ದಿನ ಭವಿಷ್ಯ: ಈ ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಡಿಸೆಂಬರ್ 2025, 22:30 IST
Last Updated 24 ಡಿಸೆಂಬರ್ 2025, 22:30 IST
ದಿನ ಭವಿಷ್ಯ
ಮೇಷ
ಸದಾಕಾಲ ಕಾರ್ಯಪ್ರವೃತ್ತರಾಗಿ, ಸರಿಯಾದ ದಾರಿಯಲ್ಲಿ ದುಡಿಯುವ ನಿಮಗೆ ಈ ದಿನ ಉತ್ತಮ ಫಲಗಳು ಅನುಭವಕ್ಕೆ ಬರಲಿದೆ. ಕುಟುಂಬ ಸದಸ್ಯರ ಆರೋಗ್ಯದ ಬಗೆಗಿನ ಚಿಂತೆ ತಪ್ಪಿದ್ದಲ್ಲ.
ವೃಷಭ
ನಿಮ್ಮ ಕೋಪದ ಮೇಲೆ ನಿಯಂತ್ರಣವಿಲ್ಲದಿದ್ದರೆ, ಸಹೋದರರು ಮತ್ತು ಸ್ನೇಹಿತರು ಎದುರಾಳಿಗಳಾಗುವರು. ಅಧ್ಯಾಪಕ ವರ್ಗದವರಿಗೆ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವುದರಿಂದಾಗಿ ಗೌರವ ಸಿಗುವುದು.
ಮಿಥುನ
ದಾನ, ಧರ್ಮ, ಪರೋಪಕಾರಗಳಲ್ಲಿ ಆಸಕ್ತಿ ಮೂಡಿ ಉಪಕಾರ ಮಾಡುವುದರಿಂದ ಪುಣ್ಯ ಸಂಪಾದನೆಯಾಗುತ್ತದೆ. ದೈವಬಲ ನಿಮ್ಮ ಮೇಲಿದ್ದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯತ್ತ ಸಾಗಲಿದೆ.
ಕರ್ಕಾಟಕ
ಪ್ರಭಾವಿ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಂಪರ್ಕ ಉಪಕಾರಕ್ಕಿಂತ ಹೆಚ್ಚು ತೊಂದರೆಗೆ ದಾರಿ ಮಾಡಿಕೊಡುವುದು. ಸಂಶೋಧನಾ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಮುನ್ನಡೆ. ಆಲಂಕಾರಿಕ ವಸ್ತುಗಳಿಗೆ ಹಣ ವಿನಿಯೋಗಿಸುವಿರಿ.
ಸಿಂಹ
ಕಾರ್ಯ ನಿಮಿತ್ತವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ, ಸಮಾಧಾನ ಇರಲಿ. ನಿಮ್ಮಲ್ಲಿ ಯಾವುದನ್ನೇ ಆಗಲಿ ಸಾಧಿಸಿ ತೋರಿಸುವ ಶಕ್ತಿ ಸಾಮರ್ಥ್ಯವಿದೆ.
ಕನ್ಯಾ
ಗಿಡಮೂಲಿಕೆಗಳ ಬಳಕೆಯಿಂದ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬಂದು ದೈನಂದಿನ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ. ಅಧಿಕ ಜವಾಬ್ದಾರಿಯ ಅಥವಾ ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ.
ತುಲಾ
ಇತರರ ಸಹಾಯವನ್ನು ಅಪೇಕ್ಷಿಸುವಂತಹ ಜನರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಪಾದಿಸಬಹುದು. ವಿವಾಹದ ವಿಚಾರವಾಗಿ ಶುಭವಾಗುವ ಲಕ್ಷಣವಿದೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವಿರಿ.
ವೃಶ್ಚಿಕ
ಮೀನುಗಾರರು ಉದ್ಯೋಗ ನಿಮಿತ್ತ ಸಮುದ್ರಯಾನ ಮಾಡುವಾಗ ಜಾಗರೂಕತೆ ವಹಿಸಬೇಕಾಗುತ್ತದೆ. ನಿಮ್ಮ ಕನಸುಗಳಿಗೆ ಪುನಃ ಜೀವ ಬಂದಂತೆ ಆಗಲಿದೆ. ಮಂಜುನಾಥನ ದರ್ಶನ ಭಾಗ್ಯದಿಂದ ಕಾರ್ಯಾನುಕೂಲವಾಗಲಿದೆ.
ಧನು
ರಾಜಕೀಯ ರಂಗವನ್ನು ಪ್ರವೇಶಿಸುವ ಇಚ್ಚೆಯನ್ನು ನಿಮ್ಮ ಸ್ನೇಹಿತರಲ್ಲಿ ವ್ಯಕ್ತಪಡಿಸಿ ಸಲಹೆ ಪಡೆದುಕೊಳ್ಳಿ. ಯಾವುದೇ ವಿಚಾರಗಳಿಗೂ ಚಿಂತಿಸುವ ಅಗತ್ಯವಿಲ್ಲದ್ದರಿಂದ ಮನಸ್ಸು ನಿರಾಳಗೊಳ್ಳುವುದು.
ಮಕರ
ಕುಟುಂಬದ ಹಾಗೂ ಸ್ನೇಹಿತರ ನಡುವಿನ ಸಂಬಂಧಗಳು ಈ ದಿನ ಇನ್ನಷ್ಟು ಉತ್ತಮಗೊಳ್ಳುವುದು. ಸಕ್ರಿಯ ಹಾಗೂ ಕಾರ್ಯಮಗ್ನತೆಯಿಂದ ಯೋಜನೆಗಳು ಮುಕ್ತಾಯ ಹಂತಕ್ಕೆ ತಲುಪುವುವು. ಗೋ ಸೇವೆಯಿಂದ ಶುಭ.
ಕುಂಭ
ಅರಣ್ಯ ಸುತ್ತಾಡುವ ಹವ್ಯಾಸ ಹೊಂದಿರುವವರು ಜಾಗ್ರತೆವಹಿಸುವುದು ಅವಶ್ಯಕವಾಗಿರುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ.
ಮೀನ
ವಿದ್ಯುತ್ ಕಂಟ್ರ್ಯಾಕ್ಟರ್‌ಗೆ ಲಾಭದಾಯಕವಾದಂತಹ ಕಾಮಗಾರಿಗಳು ದೊರೆಯಲಿದೆ. ನೆರೆಯವರ ಸಹಾಯ ಕೇಳುವ ಸಂದರ್ಭ ಬರಲಿದೆ. ನಿಮ್ಮ ವಾಸಸ್ಥಾನ ಅಥವಾ ಉದ್ಯೋಗ ಬದಲಾಗುವ ಸಂಭವವಿದೆ.