ADVERTISEMENT

ದಿನ ಭವಿಷ್ಯ: ನೆನಪಿನಲ್ಲಿ ಉಳಿಯುವಂತಹ ಒಂದು ಮಧುರ ಘಟನೆ ನಡೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ಜನವರಿ 2026, 0:16 IST
Last Updated 29 ಜನವರಿ 2026, 0:16 IST
   
ಮೇಷ
  • ವೃತ್ತಿಯಲ್ಲಿ ಸ್ಥಾನಪಲ್ಲಟ ಬಯಸಿದ ನಿಮಗೆ ಹೊಸ ಕೆಲಸವು ಹಳೆಯ ಕೆಲಸಕ್ಕಿಂತ ಕಳಪೆ ಎನಿಸಬಹುದು. ಹಾಗಾಗಿ, ಔದ್ಯೋಗಿಕವಾಗಿ ಅನುಭವಸ್ಥರಿಂದ ಕೇಳಿ ಪಡೆದ ಸಲಹೆ ಸೂಚನೆಗಳಿಂದಾಗಿ ಅಭಿವೃದ್ಧಿ ಹೊಂದುವಿರಿ.
  • ವೃಷಭ
  • ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಒಂದು ಮಧುರ ಘಟನೆ ಈ ದಿನ ನಿಮ್ಮ ಮನೆಯಲ್ಲಿ ನಡೆಯಲಿದೆ. ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ. ತಾಯಿಯ ಕಡೆಯ ನೆಂಟರು ಆಕಸ್ಮಿಕವಾಗಿ ಬರುವರು.
  • ಮಿಥುನ
  • ಬದಲಾದ ನಿಮ್ಮ ವೇಳಾಪಟ್ಟಿಗೆ ಸರಿಯಾಗುವಂತೆ ನಿಮ್ಮ ಮನಃಸ್ಥಿತಿಯನ್ನು ತಂದುಕೊಳ್ಳುವಲ್ಲಿ ಕಷ್ಟಪಡಬೇಕಾಗಬಹುದು. ರಾಜರಾಜೇಶ್ವರಿಯನ್ನು ಪ್ರಾರ್ಥಿಸಿ ನಿಮ್ಮ ಅಭೀಷ್ಟಗಳನ್ನು ನೆರವೇರಿಸಿಕೊಳ್ಳಿ.
  • ಕರ್ಕಾಟಕ
  • ನಿಮ್ಮ ಕೆಲಸವನ್ನು ಆದಷ್ಟು ನೀವೇ ಮಾಡಿಕೊಳ್ಳುವುದು ಉತ್ತಮ. ಗೃಹ ಉಪಯೋಗಿ ವಸ್ತುಗಳನ್ನು ಕೊಳ್ಳುವ ಬಗ್ಗೆ ಪತ್ನಿ ಮತ್ತು ಮಕ್ಕಳೊಂದಿಗೆ ಚರ್ಚಿಸುವಿರಿ. ಹಾಲು ಮಾರಾಟಗಾರರಿಗೆ ಲಾಭ ಇರುವುದು.
  • ಸಿಂಹ
  • ನಿಮ್ಮ ಮಗಳ ಮದುವೆಯ ವಿಷಯದಲ್ಲಿ ಜವಾಬ್ದಾರಿಯ ಹಂಚಿಕೆಗೆ ಸಂಬಂಧಿಸಿದಂತೆ ಮಗನೊಡನೆ ಮುಕ್ತ ಮಾತುಕತೆ ನಡೆಯುವುದು. ನಿಮ್ಮ ಜೊತೆ ಸ್ಪರ್ಧಿಸುತ್ತಿದ್ದವರಿಗೆ ನೀವು ಎಚ್ಚರ ತಪ್ಪಿದಲ್ಲಿ ಜಯ ಸಿಗುವುದು.
