ADVERTISEMENT

ದಿನ ಭವಿಷ್ಯ: ಆಫೀಸಿನ ಜನರ ಬಗ್ಗೆ ಗಮನವಿಟ್ಟುಕೊಳ್ಳಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 30 ಜನವರಿ 2026, 0:13 IST
Last Updated 30 ಜನವರಿ 2026, 0:13 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಉತ್ತಮವಾಗಿ ಅಂಕಗಳನ್ನು ಪಡೆಯುತ್ತಿದ್ದ ಮಕ್ಕಳು ಏಕಾಗ್ರತೆಯನ್ನು ಕಡಿಮೆ ಮಾಡಿದ ಕಾರಣ ಗಮನಹರಿಸಬೇಕಾಗುತ್ತದೆ. ದರ್ಜಿಯ ನೌಕರರಿಗೆ ಆರ್ಥಿಕವಾಗಿ ಅನುಕೂಲವಾಗುವುದು.
  • ವೃಷಭ
  • ಇಂದಿನ ಪರಿಸ್ಥಿತಿ ಮನದ ಭಾವನೆಗಳನ್ನು ಇತರರೊಂದಿಗೆ ಹಂಚಿ ಕೊಳ್ಳುವಂತೆ ಪ್ರೇರೇಪಿಸುತ್ತದೆ. ಮಗಳಿಗೆ ತಾಯಿಯ ಕಡೆಯಿಂದ ಅಥವಾ ಹತ್ತಿರದ ಸಂಬಂಧಿಕರಿಂದ ವರ ನಿಶ್ಚಯವಾಗುವುದು.
  • ಮಿಥುನ
  • ಗೃಹಿಣಿಯರು ದೇವರಿಗೆ ವಿಶೇಷವಾಗಿ ಪೂಜೆ ಪುನಸ್ಕಾರವನ್ನು ನಡೆಸುವ ಮೂಲಕ ಪುಣ್ಯ ಸಂಪಾದನೆ ಮಾಡುವಿರಿ. ಕೆಲಸದಲ್ಲಿ ಬದಲಾವಣೆ ಬಯಸಿದಲ್ಲಿ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿ.
  • ಕರ್ಕಾಟಕ
  • ವ್ಯವಹಾರದಲ್ಲಿ ಬೇಕಾದ ರೀತಿಯಲ್ಲಿ ಲಾಭ ಮಾಡಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಿರಿ. ಬಟ್ಟೆ ವ್ಯಾಪಾರಿಗಳು ರಿಯಾಯಿತಿ ಮಾರಾಟಗಳಿಂದ ಲಾಭವನ್ನು ಹೊಂದುವಿರಿ.
  • ಸಿಂಹ
  • ಮಧ್ಯಮವರ್ಗದ ಕುಟುಂಬದಲ್ಲಿ ಸಂಬಂಧಿಕರ ಎದುರು ಕೆಲವು ಇರಿಸು ಮುರಿಸುಗಳು ಆಗಬಹುದು. ಬೇಸರ ಪಡುವುದು ಬೇಡ. ಆಫೀಸಿನ ಜನರ ಬಗ್ಗೆ ಗಮನವಿಟ್ಟುಕೊಳ್ಳಿ. ಪರ್ವತಾರೋಹಣ ಮಾಡುವ ಸಾಧ್ಯತೆ ಇದೆ.
  • ಕನ್ಯಾ
  • ಅನುಕೂಲಕರ ವಾತಾವರಣವಿದ್ದಲ್ಲಿ ವಿಶೇಷ ದಿನಗಳಿಗೆ ಬೇಕಾದ ವಸ್ತು ಖರೀದಿ ಮಾಡಿ. ವೈದ್ಯರಿಗೆ ಬಿಡುವಿಲ್ಲದ ಅಭ್ಯಾಸದ ಜತೆಗೆ ಉನ್ನತ ಜವಾಬ್ದಾರಿ ಸಿಗಲಿದೆ.
