ADVERTISEMENT

ದಿನ ಭವಿಷ್ಯ: ಈ ರಾಶಿಯವರು ಉದ್ಯೋಗ ಬದಲಿಸುವ ವಿಚಾರದಲ್ಲಿ ಯೋಚಿಸುವುದು ಉತ್ತಮ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಡಿಸೆಂಬರ್ 2025, 22:30 IST
Last Updated 22 ಡಿಸೆಂಬರ್ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಗೃಹದಲ್ಲಿ ಸಂಭ್ರಮದ ಸಮಾರಂಭದಿಂದ ಅಥವಾ ವೃಥಾ ತಿರುಗಾಟದಿಂದಾಗಿ ಖರ್ಚು ಹೆಚ್ಚಾಗಲಿದೆ. ಪೆಟ್ರೋಲಿಯಂ ಉತ್ಪನ್ನಗಳಿಂದ ಹೆಚ್ಚಿನ ಆದಾಯವಿದೆ. ನೌಕರರಿಗೆ ಅನುಕೂಲ ವಾತಾವರಣ ಸಿಗಲಿದೆ.
  • ವೃಷಭ
  • ಹಿಂದಿನ ಸೋಲು ಬಾಧಿಸುತ್ತಿದ್ದರೂ ಹೊಸತನದಲ್ಲಿ ಜಯ ಕಾಣುವಿರಿ. ಆಫೀಸಿನ ಕೆಲಸಗಳಿಗೆ ದೂರದ ಪ್ರಯಾಣ ಲಾಭದಾಯಕ. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿವೆ.
  • ಮಿಥುನ
  • ದೇವತಾ ಕೃಪೆಯಿಂದ ಕೆಲಸಗಳನ್ನೂ ಲಾಭಮಯವಾಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.  ಬುದ್ಧಿವಂತಿಕೆಯನ್ನೂ ಉಪಯೋಗಿಸಿ. ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಳ್ಳುವ ಬಗ್ಗೆ ಪ್ರಯತ್ನಿಸಿ.
  • ಕರ್ಕಾಟಕ
  • ಸ್ವಲ್ಪ ಜಾಗ್ರತೆ ವಹಿಸಿದಲ್ಲಿ ಕೈಗೊಂಡ ಪೂರ್ವನಿಯೋಜಿತ ಕಾರ್ಯಗಳೆಲ್ಲಾ ಉತ್ತಮ ರೀತಿಯಲ್ಲಿ ನಡೆಯಲಿವೆ. ಕಾರ್ಯಕ್ಷೇತ್ರದಲ್ಲಿ ಶಾಂತಚಿತ್ತದಿಂದ ವ್ಯವಹರಿಸಿದರೆ ಹಾದಿ ಸುಗಮ.
  • ಸಿಂಹ
  • ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸಿ. ವಾಹನ ಮಾರಾಟದಿಂದ ಉತ್ತಮ ಆದಾಯ. ಸಾಧನೆ ಹಾಗೂ ಅಭಿವೃದ್ಧಿ ಸಾಧಿಸುವ ದಿನ ಎನಿಸಲಿದೆ.
  • ಕನ್ಯಾ
  • ಯಾವುದೇ ವಿಷಯವನ್ನು ಸೋಮಾರಿತನದಿಂದಾಗಲೀ, ಆರ್ಥಿಕ ಸಮಸ್ಯೆಯಿಂದಾಗಲೀ ಮುಂದೂಡುವುದು ಸರಿಯಲ್ಲ. ಹಿರಿಯರ ಮಧ್ಯಸ್ತಿಕೆಯಿಂದ ಭೂವಿವಾದ ಬಗೆಹರಿಯುವುದು.  ಸಂತಸದ ಸುದ್ದಿ ಕೇಳಿ ಬರುವುದು.
  • ತುಲಾ
  • ಬೆಳ್ಳಗೆ ಇರುವುದೆಲ್ಲವೂ ಹಾಲು ಎಂದು ನಂಬುವ ನಿಮ್ಮ ಮನೋಧರ್ಮದಿಂದ ಈ ದಿನ ಮೋಸ ಹೋಗುವಿರಿ. ಕರ್ತವ್ಯ ದೃಷ್ಟಿಯಿಂದ ವೃತ್ತಿಕ್ಷೇತ್ರದಲ್ಲಿ ಒಂದೇ ಮನಸ್ಸಿನಲ್ಲಿ ದುಡಿದರೆ ಸಮಾಧಾನ ಹೆಚ್ಚುತ್ತದೆ.
  • ವೃಶ್ಚಿಕ
  • ಟೆಕ್ಸ್ಟ್‌ಟೈಲ್‌ ಉದ್ಯಮದವರಿಗೆ ರಫ್ತು ವ್ಯಾಪಾರಗಳಿಂದ ಬಹಳಷ್ಟು ಹಣ ಹಾಗೂ ವ್ಯಾಪಾರಗಳ ಲಾಭವನ್ನು ಹೊಂದುವರು. ಎಲ್ಲಾ ಕೆಲಸಗಳಿಗೂ ಕುಟುಂಬ ವರ್ಗದವರ ಬೆಂಬಲವಿರಲಿದೆ.
  • ಧನು
  • ಬಹಳ ದಿನಗಳ ನಂತರದ ಸಹೋದರಿಯ ಆಗಮನ ತಂದೆ-ತಾಯಿಯ ಸಂತೋಷಕ್ಕೆ ಕಾರಣವಾಗುತ್ತದೆ. ಪೊಲೀಸ್ ಅಧಿಕಾರಿಗಳು ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವುದು.
  • ಮಕರ
  • ಉದ್ಯೋಗ ಬದಲಿಸುವ ವಿಚಾರದಲ್ಲಿ ಚೆನ್ನಾಗಿ ಯೋಚಿಸುವುದು ಉತ್ತಮ. ಔದ್ಯೋಗಿಕ ವ್ಯವಹಾರದಲ್ಲಿ ನಿರೀಕ್ಷೆಗೆ ತಕ್ಕ ಅಥವಾ ಅದಕ್ಕೂ ಮಿಗಿಲಾದ ಫಲಗಳು ದೊರೆತು ನೆಮ್ಮದಿ ಕಾಣುವಂತಾಗುವುದು.
  • ಕುಂಭ
  • ಇನ್ನೊಬ್ಬರಿಗೆ ನೋವಿಗೆ ಸಮಾಧಾನ ಹೇಳುವ ಅಥವಾ ಕಷ್ಟದಲ್ಲಿರುವವರಿಗೆ ಉಪಕಾರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ. ನಿರೀಕ್ಷೆಗೂ ಮೀರಿದ ಫಲಿತಾಂಶ ಕಾಣುವಿರಿ.
  • ಮೀನ
  • ನೂತನ ಸ್ನೇಹಿತನಿಂದ ಅಥವಾ ಅಪರಿಚಿತರ ವ್ಯಕ್ತಿಯ ಸಹಕಾರದಿಂದ ನಿಮ್ಮ ಕಾರ್ಯ ವ್ಯವಸ್ಥಿತವಾಗಿ ನಡೆಯಲಿದೆ. ಸಹೋದ್ಯೋಗಿಗಳ ಸಂಯಮದ ವರ್ತನೆಯಿಂದ ಅನುಕೂಲ.  ಹೆಚ್ಚುವರಿ ಆದಾಯದಿಂದ ಹುಮ್ಮಸ್ಸು ಹೆಚ್ಚಲಿದೆ. 
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.