  • ಕನ್ಯಾ
  • ನಿಮ್ಮ ಹಿರಿಯರ ಕಸುಬನ್ನೇ ಮುಂದುವರಿಸುತ್ತಿರುವವರು ಅವರು ಹಾಕಿ ಕೊಟ್ಟಂತಹ ಪಥದಲ್ಲಿಯೇ ನಡೆಯುವುದರಿಂದ ಶ್ರೇಯಸ್ಸು. ವಾತಾವರಣ ದಿಂದಾಗಿ ಮಂಡಿ ಹಾಗೂ ಸಂದುಗಳಲ್ಲಿ ನೋವು ಕಾಣಿಸುವುದು.
  • ತುಲಾ
  • ಇಂದು ವಿದೇಶಿ ಒಪ್ಪಂದಗಳನ್ನು ಮಾಡಿಕೊಳ್ಳದಿರುವುದು ಒಳ್ಳೆಯದು. ಮನೆಯವರ ಅಥವಾ ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ. ಹೊಸ ವಾಹನ ಖರೀದಿಸುವ ಯೋಗವಿದೆ.
  • ವೃಶ್ಚಿಕ
  • ನಿಮ್ಮ ಎದುರು ಸಹೋದರ ಸಹೋದರಿಯರನ್ನು ಹೊಗಳಿದ ಕಾರಣ ನೀವು ಮುನಿಸಿಕೊಳ್ಳುವ ಸಾಧ್ಯತೆ ಇದೆ. ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆ ಆಗುವುದು. ಸಾಮಾಜಿಕ ವಲಯದಲ್ಲಿ ನಿಮ್ಮ ವರ್ಚಸ್ಸು ಬೆಳೆಯಲಿದೆ.
  • ಧನು
  • ನಿಮ್ಮ ವಿಷಯಗಳನ್ನು ಸೋರಿಕೆ ಮಾಡುತ್ತಿರುವವರು ಕುಟುಂಬದವರೇ ಇರಬಹುದು ಎಂಬ ಅನುಮಾನದಿಂದ ಎಲ್ಲರನ್ನೂ ಪರೀಕ್ಷಿಸುವಿರಿ. ವೃತ್ತಿ ಬದುಕಿನ ಗುರಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯುವಿರಿ.
  • ಮಕರ
  • ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಿಸಿಕೊಳ್ಳುವ ಸಲುವಾಗಿ ಕಾರ್ಯಾಗಾರಗಳಲ್ಲಿ ಭಾಗವಹಿಸುವಿರಿ. ಕನ್ನಡ ಅಥವಾ ಮಾತೃಭಾಷೆಯ ಸಾಹಿತ್ಯದಲ್ಲಿ ಸಂಶೋಧನೆ ನಡೆಸುತ್ತಿರುವವರಿಗೆ ಸಮ್ಮಾನವಾಗುವ ಸಾಧ್ಯತೆ ಇದೆ.
  • ಕುಂಭ
  • ಇಂದು ಕುಟುಂಬದಲ್ಲಾಗಲಿ ಅಥವಾ ಕಾರ್ಯಕ್ಷೇತ್ರದಲ್ಲಾಗಲಿ ನಿಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ತಿಳಿಸದಿದ್ದರೆ ನಷ್ಟವಾಗುತ್ತದೆ. ಪ್ರವಾಸಕ್ಕಾಗಿ ಹೋದ ಪ್ರದೇಶದಲ್ಲಿ ಕೆಲವು ತೊಂದರೆಗಳಾಗುವಂತಹ ಸಂದರ್ಭಗಳಿವೆ.
  • ಮೀನ
  • ಕಾರ್ಯವು ಮಧ್ಯದಲ್ಲಿ ನಿಲ್ಲುವ ಸಾಧ್ಯತೆ ಇರುವುದರಿಂದ ದೃಢವಾದ ನಿರ್ಧಾರದ ನಂತರವಷ್ಟೇ ಹೊಸ ಕೆಲಸ ಮಾಡುವುದು ಉತ್ತಮ. ನಿಮ್ಮ ಜೀವನದ ವಿಶೇಷ ದಿನದ ಪ್ರಯುಕ್ತವಾಗಿ ವೃದ್ಧರ ಸೇವೆಯನ್ನು ಮಾಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.