ADVERTISEMENT

ದಿನ ಭವಿಷ್ಯ: ಈ ರಾಶಿಯ ಔಷಧಿ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 27 ಫೆಬ್ರುವರಿ 2026, 23:30 IST
Last Updated 27 ಫೆಬ್ರುವರಿ 2026, 23:30 IST
   
ಮೇಷ
  • ರಕ್ತ ಸಂಬಂಧಿ ಕಾಯಿಲೆ ಹೊಂದಿದವರು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಸತ್ಯ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ  ಅನುಭವಕ್ಕೆ ಬರಲಿದೆ.
  • ವೃಷಭ
  • ವ್ಯವಹಾರದಲ್ಲಿ ಅನಗತ್ಯ ವಿಷಯಗಳತ್ತ ಗಮನಹರಿಸದೆ ಇರುವಂಥ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ದಾಂಪತ್ಯದಲ್ಲಿ ಹೊಂದಾಣಿಕೆಯ ಮನೋಭಾವದಿಂದ ಸಾಮರಸ್ಯ ವೃದ್ಧಿ.
  • ಮಿಥುನ
  • ಆಲೋಚಿಸಿದಂತೆ ಕೆಲಸ ನಡೆಯದೇ ಸೋಲು, ಹಿನ್ನಡೆ ಎಂಬಂತೆ  ಮನಸ್ಸಿಗೆ ಬರಬಹುದು. ದೇವರ ಆಶೀರ್ವಾದ ನಿಮ್ಮ ಮೇಲಿರುವುದರಿಂದ ಸರಿಯಾದ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳುತ್ತವೆ.
  • ಕರ್ಕಾಟಕ
  • ವೃತ್ತಿ ಬದುಕಿನಲ್ಲಿ ಅಭಿಪ್ರಾಯಗಳಿಗೆ ವಿರೋಧ ಬರಲಿದೆ. ವಿಶ್ವಾಸದಲ್ಲಿ ಯಾವುದೇ ರೀತಿಯ ಸಲಹೆ ಸೂಚನೆ ನೀಡಬೇಡಿ. ಬರಬೇಕಾಗಿದ್ದ ಹಣ ವಸೂಲು ಮಾಡಿಕೊಳ್ಳಲು ನಿಷ್ಠುರವಾಗಿ ವರ್ತಿಸಬೇಕಾಗುವುದು.
  • ಸಿಂಹ
  • ಪ್ರಕೃತಿ ವಿಕೋಪದ ಕಾರಣದಿಂದ ಮನೆಯಲ್ಲಿ ಸಣ್ಣ-ಪುಟ್ಟ ರಿಪೇರಿ ಕೆಲಸ ಮಾಡಿಸಬೇಕಾದ ಅನಿವಾರ್ಯವಾಗುವುದು. ದೈವಾನುಗ್ರಹದಿಂದ ಸಾಹಸ ಕಾರ್ಯಗಳು ಕೈಗೂಡಲಿವೆ.
  • ಕನ್ಯಾ
  • ನಂಬಿರುವ ವ್ಯಕ್ತಿಗಳ ಬಗ್ಗೆ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆನಿಸಿದರೂ ಹಾಗೆ ಮಾಡದಿರಿ. ಜಾಣತನದಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ.
  • ತುಲಾ
  • ಧಾರ್ಮಿಕ ನಾಯಕರಿಗೆ ಮರೆಯಲಾಗದ ಘಟನೆಯೊಂದು  ಸುತ್ತಮುತ್ತಲಿನಲ್ಲಿ ನಡೆಯುವುದು.  ಅವಲಂಬಿಸಿರುವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಲಿದೆ. ಸಂತಾನಾಪೇಕ್ಷಿಗಳು ಫಲವನ್ನು ಪಡೆಯುವಿರಿ.
  • ವೃಶ್ಚಿಕ
  • ಕಟ್ಟಡ ಕಾರ್ಮಿಕರಿಗೆ ಮತ್ತು ದಿನಕೂಲಿಗಾರರಿಗೆ ಅಭಿವೃದ್ಧಿಯ ಬದುಕಿಗೆ ಬೇಕಾದ ಅವಕಾಶಗಳು ಸಿಗಲಿವೆ. ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ಸಮಾಧಾನವನ್ನು ಕಂಡುಕೊಳ್ಳಬಹುದು.
  • ಧನು
  • ನಿಮ್ಮಿಂದ ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸಿಕ್ಕಿ ಮನಸ್ಸಿಗೆ  ನೆಮ್ಮದಿಯಾಗಲಿದೆ.   ಪ್ರತಿ ಹೆಜ್ಜೆಯು  ಆತ್ಮಸಾಕ್ಷಿಗೆ ಒಪ್ಪುವಂತೆ ಇರಲಿ. ಔಷಧಿ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು.
  • ಮಕರ
  • ವ್ಯವಹಾರದಲ್ಲಿ ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ಸಾಮರ್ಥ್ಯ ತೋರಿಸುವ ಬಗ್ಗೆ ನಿಮ್ಮ ಶ್ರಮವಿರಲಿ. ಸಹಾಯ ಹಸ್ತಗಳ ಮುಖಾಂತರವಾಗಿ ಅಪೂರ್ಣ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.
  • ಕುಂಭ
  • ವರಮಾನವನ್ನು ಪಡೆಯುವ ಮುಖ್ಯ ಆಕಾಂಕ್ಷೆಯಿಂದ ಸುಲಭದ ಮತ್ತು ಹತ್ತಿರದ ಕೆಲಸ ತಿರಸ್ಕರಿಸಬೇಡಿ. ವ್ಯಾಪಾರ ಮಾರುಕಟ್ಟೆ ವಿಸ್ತರಿಸಲು ಬೇಕಾದ ತಯಾರಿ ಮಾಡಿಕೊಳ್ಳಿರಿ. ರಿಪೇರಿಗಾಗಿ ಖರ್ಚು ಸಂಭವಿಸಲಿದೆ.
  • ಮೀನ
  • ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಮಧ್ಯವರ್ತಿಗಳ ಮಾತನ್ನು ನಿರ್ಲಕ್ಷಿ ಸುವುದು ಸಮಂಜಸವೆಂಬುವುದು ಅನಿಸಿಕೆ. ಸ್ವಂತ  ಸಮಸ್ಯೆಗಳನ್ನು ನೀವೇ ನಿವಾರಿಸಿಕೊಳ್ಳುವಂತೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.