ADVERTISEMENT

ದಿನ ಭವಿಷ್ಯ: ಶತ್ರುಗಳ ಗಾಳಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸಬೇಕು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಡಿಸೆಂಬರ್ 2025, 18:30 IST
Last Updated 17 ಡಿಸೆಂಬರ್ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಶಿಕ್ಷಕ ವರ್ಗದವರಿಗೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಸಿಗುವುದು. ಸಹನಾಶೀಲರಾಗಿ ವರ್ತಿಸಿದಲ್ಲಿ ಪ್ರಯತ್ನಬಲಕ್ಕೆ ಸರಿಯಾದ ಯಶಸ್ಸು ಸಿಗುತ್ತದೆ. ಆತಂಕವು ದೂರವಾಗುತ್ತದೆ.
  • ವೃಷಭ
  • ಸಮಾಜದಲ್ಲಿ ಅಸಭ್ಯವಾಗಿ ವರ್ತಿಸದೆ ಗೌರವಾನ್ವಿತವಾಗಿ ಬದುಕುವುದನ್ನು ರೂಢಿಸಿಕೊಳ್ಳಿರಿ. ಮಾಡುವ ಹಾಸ್ಯದಿಂದ ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ.
  • ಮಿಥುನ
  • ವೃತ್ತಿ ಜೀವನಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಆಪ್ತರೊಬ್ಬರ ಸಲಹೆ ಕೇಳುವಿರಿ. ಒಂದು ಕೆಲಸವನ್ನು ಆಸಕ್ತಿಯಿಂದ ನಿರ್ವಹಿಸುತ್ತೀರಿ. ಕೆಲಸದ ಒತ್ತಡ ಕಡಿಮೆಯಾಗಲಿದೆ.
  • ಕರ್ಕಾಟಕ
  • ಮನೆಯಲ್ಲಿ ಶಾಂತ ವಾತಾವರಣವಿದ್ದು, ನಿಧಾನಗತಿಯ ಕೆಲಸ ಕಾರ್ಯಗಳು ಚುರುಕಾಗಿ ನೆಮ್ಮದಿ ಬರುವುದು. ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಸಿಗುವುದು.
  • ಸಿಂಹ
  • ಸಹೋದರರಲ್ಲಿನ ಕೋರ್ಟು ವ್ಯವಹಾರಗಳನ್ನು ರಾಜಿ ಅಥವಾ ಸಂಧಾನ ಮೂಲಕ ಬಗೆ ಹರಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದು ಒಳ್ಳೆಯದು. ಬದಲಾವಣೆಯ ಲಕ್ಷಣಗಳು ಕಣ್ಣಿಗೆ ಬೀಳಲಿವೆ.
  • ಕನ್ಯಾ
  • ತಂದೆ ತಾಯಿಯರ ಶುಶ್ರೂಷೆ, ಚಿಕಿತ್ಸೆ ಕಾರಣಕ್ಕೆ ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಕಾಣುವಿರಿ. ವಿಮಾ ಕ್ಷೇತ್ರದಿಂದ ಆಗಬೇಕಾದ ಸಹಕಾರದಲ್ಲಿ ಗೊಂದಲಗಳು ಮೂಡಲಿವೆ. ದಿಢೀರ್ ಪ್ರಯಾಣ ಸಂಭವಿಸಬಹುದು.
  • ತುಲಾ
  • ಗೃಹ ನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ಆರ್ಥಿಕತೆ ಸ್ವಲ್ಪ ಮಟ್ಟಿನ ತೊಂದರೆಯನ್ನು ಸೃಷ್ಟಿ ಮಾಡುವುದು. ಶಿಲ್ಪಿಗಳಿಗೆ, ಸಮುದ್ರೋತ್ಪನ್ನಗಳ ಮಾರಾಟಗಾರರಿಗೆ ವೃತ್ತಿಯಲ್ಲಿ ಲಾಭ ಸಿಗಲಿದೆ.
  • ವೃಶ್ಚಿಕ
  • ಎಲ್ಲಾ ಆಸೆಗಳನ್ನು ಕೈಬಿಟ್ಟು ಜೀವನ ನಡೆಸುವ ಸಮಯದಲ್ಲಿ ಪುನಃ ಅದೃಷ್ಟ ಕೈ ಬೀಸಿ ಕರೆಯುವುದು. ಕೆಲಸಗಳು ನಿಧಾನಗತಿಯಲ್ಲಿ ಸಾಗುವುದಕ್ಕೆ ಮನಸ್ಸಿಗೆ ಬೇಸರ ಉಂಟಾಗುವುದು.
  • ಧನು
  • ಕೃಷಿಕ್ಷೇತ್ರದಲ್ಲಿ ಇರುವವರಿಗೆ ಅಧಿಕ ಲಾಭ. ಅದರಲ್ಲೂ ತರಕಾರಿ ಮಾರಾಟಗಾರರಿಗೆ ಕುಬೇರನ ಅನುಗ್ರಹವು ಸಿಗಲಿದೆ. ಹರಿತಾದ ವಸ್ತುಗಳ, ಯಂತ್ರಗಳ ಜೊತೆ ಕೆಲಸ ಮಾಡುವವರು ಜಾಗ್ರತರಾಗಿರಿ.
  • ಮಕರ
  • ವಂಶಪಾರಂಪರಿಕವಾಗಿ ಬಂದ ವ್ಯಾಪಾರ ಅಥವಾ ವೃತ್ತಿಯಲ್ಲಿ ಮತ್ತಷ್ಟು ಏಳಿಗೆ ಕಾಣಲಿದೆ. ಶತ್ರುಗಳ ಗಾಳಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸಬೇಕು. ಸಮ್ಮಿಶ್ರ ಫಲವನ್ನು ಕಾಣುವಿರಿ.
  • ಕುಂಭ
  • ರಾಜಕಾರಣಿಗಳೊಂದಿಗೆ ಅಧಿಕವಾಗಿ ಬೆಳೆಸಿಕೊಂಡ ಒಡನಾಟವು ಕಾರಾಗೃಹ ವಾಸದಂತಹ ಅಪಾಯದ ಪರಿಸ್ಥಿತಿಯನ್ನು ತಂದೊಡ್ಡಲಿದೆ. ಆಸ್ತಿ ವಿಷಯಗಳನ್ನು ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ.
  • ಮೀನ
  • ವೃತ್ತಿ ಮಾಡುವ ಸ್ಥಳದಲ್ಲಿ ಯಾವುದೇ ವಾದ ವಿವಾದಗಳು ನಡೆಸಬೇಡಿ. ಇದು ಕಾರ್ಯ ಸಾಧನೆಗೆ ಅಡ್ಡಿಯಾಗುವುದು. ಹೊಸ ಬದುಕನ್ನು ಆರಂಭಿಸಲು ಅವಕಾಶದ ಬಾಗಿಲು ನಿಮಗಾಗಿ ತೆರೆದಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.