ADVERTISEMENT

ದಿನ ಭವಿಷ್ಯ: ಈ ರಾಶಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಡಿಸೆಂಬರ್ 2023, 23:54 IST
Last Updated 26 ಡಿಸೆಂಬರ್ 2023, 23:54 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ ದೊರೆಯಲಿದೆ. ಸಿಹಿ ಪದಾರ್ಥಗಳ ಮಾರಾಟಗಾರರಿಗೆ ಉತ್ತಮವಾದ ಆದಾಯ ಇರಲಿದೆ. ಹಾಲು ಮಾರಾಟಗಾರರಿಗೆ ಅಧಿಕ ಆದಾಯ ಇರುವುದು.
  • ವೃಷಭ
  • ಅನಿವಾರ್ಯ ಕಾರಣಗಳಿಂದ ನಿಮ್ಮ ದಿನನಿತ್ಯದ ಆಚರಣೆಯಲ್ಲಿ ಕೆಲವು ಬದಲಾವಣೆಯನ್ನು ಅನುಭವಿಸುವಿರಿ. ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ.
  • ಮಿಥುನ
  • ನಿಮ್ಮ ಅಚ್ಚುಕಟ್ಟಾದ ಕೆಲಸಗಳಿಂದ ಬೇರೆ ಜನರಿಗೆ ನಿಮ್ಮ ಮೇಲಿನ ಅಭಿಪ್ರಾಯಗಳು ಬದಲಾಗುವುದು. ನಿಮ್ಮ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕಾನುಕೂಲ ಉಂಟಾಗುವುದು. ಮಾನಸಿಕ ಸ್ಥೈರ್ಯ ಹೆಚ್ಚಲಿದೆ.
  • ಕರ್ಕಾಟಕ
  • ತೆಂಗು ಬೆಳೆಗಾರರಿಗೆ ಉತ್ತಮ ಬೆಳೆಯ ಜೊತೆಗೆ ಹೆಚ್ಚಿನ ಲಾಭ ಸಿಗುವುದು. ಬಂಧುಗಳಲ್ಲಿ ಅನಗತ್ಯ ವಾದ ವಿವಾದಗಳು ಬೇಡ ಹಾಗೂ ಕಳೆದುಕೊಂಡಿರುವ ವಿಶ್ವಾಸವನ್ನು ಪುನಃ ಸಂಪಾದಿಸುವ ಬಗ್ಗೆ ಗಮನಹರಿಸಿ.
  • ಸಿಂಹ
  • ಜವಳಿ ವ್ಯಾಪಾರಿಗಳು ರಿಯಾಯಿತಿ ಮಾರಾಟಗಳಿಂದ ಹೆಚ್ಚು ಲಾಭ ಪಡೆಯಬಹುದು. ಇಂದು ಪ್ರವೃತ್ತಿಯಿಂದಲೂ ಹೆಸರು ಸಂಪಾದನೆ ಮಾಡುವಂತಾಗಲಿದೆ. ನೂತನ ವಾಹನ ಕೊಳ್ಳುವ ಯೋಗವಿದೆ.
  • ಕನ್ಯಾ
  • ರಾಜಕೀಯ ಪ್ರವೇಶ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಅತಿಯಾದ ಚಿಂತನೆ ನಡೆಸುವಿರಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು. ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು.
  • ತುಲಾ
  • ತಂದೆಯ ಅಥವಾ ಹಿರಿಯರ ಮಾತಿಗೆ ಎದುರಾಡಬೇಡಿ, ನಿಮ್ಮ ಶ್ರೇಯಸ್ಸಿಗೆ ಅಡ್ಡಿಯಾಗುವುದು. ಕುಟುಂಬ ವರ್ಗದವರ ಆರೋಗ್ಯ ಉತ್ತಮವಾಗಿರುವುದು. ಪ್ರಯಾಣದಲ್ಲಿ, ವಾಹನ ಚಾಲನೆಯಲ್ಲಿ ಅಧಿಕ ಗಮನವಿರಲಿ.
  • ವೃಶ್ಚಿಕ
  • ವ್ಯಾಪಾರ ವ್ಯವಹಾರಗಳಲ್ಲಿ ಆರೋಗ್ಯಕರ ಪೈಪೋಟಿಯನ್ನು ನಡೆಸುವ ಬಗ್ಗೆ ತೀರ್ಮಾನಿಸಿ. ಪಾಲುದಾರರೊಂದಿಗೆ ಹಣಕಾಸಿನ ವಿಷಯದಲ್ಲಿ ಬಿಗಿ ಹಿಡಿತ ಪಡೆಯುವುದು ಅಗತ್ಯವಾಗುವುದು. ಸಂಸಾರದ ಜವಾಬ್ದಾರಿ ಹೆಚ್ಚಲಿದೆ.
  • ಧನು
  • ಹಣ ಸಂಪಾದಿಸುವ ಬಗ್ಗೆ ಎಷ್ಟು ಗಮನಹರಿಸುವಿರೋ ಗಳಿಸಿದ ಹಣವನ್ನು ಸದ್ಬಳಕೆ ಮಾಡುವ ಬಗ್ಗೆಯೂ ಅಷ್ಟೇ ಗಮನಹರಿಸಿ. ಹೊಸ ಕೆಲಸಗಳ ಆರಂಭಕ್ಕೆ ಸೂಕ್ತ ಸಮಯವಲ್ಲ. ಮನದ ಗೊಂದಲ ದೂರಾಗಲಿದೆ.
  • ಮಕರ
  • ಬೇರೆಯವರ ಅಧೀನದಲ್ಲಿರದೆ, ಸ್ವಉದ್ಯೋಗ ಮಾಡುವ ಆಸೆಯು ನಿಮ್ಮನ್ನು ಕಾಡಲಿದೆ. ಆಹಾರ ನಿಯಮದಿಂದ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಹಣ್ಣಿನ ವ್ಯಾಪಾರಿಗಳಿಗೆ ಉತ್ತಮ ಲಾಭವಿರುವುದು.
  • ಕುಂಭ
  • ಆಸ್ತಿಗಾಗಿ ನಿವೇಶನ ಖರೀದಿಸಲು ಇಂದು ಒಳ್ಳೆಯ ಕಾಲವಾಗಿದೆ. ನೂತನ ವಾಹನ ಖರೀದಿಸಬೇಕೆಂಬ ನಿಮ್ಮ ಕನಸು ನನಸಾಗುವುದು. ವೈಯಕ್ತಿಕ ಸಮಸ್ಯೆಗಳು ಬಗೆಹರಿಯುವುದು.
  • ಮೀನ
  • ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ತೋರುವುದು ಉತ್ತಮ. ಶತ್ರುಗಳ ಉಪಟಳವನ್ನು ತಡೆಯಲು ತಂತ್ರಗಾರಿಕೆಯನ್ನು ಮಾಡಬೇಕಾಗುತ್ತದೆ. ಇನ್ನೊಬ್ಬರ ಬಗ್ಗೆ ಕೆಟ್ಟ ಮಾತುಗಳು ಬೇಡ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.