ADVERTISEMENT

ದಿನ ಭವಿಷ್ಯ: ಶಾಂತವಾಗಿ ವರ್ತಿಸಿದಷ್ಟು ಏಳಿಗೆಯಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಡಿಸೆಂಬರ್ 2025, 18:30 IST
Last Updated 19 ಡಿಸೆಂಬರ್ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಈವರೆಗೂ ಹೆಚ್ಚುವರಿಯಾಗಿ ಮಾಡುತ್ತಿದ್ದ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವ ದಾರಿಯನ್ನು ಹುಡುಕುವಿರಿ. ಶಾಂತವಾಗಿ ವರ್ತಿಸಿದಷ್ಟು ಏಳಿಗೆಯಾಗಲಿದೆ. ಕ್ರೋಧವನ್ನು ಕಡಿಮೆ ಮಾಡಿಕೊಳ್ಳಿ.
  • ವೃಷಭ
  • ಖರ್ಚು ವೆಚ್ಚಗಳು ಅಂದಾಜಿನ ಗಡಿ ದಾಟುವವು. ಕುಟುಂಬದ ವ್ಯಕ್ತಿಗಳ ಜೊತೆಯ ಮಾತುಕತೆಗಳು ಹಿತವಾಗುವ ರೀತಿಯಲ್ಲಿ ಇರುವವು. ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಿ.
  • ಮಿಥುನ
  • ಜನರೊಂದಿಗೆ ಬೆರೆತು ಮಾತನಾಡುವುದರಿಂದ ವ್ಯವಹಾರಕ್ಕೆ ಹೊಸಾ ಅವಕಾಶಗಳು ದೊರೆಯಲಿವೆ. ವ್ಯಾವಹಾರಿಕ ಚರ್ಚೆ ಅಥವಾ ವೃತ್ತಿ ಸಂದರ್ಶನದಲ್ಲಿ ಶುಭ ಫಲ. ಹೊಸ ಕೆಲಸಗಳ ಆರಂಭವನ್ನು ಮುಂದೂಡಿರಿ.
  • ಕರ್ಕಾಟಕ
  • ದೇಹಕ್ಕೆ ಅಗತ್ಯವಾದ ಪೋಷಕಾಂಶ, ವಿಶ್ರಾಂತಿಯನ್ನು ಕೊಡುವ ಮೂಲಕ ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಅಸಾಧ್ಯವಾದುದನ್ನೂ ದೇವರ ಪ್ರಾರ್ಥನೆಯಿಂದ ಪಡೆದುಕೊಳ್ಳುವಿರಿ.
  • ಸಿಂಹ
  • ಕೆಲಸದಲ್ಲಿ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವಿರಿ. ಜನರಿಗೆ ಆರ್ಥಿಕವಾಗಿ ಸಹಾಯ ಮಾಡುವುದರಲ್ಲಿ ಖುಷಿ ಕಾಣುವಿರಿ. ಮನಸ್ಸಿನ ಮಾತಿಗೆ ಆದ್ಯತೆ ಕೊಡಿ.
  • ಕನ್ಯಾ
  • ಮಾಡುವ ಕೆಲಸಕ್ಕೆ ಇಂದೇ ಫಲವನ್ನು ಅಪೇಕ್ಷಿಸಬೇಡಿ. ನಿರುದ್ಯೋಗಿಗಳು ಈ ತಕ್ಷಣದಲ್ಲಿ ನೀವಂದುಕೊಂಡ ರೀತಿಯ ವೃತ್ತಿ ದೊರಕದಿರುವುದರಿಂದ ತಾಳ್ಮೆಯನ್ನು ಕಳೆದುಕೊಳ್ಳದೇ ಕಾಯಿರಿ.
  • ತುಲಾ
  • ಅದೃಷ್ಟವು ಕೈ ಹಿಡಿಯುವುದರಿಂದ ಎಲ್ಲಾ ವಿಷಯಗಳಲ್ಲೂ ಏಳಿಗೆಯನ್ನು ಕಾಣುವಿರಿ. ಉತ್ತಮ ಕೆಲಸಗಳಿಗೂ ಶೀಘ್ರ ಫಲವನ್ನು ಕಾಣುವಿರಿ. ವಿವಾಹ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರ ಅಗತ್ಯ.
  • ವೃಶ್ಚಿಕ
  • ದೈನಂದಿನ ಬದುಕಿನ ವಿಚಾರಗಳಲ್ಲಿ ನಡೆದಿರುವ ಸಣ್ಣ ಪುಟ್ಟ ಬದಲಾವಣೆಯಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ. ವೃತ್ತಿರಂಗದ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಕೊಂಡರೆ ಉತ್ತಮ.
  • ಧನು
  • ಸರಿಯಾದ ಪರಿಶೀಲನೆ ಇಲ್ಲದೆ ಯಾವ ಕೆಲಸಗಳಲ್ಲೂ ಹೂಡಿಕೆ ಮಾಡಬೇಡಿ. ವೃತ್ತಿಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ನಾಯಕನನ್ನು ಜಾಗೃತಗೊಳಿಸಿ.
  • ಮಕರ
  • ಸಾಮರ್ಥ್ಯ, ದಕ್ಷತೆ ಹಾಗೂ ಸೇವಾ ಮನೋಭಾವಗಳಿಂದಾಗಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಕುಟುಂಬ ವರ್ಗದಲ್ಲಿ ಸಲಹೆಗಳಿಗೆ ಆದ್ಯತೆ ದೊರೆಯಲಿದೆ.
  • ಕುಂಭ
  • ಕೆಲಸದ ಒತ್ತಡದಿಂದ ದೇಹಾಯಾಸ ಎದುರಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಹಾಗೂ ಸಿಹಿ ತಿನಿಸು ಮಾರಾಟಗಾರರಿಗೆ, ವಾಹನದ ವಹಿವಾಟುಗಳನ್ನು ನಡೆಸುವವರಿಗೆ ಲಾಭ.
  • ಮೀನ
  • ವಿದ್ಯಾರ್ಥಿ ವರ್ಗಕ್ಕೆ ಬಂದಿರುವ ಜವಾಬ್ದಾರಿಯುಕ್ತ ನಡವಳಿಕೆ ಮತ್ತು ಉತ್ಸಾಹದಿಂದ ಏಳಿಗೆಯ ಸೂಚನೆ ಇರುವುದು. ಹೊಸ ವ್ಯವಹಾರಗಳ ಚಾಲನೆಗೆ ಉತ್ತಮ ಮಾರ್ಗದರ್ಶನವನ್ನು ಹೊಂದುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.