ADVERTISEMENT

ದಿನ ಭವಿಷ್ಯ: ಈ ರಾಶಿಯ ಸಿನಿಮಾ ತಾರೆಗಳಿಗೆ ಪ್ರಸಿದ್ಧಿ ಸಿಗುವುದು

ಪ್ರಜಾವಾಣಿ ವಿಶೇಷ
Published 14 ಆಗಸ್ಟ್ 2023, 23:31 IST
Last Updated 14 ಆಗಸ್ಟ್ 2023, 23:31 IST
   
ಮೇಷ
  • ಸಹೋದರ ಸಹೋದರಿಯರ ಬಾಂಧವ್ಯ ಗಟ್ಟಿಯಾಗುವಂಥ ಘಟನೆ ನಡೆಯುವುದು. ಇಂದಿನ ಸಂಧಾನ ಅಥವಾ ಕರಾರು ಒಪ್ಪಂದ ಅನುಕೂಲಕರ ಎನಿಸಲಿದೆ. ಮನೆ ದೇವರಿಗೆ ಹರಕೆ ಸಲ್ಲಿಸುವುದು ನೆನಪಿರಲಿ.
  • ವೃಷಭ
  • ಗೃಹ ನಿರ್ಮಾಣದಂತಹ ಕೆಲಸಗಳಿಗಾಗಿ ಹೆಚ್ಚು ಸಮಯ ವಿನಿಯೋಗಿಸುವಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಹೆಚ್ಚಿನ ಪ್ರಶಂಸೆ ದೊರೆತು ಬಡ್ತಿ ಸಿಗುವುದು. ಸಿನಿಮಾ ತಾರೆಗಳಿಗೆ ಪ್ರಸಿದ್ಧಿ ಸಿಗುವುದು.
  • ಮಿಥುನ
  • ಅಕ್ಕಪಕ್ಕದ ಮನೆಯವರ ಅಥವಾ ಸ್ನೇಹಿತರ ಹೊಗಳಿಕೆಯ ಮಾತುಗಳಿಗೆ ಕಿವಿಗೊಟ್ಟು ಮರುಳಾಗಬೇಡಿ. ಫ್ಯಾಷನ್ ಡಿಸೈನರ್‌ಗಳು ಈ ದಿನ ಅವಕಾಶಗಳನ್ನು ಹಾಗೂ ಉತ್ತಮ ಧನಲಾಭ ಪಡೆಯುವರು.
  • ಕರ್ಕಾಟಕ
  • ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಆನಂದವಾಗುತ್ತದೆ. ತಂದೆಯವರ ಮಾತಿನಿಂದ ಅತೃಪ್ತಿಯ ವಾತಾವರಣ ಮೂಡಿ ಬರಲಿದೆ. ಶ್ರೀಕ್ಷೇತ್ರಕ್ಕೆ ಹೋಗುವ ಯೋಜನೆ ಕಾರ್ಯರೂಪಕ್ಕೆತನ್ನಿ.
  • ಸಿಂಹ
  • ಚಿತ್ರಕಲೆಯಲ್ಲಿನ ಆಸಕ್ತಿಯಿಂದಾಗಿ ಹೆಚ್ಚಿನ ಕಲಿಕೆಗಾಗಿ ವಿಶೇಷ ತರಗತಿಗೆ ಕಳುಹಿಸಲು ತಂದೆಯವರಿಂದ ಒಪ್ಪಿಗೆ ದೊರೆಯುವುದು. ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಮನಸ್ಸಿಗೆ ಸಮಾಧಾನ ಆಗುವುದು.
  • ಕನ್ಯಾ
  • ಧನಾಗಮನಕ್ಕೆ ಹಲವು ದಾರಿಗಳು ಕಂಡರೂ ಸರಿಯಾದ ದಾರಿಯನ್ನು ಆರಿಸಿಕೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಂಥ ವಿಚಾರ. ದೈವಾನುಗ್ರಹದಿಂದ ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಪಡೆಯುವಿರಿ.
  • ತುಲಾ
  • ವಿದೇಶ ಶಿಕ್ಷಣ ಪಡೆದುಕೊಳ್ಳುವ ಪ್ರಯತ್ನವನ್ನು ನಡೆಸಿದಲ್ಲಿ ಅವಕಾಶ ಪ್ರಾಪ್ತಿಯಾಗುವುದು. ಒತ್ತಡ ತರುವ ಕೆಲಸಗಳಿಂದ ದೂರ ಉಳಿಯುವ ಯೋಚನೆ ಸರಿಯಾಗಿರುವುದು. ಮನೆಯಲ್ಲಿ ಜವಾಬ್ದಾರಿ ಹೆಚ್ಚಲಿದೆ.
  • ವೃಶ್ಚಿಕ
  • ದೇವತಾನುಗ್ರದಿಂದ ಸಕಲ ಅಭೀಷ್ಟ ಸಿದ್ಧಿಯಾಗಿ ಸಂತೃಪ್ತಿಯಾಗುವುದು. ಕಷ್ಟದ ದಿನಗಳಲ್ಲಿ ಸಹಕರಿಸಿದವರೊಂದಿಗೆ ನಮ್ರತೆಯಿಂದ, ವಿನಯದಿಂದ ಇರುವುದನ್ನು ಮರೆಯಬೇಡಿ. ವಿಶ್ರಾಂತಿ ಬೇಕೆನಿಸಲಿದೆ.
  • ಧನು
  • ಬಂಧುಗಳ ಮನೆಯ ಶುಭಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಓಡಾಟವಿರುವುದು. ಮಾಡುವ ಕೆಲಸದ ಸರಿ ತಪ್ಪುಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡಿ. ಔಷಧ ವ್ಯಾಪಾರದಿಂದ ಲಾಭ ಹೊಂದಬಹುದು.
  • ಮಕರ
  • ಇಂದು ಕೆಲವು ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ವರ್ಚಸ್ಸಿನ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯುವುದು. ಒಂಟಿತನದ ಚಿಂತೆಯು ಆಗಾಗ ಕಾಡಲಿದೆ.
  • ಕುಂಭ
  • ಅನುಯಾಯಿಗಳಿಗೆ ನೀವಾಡುವ ಆಶ್ವಾಸನೀಯ ವರ್ತನೆಯಿಂದ ಬಹಳ ಸಂತಸ ಉಂಟಾಗುವುದು. ದಂತವೈದ್ಯ ವೃತ್ತಿಯವರಿಗೆ ಹಾಗೂ ದಂತ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅನುಕೂಲವಾದ ದಿನ.
  • ಮೀನ
  • ಗಡಿಬಿಡಿಯ ಸ್ವಭಾವದಿಂದಾಗಿ ಕಂಪನಿಯಲ್ಲಿ ಉಂಟಾದ ತ‍ಪ್ಪುಗಳಿಗೆ ನೇರ ಹೊಣೆಗಾರಿಕೆ ನಿಮ್ಮದ್ದಾಗಿರುತ್ತದೆ. ಯಾವುದೇ ಕೆಲಸವನ್ನು ಮಾಡುವುದಾದರೂ ಎರಡು ಬಾರಿ ಯೋಚಿಸಿ ಮಾಡುವುದು ಉತ್ತಮ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.