  • ತುಲಾ
  • ಮೋಸದಿಂದ ಬೇರೆಯವರ ಕೈ ಸೇರಿದ ಹಣ ಹಿಂತಿರುಗುವ ಸೂಚನೆಗಳು ಕಾಣುತ್ತವೆ. ಕಠಿಣ ಪರಿಶ್ರಮದಿಂದ ಬೆಳೆಸಿದ ಸಂಸ್ಥೆ ಜನಮಾನಸವನ್ನು ಗೆಲ್ಲುವುದು. ಧಾರ್ಮಿಕ ಕಾರ್ಯಕ್ಕೆ ಹಣವ್ಯಯವಾಗುವುದು.
  • ವೃಶ್ಚಿಕ
  • ತಮಾಷೆಯ ಮಾತುಗಳು ಹಿರಿಯರ ಮನಸ್ಸನ್ನು ನೋಯಿಸುವುದು. ಮಾತಿನಲ್ಲಿ ಹಿಡಿತವಿರಲಿ. ದಾಂಪತ್ಯದಲ್ಲಿ ಪತಿ ಪತ್ನಿಯರ ನಡುವೆ ಪ್ರಬುದ್ಧತೆಯಿಂದ ಸಾಮರಸ್ಯ ಹೆಚ್ಚುತ್ತದೆ. ಅನವಶ್ಯಕ ಚಿಂತೆ ಬೇಡ.
  • ಧನು
  • ಹೂಡಿಕೆ ಮಾಡುವುದಿದ್ದರೆ ಅನುಭವಸ್ಥ ನಂಬಿಕಸ್ಥರಿಂದ ಕೇಳಿ ತಿಳಿದು ನಂತರವಷ್ಟೇ ಮಾಡಿ. ವೃತ್ತಿಯಲ್ಲಿ ಅನಿರೀಕ್ಷಿತ ಸ್ಥಾನ-ಮಾನದಲ್ಲಿ ಏರುಪೇರಾಗುವಂಥ ಬದಲಾವಣೆಗಳಾಗಬಹುದು.
  • ಮಕರ
  • ಗೃಹ ವಸ್ತುಗಳ ಖರೀದಿ ಮಾಡಿ ಬಂದ ನಂತರ ನೀವು ಕೊಟ್ಟ ಹಣ ದುಬಾರಿಯಾಯಿತೆಂದು ಪರಿತಪಿಸಬೇಕಾದೀತು. ರಿಯಾಯಿತಿಯ ವಸ್ತ್ರ ಖರೀದಿಯಿಂದಾಗಿ ಹೆಚ್ಚು ಹಣವನ್ನು ಉಳಿತಾಯ ಮಾಡುವಿರಿ.
  • ಕುಂಭ
  • ವಿಶೇಷ ಘಟನೆಯಿಂದಾಗಿ ಕಾರ್ಯಾಲಯದ ಎಲ್ಲಾ ವ್ಯಕ್ತಿಗಳು ನಿಮಗೆ ಹತ್ತಿರದವರಾಗುತ್ತಾರೆ. ನಡೆಸುತ್ತಿರುವ ಶುಭ ಕಾರ್ಯಕ್ರಮಗಳಿಗೆ ಅಶೌಚದ ಆತಂಕ ಎದುರಾಗುವುದು.
  • ಮೀನ
  • ಸ್ವಗ್ರಾಮ ಬಿಟ್ಟು ಬೇರೆ ಎಲ್ಲಿಯಾದರೂ ಆಸ್ತಿಯನ್ನು ಖರೀದಿಸುವ ಯೋಚನೆ ಇದ್ದಲ್ಲಿ ಸರಿಯಾದ ವ್ಯಕ್ತಿಯಲ್ಲಿ ವಿಚಾರವನ್ನು ನಡೆಸಿ. ಬಂಧು ಬಾಂದವರೊಂದಿಗೆ ಅತ್ಯಂತ ಗೌಪ್ಯ ವಿಷಯವನ್ನು ತಿಳಿಸದಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.