ADVERTISEMENT

ದಿನ ಭವಿಷ್ಯ | ಗುರುವಾರ, 01 ಜೂನ್ 2023

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಮೇ 2023, 20:16 IST
Last Updated 31 ಮೇ 2023, 20:16 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಗೃಹ ಸಾಮಗ್ರಿ ವಸ್ತುಗಳ ಖರೀದಿಯಿಂದ ಅಧಿಕ ಖರ್ಚು ಬರುವುದು. ತೀರ್ಪುಗಳನ್ನು ನೀಡುವುದು ಅಥವಾ ಇನ್ನೊಬ್ಬರನ್ನು ಪರೀಕ್ಷಿ ಸುವ ಕೆಲಸ ಈ ದಿನ ನಿಮಗೆ ಸರಿಯಲ್ಲ. ಆಫೀಸಿನ ಕೆಲಸ ಕಾರ್ಯ ಹೆಚ್ಚೆನಿಸುವುದು.
  • ವೃಷಭ
  • ಇಂದಿನ ನಿಮ್ಮ ನಡವಳಿಕೆ ಸಮಾಜದಲ್ಲಿ ಎಲ್ಲರ ಕೇಂದ್ರ ಬಿಂದುವಾಗಲಿದೆ. ವಕೀಲರು, ನ್ಯಾಯಾಂಗ ಇಲಾಖಾ ಅಧಿಕಾರಿಗಳು ಹೆಚ್ಚಿನ ಪ್ರಗತಿ ಕಾಣುವರು. ಇತರರ ಭಾವನೆಗಳಿಗೆ ಆದ್ಯತೆ ನೀಡುವುದು ಅನಿವಾರ್ಯ.
  • ಮಿಥುನ
  • ಹಣಕಾಸಿನ ವಹಿವಾಟು ಉತ್ತಮವಾಗಿದ್ದು ಮಾರಾಟ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವಿರಿ. ಖಾದ್ಯ ತೈಲಗಳ ಮಾರಾಟ ಉತ್ತಮವಾಗಿದ್ದು ಲಾಭಾಂಶ ಹೆಚ್ಚುವುದು. ಧೈರ್ಯ ಸಾಮರ್ಥ್ಯದಿಂದ ಉತ್ತೇಜನ ಪಡೆಯುವಿರಿ.
  • ಕರ್ಕಾಟಕ
  • ಹಲವು ಕಾರಣಗಳಿಗೆ ಸ್ನೇಹಿತರು ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸುವಂತಾಗುವುದು. ಖಾದಿ ಉದ್ಯಮದವರಿಗೆ ಸರಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ.
  • ಸಿಂಹ
  • ಅಕ್ಕ ಪಕ್ಕದವರಲ್ಲಿ ಅನವಶ್ಯಕ ಸಂಬಂಧವಿರದ ವಿಚಾರಕ್ಕೆ ಸಲಹೆ ಹೇಳಿದರೆ ನಿಷ್ಠುರವಾಗುವುದು ಖಚಿತ. ವ್ಯವಹಾರಗಳ ಬಗ್ಗೆ ಗಮನ ಹರಿಸುವುದು ಸರಿ ಎನಿಸಲಿದೆ. ಷೇರು ವ್ಯಾಪಾರ ಅದೃಷ್ಟದಾಯಕವಾಗಿರುತ್ತದೆ.
  • ಕನ್ಯಾ
  • ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವ ಹಾದಿ ನೋಡಿರಿ. ಜಗದ್ಗುರುವಿನ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುವುದರ ಜತೆಗೆ ಶುಭ ದೊರಕುವುದು. ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದರಿಂದಲಾಭ.
  • ತುಲಾ
  • ಹಲವು ಕಾಲದಿಂದ ನಿಂತು ಹೋಗಿದ್ದ ಕೆಲಸಗಳು ದೈವಾನುಗ್ರಹದಿಂದ ಆರಂಭವಾಯಿತೆಂದು ಸಂತೋಷ ಪಡುವಿರಿ. ಕೆಲಸದತ್ತ ಹೆಚ್ಚಿನ ಗಮನ ಹರಿಸುವಿರಿ. ವಿದ್ಯಾರ್ಥಿಗಳಿಗೆ ಇಂದು ಸಾಧನೆಗೆ ಪೂರಕವಾದ ದಿನವಾಗಿದೆ.
  • ವೃಶ್ಚಿಕ
  • ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕುವುದರಿಂದ ಮಾರ್ಗಮಧ್ಯದ ಅಡೆತಡೆಗಳು ನಿವಾರಣೆಯಾಗಲಿವೆ. ಭಾಷಾ ಅಧ್ಯಾಪಕರಿಗೆ ಮತ್ತು ನಾಟಕ ಕಲಾವಿದವರಿಗೆ ಹೆಚ್ಚಿನ ಮನ್ನಣೆ ಸಿಗುವುದು.
  • ಧನು
  • ಸೋದರನ ಆಗಮನದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮದ ವಾತಾವರಣ ಇರುವುದು. ನಿಮ್ಮ ಚಾಣಾಕ್ಷತನದಿಂದ ಪ್ರತಿಸ್ಪರ್ಧಿಗಳು ದೂರಾಗುವರು.
  • ಮಕರ
  • ಕೋಪದ ಮತ್ತು ದಡ್ಡತನದ ತೀರ್ಮಾನದಿಂದ ಪಶ್ಚಾತಾಪ ಪಡುವಂತಹ ಘಟನೆ ನಡೆಯುವುದು. ಕೃಷಿಕರಿಗೆ ತೋಟದ, ಹೊಲದ ಕೆಲಸಗಳು ಸರಾಗವಾಗಿ ನಡೆಯುವಂತಾಗಲಿದೆ.
  • ಕುಂಭ
  • ಮನೆಯ ಪರಿಸ್ಥಿತಿಯು ಸುಧಾರಿಸುವುದು. ಹಣಕಾಸಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹಿರಿಯರನ್ನು ನೋಡಿಕೊಳ್ಳುವ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಬೇಡಿ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆಯಿಂದ ಇರಿ.
  • ಮೀನ
  • ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭವೊಂದು ಬರಲಿದೆ. ಹಿರಿಯರ ಮಾತಿನಂತೆ ನಡೆದುಕೊಳ್ಳುವ ನಿರ್ಧಾರ ಶುಭಪ್ರದವಾಗುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.