಾಗದಿರಿ.
  • ಕನ್ಯಾ
  • ಸಹೋದರನಲ್ಲಿ ಮತ್ತು ನೆರೆಹೊರೆಯವರೊಂದಿಗೆ ಸೌಹಾರ್ದದಿಂದ ವರ್ತಿಸುವುದರಿಂದ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳುವುದು. ಗೆಳೆತನಕ್ಕೆ ಸಂಬಂಧಿಸಿದ ಗುಪ್ತ ವಿಚಾರ ಸೋರಿಕೆಯಾಗಬಹುದು.
  • ತುಲಾ
  • ವ್ಯವಹಾರಗಳ ವಿಷಯಕ್ಕೆ ಸಂಬಂಧಿಸಿದಂತೆ ಪಾಲುದಾರರೊಂದಿಗೆ ಜರೂರಿನಲ್ಲಿ ಚರ್ಚೆ ನಡೆಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಸಣ್ಣ ಕೈಗಾರಿಕೋದ್ಯಮದವರಿಗೆ ಸರ್ಕಾರದಿಂದ ಸಹಕಾರ ದೊರೆಯಲಿದೆ.
  • ವೃಶ್ಚಿಕ
  • ವಿದ್ಯಾರ್ಥಿಗಳಿಗೆ ಓದು ಅಥವಾ ಉದ್ಯೋಗದ ಆಯ್ಕೆ ವಿಚಾರದಲ್ಲಿ ಸ್ನೇಹಿತರಿಂದ ಸಲಹೆ ದೊರೆಯಲಿದೆ. ನಿಮ್ಮ ನಡೆಯು ಮೇಲಧಿಕಾರಿ ಅಥವಾ ಪಾಲುದಾರರಿಗೆ ಇಷ್ಟವಾಗುವ ರೀತಿಯಲ್ಲಿ ಇರುವುದು ಉತ್ತಮ.
  • ಧನು
  • ಮನೆಯಲ್ಲಿ ದೂರದ ಸಂಬಂಧಿಕರೊಬ್ಬರ ಆಗಮನದಿಂದ ಸಡಗರ ಸೃಷ್ಟಿಸಲಿದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ಸರ್ಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ ಸಂಭವವಿದೆ.
  • ಮಕರ
  • ಕೌಟುಂಬಿಕ ವಿಷಯಗಳತ್ತ, ಅದರಲ್ಲೂ ಮಡದಿಯ ಆರೋಗ್ಯದ ವಿಚಾರದಲ್ಲಿ ಗಮನಹರಿಸಬೇಕಾಗುವುದು. ಮಗನ ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಮನೆಯವರಿಗೆ ಸಂತಸವಾಗುವುದು.
  • ಕುಂಭ
  • ಆಸ್ತಿ ಕೊಳ್ಳುವುದರಲ್ಲಾಗಲೀ, ಮನೆ ಕಟ್ಟುವ ವಿಚಾರದಲ್ಲಿ ಅದೃಷ್ಟವು ಇರುತ್ತದೆ. ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದರಿಂದ ಲಾಭವಿದೆ. ಚಿನ್ನ ಮೊದಲಾದ ದುಬಾರಿ ಲೋಹಗಳಿಗೆ ಹಣ ವಿನಿಯೋಗ ಮಾಡುವಿರಿ.
  • ಮೀನ
  • ಮನೆಯ ಆಸ್ತಿಯ ವಿಷಯದಲ್ಲಿ ಅನುಭವಸ್ಥರಿಂದ ಬರುವ ಸಲಹೆ ಸೂಚನೆಗಳಿಗೆ ಗಮನ ನೀಡಿ. ವೃತ್ತಿಪರ ಸಾಧನೆಗಳಿಂದಾಗಿ ಸೂಕ್ತ ಸ್ಥಾನಮಾನ ತಾನಾಗಿಯೇ ಒದಗಿ ಬರಲಿದೆ. ಷೇರು ವ್ಯಾಪಾರ ಅದೃಷ್ಟದಾಯಕ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.