ಯಾವುದೇ ವಿಷಯವನ್ನಾಗಲಿ ಅಧಿಕಾರಿಗಳಿಂದ ಒಂದಕ್ಕಿಂತ ಹೆಚ್ಚು ಬಾರಿ ಹೇಳಿಸಿಕೊಳ್ಳಬೇಡಿ. ತಿಳಿಯದೆ ಆದ ತಪ್ಪುಗಳಿಗೆ ಜೀವನ ಪರ್ಯಂತ ನೋವು ಅನುಭವಿಸಲಿದ್ದೀರಿ. ನಂಜು ನಿವಾರಕ ಆಹಾರವನ್ನು ಸೇವಿಸಿ.
ಮಿಥುನ
ಸಮಾರಂಭ ಒಂದರಲ್ಲಿ ಬಂದಂಥ ಉಡುಗೊರೆಗಳನ್ನು ನೋಡುವ ಸಾಧ್ಯತೆ ಇದೆ. ಉತ್ತಮ ಪ್ರತಿಜ್ಞೆಗಳೊಂದಿಗೆ ಶುರುವಾದ ಕಾರ್ಯ ಶುಭಫಲ ನೀಡುವುದು. ಕೃಷಿ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಬಹುದು.
ಕರ್ಕಾಟಕ
ಬದಲಾವಣೆ ಅಲೆಯನ್ನು ನಿರೀಕ್ಷಿಸುತ್ತಿರುವ ನೀವು ಸಣ್ಣ ಸಣ್ಣ ವಿಷಯಗಳಲ್ಲಿ ನೀತಿಗಳನ್ನು ಅಳವಡಿಸಿಕೊಳ್ಳುವಿರಿ. ವಿವಿಧ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭ ಬರುತ್ತದೆ.
ಸಿಂಹ
ಸಹೋದ್ಯೋಗಿಯ ನೆರವಿನಿಂದ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ಮನಸ್ಸಿಗೆ ಹಿತ ಕೊಡುವ ರೀತಿಯಲ್ಲಿ ಪೂರೈಸುವಿರಿ. ಅಧಿಕಾರಿಗಳ ವಿರುದ್ಧ ತಿರುಗಿಬೀಳಲಿದ್ದೀರಿ.
ಕನ್ಯಾ
ಜೀವನದಲ್ಲಿ ಸೋಮಾರಿತನ, ಜತೆಯಲ್ಲಿ ಅಹಂಕಾರವನ್ನು ದೂರ ಮಾಡಿದರೆ ಯೋಗ್ಯತೆಗೆ ಮೀರಿದ ಕೆಲಸಕಾರ್ಯಗಳಿಗೆ ಕೈಹಾಕಿದರೂ ಸಮಸ್ಯೆ ಆಗಲ್ಲ. ತಾಯಿಯ ಮನೆಯ ಆಸ್ತಿಗಾಗಿ ಆಸೆ ಪಡುವುದು ಸರಿಯಲ್ಲ.
ತುಲಾ
ರಾಜಕೀಯ ಭವಿಷ್ಯದಲ್ಲಿ ಉತ್ತಮ ಅವಕಾಶ ಸಿಕ್ಕಿದರೂ, ಕಾದು ನೋಡುವ ಪ್ರವೃತ್ತಿ ಉತ್ತಮ. ನಿಮ್ಮ ನಿರ್ಧಾರಗಳಲ್ಲಿ ಸ್ಥಿರತೆ ಬರುವವರೆಗೂ ಇತರರ ಮುಂದೆ ಪ್ರಸ್ತುತ ಪಡಿಸಬೇಡಿ.
ವೃಶ್ಚಿಕ
ಹಲವು ದಿನಗಳ ಬಳಿಕ ಕುಟುಂಬದ ಹಿರಿಯ ವ್ಯಕ್ತಿಗಳನ್ನು ಭೇಟಿಯಾಗಿ ಹೊಸ ವ್ಯವಹಾರ ಶುರುಮಾಡಲು ಆಶೀರ್ವಾದ ಪಡೆದುಕೊಳ್ಳುವಿರಿ. ದೇಹದ ಸೌಂದರ್ಯ ವರ್ಧನೆಗಾಗಿ ಹಣ ಖರ್ಚು ಮಾಡುವಿರಿ.
ಧನು
ಕಷ್ಟದಿಂದ ಸಂಪಾದನೆ ಮಾಡಿದ ಹಣವನ್ನು ಸರಿಯಾದ ವಿನಿಯೋಗಕ್ಕಾಗಿ ಬಹಳವಾಗಿ ಯೋಚಿಸುವಿರಿ. ದಾಂಪತ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿ ಸಂತಸವಿದೆ.
ಮಕರ
ನಿಜವೆಂದು ತೋರುವ ಕೆಲವು ವಿಷಯಗಳು ಪರಾಮರ್ಶೆಯ ನಂತರ ಹುಸಿ ಎಂದು ತಿಳಿಯುವುದು. ಹೊಸ ವಿಚಾರಗಳನ್ನು ಸಹೋದರಿಯಿಂದ ಕಲಿಯಲು ಮುಂದಾಗುತ್ತೀರಿ. ಮಂಗಳಕಾರ್ಯಗಳಿಗೆ ಸಿದ್ಧತೆ ನಡೆಯಲಿದೆ.
ಕುಂಭ
ಮಕ್ಕಳು ಜೀವನದಲ್ಲಿ ಹಂತವನ್ನು ತಲುಪಿರುವುದನ್ನು ಯೋಚಿಸಿಕೊಂಡು ನೆಮ್ಮದಿ ಪಡುವಂತಾಗುವುದು. ಕೆಲವರು ಮಾಡುವ ಅನಾಹುತವನ್ನು ನಿಲ್ಲಿಸದೇ ಬೇರೆಯ ಹಾದಿ ಇಲ್ಲವಾಗಿರುತ್ತದೆ.
ಮೀನ
ಯಾವುದೇ ಸವಾಲುಗಳು ಎದುರಾದರೂ ಬುದ್ಧಿವಂತಿಕೆ ಹಾಗೂ ಧೈರ್ಯದಿಂದ ಎದುರಿಸುವಿರಿ. ಹಿರಿಯಲ್ಲಿ ತಪ್ಪಿಲ್ಲದಿದ್ದರೂ ವಯಸ್ಸಿಗೆ ಬೆಲೆ ಕೊಟ್ಟು ಕ್ಷಮೆಯನ್ನು ಕೇಳಿ. ಮಾತು ಕಡಿಮೆ ಆಡಿದಷ್ಟೂ ಒಳ್ಳೆಯದು.