ADVERTISEMENT

ದಿನ ಭವಿಷ್ಯ: ಈ ರಾಶಿಯ ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರಶಸ್ತಿ ಲಭಿಸುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಜೂನ್ 2024, 0:00 IST
Last Updated 7 ಜೂನ್ 2024, 0:00 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಸ್ತ್ರ ವಿನ್ಯಾಸ ಸಲಹೆಗಾರರಿಗೆ ಪ್ರತಿಷ್ಠಿತ ಗಾರ್ಮೆಂಟ್ ಸಂಸ್ಥೆಯೊಂದರಲ್ಲಿ ಉದ್ಯೋಗ ಸಿಗುವ ಕುರುಹುಗಳು ಸಿಗುತ್ತವೆ. ಕಾಲು ನೋವು ಅಥವಾ ಬೆನ್ನು ನೋವು ಕಾಣಿಸಿದವರಿಗೆ ವೈದ್ಯರ ದರ್ಶನ ಅಗತ್ಯವೆನಿಸಲಿದೆ.
  • ವೃಷಭ
  • ಆತುರದಲ್ಲಿ ವಿದ್ಯಾಭ್ಯಾಸ ಹಾಗು ವೃತ್ತಿಯ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಪಶ್ಚಾತಾಪ ಪಡಬೇಕಾಗುವುದು. ದನ ಕರುಗಳ ಅಥವಾ ಮನೆಯಲ್ಲಿ ಸಾಕಿರುವ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿಸಿ.
  • ಮಿಥುನ
  • ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಅದೇ ರೀತಿ ಗ್ರಾಹಕರಿಂದ ದೂರುಗಳನ್ನು ಕೇಳುವ ಸಂಭವವೂ ಇದೆ. ತಾಯಿಯವರ ಆರೋಗ್ಯ ಸುಧಾರಿಸಿ ನೆಮ್ಮದಿ ಉಂಟಾಗಲಿದೆ.
  • ಕರ್ಕಾಟಕ
  • ಸಲಹೆ ಸೂಚನೆಗಳನ್ನು ಮೇಲಧಿಕಾರಿಗಳು ಯಾವುದೇ ವ್ಯತ್ಯಾಸವಿಲ್ಲದೆ ಜಾರಿಗೆ ತಂದದ್ದಕ್ಕೆ ಸಂತೋಷವಾಗಲಿದೆ. ಕಾಲಿನ ನೋವು ನಿವಾರಿಸಿಕೊಳ್ಳಲು ಸೂಕ್ತ ವ್ಯಾಯಾಮ, ತೈಲ ಲೇಪನದಂತಹ ಪರಿಹಾರ ತಿಳಿದುಕೊಳ್ಳುವಿರಿ.
  • ಸಿಂಹ
  • ಔಷಧಿ, ರಸಗೊಬ್ಬರ ಮತ್ತು ಕೀಟ ನಾಶಕಗಳಂಥ ರಾಸಾಯನಿಕ ವಸ್ತುಗಳನ್ನು ತಯಾರು ಮಾಡುವವರಿಗೆ ಹೊಸ ಪ್ರಯೋಗವು ಉತ್ತಮ ಫಲಿತಾಂಶ ನೀಡಲಿದೆ. ಕಷ್ಟಪಟ್ಟು ದುಡಿದ ಹಣ ಕೈಯಲ್ಲಿ ನಿಲ್ಲುವುದು.
  • ಕನ್ಯಾ
  • ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರಶಸ್ತಿ ಲಭಿಸುವುದು ಅಥವಾ ಸಮಾಜದಲ್ಲಿ ಹೆಸರು ಲಭಿಸುವುದರ ಜತೆಗೆ ಬೇಡಿಕೆ ಹೆಚ್ಚಾಗಲಿದೆ. ದೂರ ಸಂಚಾರದಲ್ಲಿ ಕಾರ್ಯಾನುಕೂಲ ತೋರಿಬಂದು ಮಾನಸಿಕ ನೆಮ್ಮದಿ ತರಲಿದೆ.
  • ತುಲಾ
  • ಭೂಮಿ ಅಥವಾ ವಾಹನ ಖರೀದಿಯಲ್ಲಿ ಮೋಸ ಹೋಗುವ ಅದರಲ್ಲೂ ದಾಖಲೆಗಳ ವಿಚಾರದಲ್ಲಿ ವ್ಯತ್ಯಾಸ ಆಗಬಹುದು. ಮನಸ್ಸಿಗೆ ಅಸಮಾಧಾನ ಆಗುವಂತಹ ಹಲವು ಘಟನೆಯು ನಡೆಯಲಿದೆ.
  • ವೃಶ್ಚಿಕ
  • ಪಿತ್ರಾರ್ಜಿತವಾದ ಕೃಷಿ ಪ್ರದೇಶ ಅಥವ ಗೃಹ ಮಾರಾಟವು ನಿಮ್ಮ ಹಿರಿಯರ ಮನಸ್ಸನ್ನು ನೋವಿಸಲಿದೆ. ತೀಕ್ಷ್ಣ ಮಾತುಗಳು ಬೇರೆಯವರ ದುಃಖಕ್ಕೆ ಕಾರಣವಾಗದಂತೆ ಗಮನಿಸುವುದು ಮುಖ್ಯ.
  • ಧನು
  • ಮನೆಯಲ್ಲಿನ ಯುದ್ಧದ ವಾತಾವರಣವನ್ನು ಮನೆಯ ಯಜಮಾನತಿಯ ಸ್ಥಾನದಲ್ಲಿ ನಿಂತು ತಿಳಿಗೊಳಿಸಬೇಕಾದುದು ಕರ್ತವ್ಯವಾಗಿರುತ್ತದೆ. ಗೋ ಉತ್ಪನ್ನಗಳ ಮಾರಾಟವು ಲಾಭದಾಯಕ.
  • ಮಕರ
  • ಮನರಂಜನೆಗಾಗಿ ಅಥವ ಕ್ಷಣಿಕ ಸುಖದ ಅನುಭವಕ್ಕಾಗಿ ದುಂದುವೆಚ್ಚ ಮಾಡಿ ಮುಂದಿನ ದಿನಗಳಲ್ಲಿ ಕೊರಗುವಂತೆ ಮಾಡಿಕೊಳ್ಳದಿರಿ. ಗಾರ್ಮೆಂಟ್ಸ್ ಕೆಲಸಗಾರರಿಗೆ ವೇತನ ಹೆಚ್ಚುವುದರಿಂದ ಸಂತಸವಿರುವುದು.
  • ಕುಂಭ
  • ರಬ್ಬರ್, ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಯ ವ್ಯವಹಾರದಲ್ಲಿರುವವರು ಏಳಿಗೆ ಕಂಡು ನೆಮ್ಮದಿಯನ್ನು ಕಾಣುವರು. ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ ಕಡಿಮೆ ಪ್ರಯತ್ನದಿಂದಲೇ ಅಧ್ಯಾಪಕ ವೃತ್ತಿ ದೊರೆಯುವ ಸಂಭವವಿದೆ.
  • ಮೀನ
  • ಸ್ನೇಹಪರ ಸ್ವಭಾವದಿಂದಾಗಿ ಕಾರ್ಯಕ್ಷೇತ್ರದಲ್ಲಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ಎಲ್ಲವನ್ನು ಮಾಡಬಲ್ಲೆನೆಂಬ ಹುಮ್ಮಸ್ಸು ಬಂದಿದೆ. ಸುಲಭವಾಗಿ ಕೆಲಸ ಪೂರೈಸುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.