ದಿನ ಭವಿಷ್ಯ: ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವದ ಅವಕಾಶ ಲಭ್ಯವಾಗುವುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಅಕ್ಟೋಬರ್ 2025, 23:15 IST
Last Updated 5 ಅಕ್ಟೋಬರ್ 2025, 23:15 IST
ದಿನ ಭವಿಷ್ಯ
ಮೇಷ
ನೀವು ಆಡಿದ ಮಾತುಗಳು ನಿಮಗೆ ಮುಳ್ಳಾಗಲಿವೆ, ಆದ್ದರಿಂದ ಮಾತಿನಲ್ಲಿ ಹಿಡಿತವಿರಲಿ. ದಾಖಲೆ ಪತ್ರಗಳನ್ನು ಬರೆಸುವಾಗ ಸಂಖ್ಯೆ ಅಥವಾ ವಾಕ್ಯಗಳ ಬಗ್ಗೆ ಹೆಚ್ಚಿನ ಗಮನವಹಿಸಿ ಮತ್ತು ಪರಿಣತರ ಸಲಹೆಯನ್ನು ಕೇಳಿ.
ವೃಷಭ
ವೈದ್ಯರು ಅದರಲ್ಲೂ ನರ ರೋಗ ತಜ್ಞರು ಅಭ್ಯಾಸದಲ್ಲಿ ತೋರಿದ ಬೇಜವಾಬ್ದಾರಿತನದಿಂದ ಪಾಪ ಸಂಗ್ರಹಣೆಯಾಗುವುದು. ಪ್ರತಿ ವರ್ಷ ಮಾಡುತ್ತಿದ್ದ ಧಾರ್ಮಿಕ ಕೆಲಸವನ್ನು ಮುಂದುವರಿಸುವ ಬಗ್ಗೆ ತೀರ್ಮಾನಿಸಿ.
ಮಿಥುನ
ಉದ್ವೇಗ ಹಾಗೂ ಕೆಲ ವೈಮನಸ್ಸುಗಳು ದೂರಾವಾಗುವುದು. ಹಣಕಾಸಿನ ಕೊರತೆ ಅಷ್ಟಾಗಿ ಕಾಡದು. ಮಗನ ಕೆಲಸ ನೆರವೇರಿದ ಕಾರಣಕ್ಕೆ ಹೇಳಿಕೊಂಡ ಹರಕೆಯನ್ನು ಪೂರ್ಣಗೊಳಿಸುವ ಬಗ್ಗೆ ಮಗನಲ್ಲಿ ಪ್ರಸ್ತಾಪಿಸಿ.
ಕರ್ಕಾಟಕ
ಕುಟುಂಬದ ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುವಿರಿ. ಸ್ಥಾನ ಬದಲಾವಣೆಯಿಂದ ನೆಮ್ಮದಿಯ ವಾತಾವರಣ ಸೃಷ್ಟಿಯಾಗುವುದು. ವಿವಾಹದ ಭಾವನೆಗಳನ್ನು ತಂದೆ ತಾಯಿಯ ಬಳಿ ವ್ಯಕ್ತಪಡಿಸಲು ಸುಸಮಯವಾಗಿದೆ.
ಸಿಂಹ
ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆಯುವ ಕಾಲವಿದು. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪುನಃ ಪುನಃ ಪಾಠ ಕಲಿಯುವಂತೆ ಆಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.
ಕನ್ಯಾ
ಸೋಮಾರಿತನವನ್ನು ದೂರ ಮಾಡಿದರೆ, ಯೋಗ್ಯತೆಗೆ ಮೀರಿದ ಕೆಲಸ ಕಾರ್ಯಗಳಿಗೆ ಕೈಹಾಕಿದರೂ ಸಮಸ್ಯೆ ಆಗುವುದಿಲ್ಲ. ವೈಯಕ್ತಿಕ ವಿಚಾರಗಳತ್ತ ಗಮನ ಹರಿಸುವಿರಿ. ಭೂ ವ್ಯವಹಾರದಲ್ಲಿ ವಂಚನೆಯಾಗುವ ಸಾಧ್ಯತೆಗಳಿದೆ.
ತುಲಾ
ಉದ್ಯೋಗದಲ್ಲಿ ತೊಂದರೆಗಳಿರುವುದಿಲ್ಲ. ವ್ಯವಹಾರ ನಿಮಿತ್ತ ದ ಪ್ರಯಾಣದಲ್ಲಿ ನಯವಂಚಕರ ಬಗ್ಗೆ ಎಚ್ಚರವಹಿಸಿ. ಪಿತ್ತ ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು. ಜಗನ್ಮಾತೆಯನ್ನು ಆರಾಧಿಸಿ.
ವೃಶ್ಚಿಕ
ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ. ಕೆಲಸಗಳು ಸರಾಗವಾಗಿ ನೆರವೇರುವುದು. ನಿಮ್ಮ ಸಮಯೋಚಿತವಾದ ಬುದ್ಧಿಶಕ್ತಿಯು ಸಂಕಟಗಳನ್ನು ದೂರ ಮಾಡಲಿದೆ.
ಧನು
ಮನೆಯಲ್ಲಿ ಶಾಂತಿ ಹೋಮ ನಡೆಸಲು ಖರ್ಚಿನ ವಿಷಯ ಚರ್ಚೆಗೆ ಬರುವುದು. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ಮನಸ್ಸಿನ ಚಂಚಲತೆಯಿಂದಾಗಿ ಕೆಲಸದಲ್ಲಿ ವಿಫಲರಾಗುವ ಸನ್ನಿವೇಶಗಳಿರುವುದು.
ಮಕರ
ದುರ್ಜನರ ಸಹವಾಸದಿಂದ ಅಪವಾದಗಳಿಗೆ ಒಳಗಾಗುವಿರಿ, ಆದ್ದರಿಂದ ಸಜ್ಜನರ ಸಹವಾಸವನ್ನು ಮಾಡಿರಿ. ಉದ್ಯೋಗಿಗಳಿಗೆ ವೃತ್ತಿಯು ತಾತ್ಕಾಲಿಕ ಸಮಾಧಾನವನ್ನು ತಂದರೂ ಬದಲಾವಣೆಗೆ ಅವಕಾಶ ಇರುತ್ತದೆ.
ಕುಂಭ
ವ್ಯಾವಹಾರಿಕ ಸಂಬಂಧಗಳು ವಿಸ್ತಾರಗೊಳ್ಳಲಿವೆ. ತಾಂತ್ರಿಕ ವರ್ಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಧಿಕ ಒತ್ತಡದ ಜೊತೆಯಲ್ಲಿ ಅಧಿಕ ಲಾಭವೂ ದೊರಕಲಿದೆ. ನವಗ್ರಹ ಪೂಜೆಯಿಂದ ಶುಭ ವಾರ್ತೆ ಪಡೆಯುವಿರಿ.
ಮೀನ
ಸಾಲ ಮರುಪಾವತಿ ಬಗ್ಗೆ ಚಿಂತೆ ಉಂಟಾಗುತ್ತದೆ. ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವದ ಅವಕಾಶ ಲಭ್ಯವಾಗುವುದು. ಸಂಜೆಯ ಸಮಯದಲ್ಲಿ ಬೆಲೆ ಬಾಳುವ ವಸ್ತು ಕಾಣೆಯಾಗುವ ಸಂಭವವಿದೆ, ಜಾಗ್ರತೆವಹಿಸಿ.