ADVERTISEMENT

ದಿನ ಭವಿಷ್ಯ: ಈ ರಾಶಿಯವರ ಕಂಕಣ ಬಲದ ಸಾಧ್ಯತೆಯು ಹೆಚ್ಚಾಗಿ ಇರುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಜನವರಿ 2026, 23:32 IST
Last Updated 15 ಜನವರಿ 2026, 23:32 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ದಿನದ ಅಂತ್ಯದಲ್ಲಿ ನಾಳೆಯ ಕೆಲಸಗಳ ಬಗ್ಗೆ ಗಮನಹರಿಸಿ ಪೂರ್ವ ತಯಾರಿಯನ್ನು ಮಾಡಿಕೊಳ್ಳುವುದರಿಂದ ನಾಳೆ ಸುಲಭವಾಗುತ್ತದೆ. ವೃತ್ತಿಯಲ್ಲಿ ಹೊಸ ಬದುಕು ಆರಂಭಿಸಲು ಅವಕಾಶಗಳ ಬಾಗಿಲು ತೆರೆದಿವೆ.
  • ವೃಷಭ
  • ಈ ದಿನ ಕೆಲಸ ಕಾರ್ಯಗಳಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ. ಆದರೆ ಸೋಮಾರಿತನ, ಅತಿಯಾದ ನಿದ್ದೆ ನಿಮ್ಮ ಈ ದಿನದ ಕಾರ್ಯಕ್ಕೆ ಭಂಗವನ್ನು ತರಲಿದೆ. ದುಡಿಕಿನ ಕೆಲವು ನಿರ್ಧಾರಗಳಿಂದ ಆತ್ಮೀಯರಲ್ಲಿ ಮನಸ್ತಾಪವಾಗಲಿದೆ.
  • ಮಿಥುನ
  • ಮನೆಯಲ್ಲಿನ ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಿರಿಯರ ಸಲಹೆ ಪಡೆದು ಒಂದು ತೀರ್ಮಾನಕ್ಕೆ ಬರುವುದು ಉತ್ತಮ. ತಾರ್ಕಿಕ ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಲು ಇದು ಸೂಕ್ತವಾದ ಸಮಯವಾಗಿದೆ.
  • ಕರ್ಕಾಟಕ
  • ಹಿಂದೆ ಯಾವುದೋ ದಿನ ಮಾಡಿದ ಕೆಲಸದ ಫಲವಾಗಿ ಈ ದಿನ ಅದರ ಲಾಭ ಬಂದು ಕೈ ಸೇರಿದ ಸಂತಸ ಆಗಲಿದೆ. ಸಂಬಂಧ ನಿಭಾಯಿಸುವಲ್ಲಿ ಇಂದು ಉಂಟಾಗುವ ಸೋಲಿಗೆ ನಿಮ್ಮ ಆಲಸ್ಯತನವೇ ಮುಖ್ಯ ಕಾರಣವಾಗಿರುತ್ತದೆ.
  • ಸಿಂಹ
  • ಸಮಾಜದಲ್ಲಿ ಹೆಸರು ಸಂಪಾದಿಸಲು ಪೂರಕವಾದ ವಾತಾವರಣ ಮೂಡಿಬರಲಿದೆ. ಆಭರಣ ಅಥವಾ ಬಟ್ಟೆ ವ್ಯಾಪಾರ ಮಾಡುವವರು ಪತ್ರಿಕೆಯವರ ಸಹಕಾರದಿಂದ ಪ್ರಚಾರವನ್ನು ಪಡೆದುಕೊಳ್ಳಬಹುದು. ಹೊಸ ಉತ್ಸಾಹ ಮೂಡಲಿದೆ.
  • ಕನ್ಯಾ
  • ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಸನ್ನಿವೇಶಗಳು ನಡೆಯುವುದು. ಇಂದಿನ ಕೆಲಸ, ಇಂದೇ ಮುಗಿಸುವುದನ್ನು ಕಾರ್ಯರೂಪಕ್ಕೆ ತಂದುಕೊಳ್ಳಿರಿ. ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗಬಹುದು.
  • ತುಲಾ
  • ಪ್ರತಿಷ್ಠಿತ ಸಂಸ್ಥೆಗಳೊಡನೆ ಸಹಭಾಗಿತ್ವ ಒಪ್ಪಂದಗಳನ್ನು ಮಾಡಿಕೊಳ್ಳುವುದರಿಂದ ಹೆಚ್ಚಿನ ವರಮಾನ ಮತ್ತು ಸಮಾಜದಲ್ಲಿ ಉನ್ನತ ಸ್ಥಾನಮಾನ ನಿರೀಕ್ಷಿಸಬಹುದು. ಖರ್ಚು ವೆಚ್ಚಗಳ ಮೇಲೆ ಹಿಡಿತ ಸಾಧಿಸಬೇಕಾಗುತ್ತದೆ.
  • ವೃಶ್ಚಿಕ
  • ಮನೆಯಲ್ಲಿ ಶುಭ ಕಾರ್ಯಗಳ ತಯಾರಿ ಉತ್ತಮ ರೀತಿಯಲ್ಲಿ ನಡೆಯುವುದು. ಖಾದ್ಯ ತೈಲಗಳ ವ್ಯಾಪಾರಗಳಿಂದ ಹೇರಳ ಲಾಭವನ್ನು ಹೊಂದುವಿರಿ. ದಂತ ವೇದನೆಯಿಂದ ದಂತವೈದ್ಯರನ್ನು ಸಂಪರ್ಕಿಸಬೇಕಾಗಬಹುದು.
  • ಧನು
  • ಭೂಸಂಬಂಧಿ ಅದರಲ್ಲೂ ಕೃಷಿ ಭೂಮಿ ವ್ಯವಹಾರದಲ್ಲಿರುವವರಿಗೆ ಧನಲಾಭ. ಹಿರಿಯರ ಆಶೀರ್ವಾದ ಮತ್ತು ಮಾರ್ಗದರ್ಶನ ನಿಮ್ಮ ಪಾಲಿಗಿರುವುದರಿಂದ ಶುಭವಾಗುವುದು. ಕಂಕಣ ಬಲದ ಸಾಧ್ಯತೆಯು ಹೆಚ್ಚಾಗಿ ಇರುವುದು.
  • ಮಕರ
  • ಯಾವುದೇ ಸ್ವಾರ್ಥ ಅಪೇಕ್ಷೆ ಇಲ್ಲದೇ ಮಾಡುತ್ತಿರುವ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಇರುತ್ತದೆ. ಹೊಸ ಹಾದಿಯಲ್ಲಿ ಹೆಜ್ಜೆ ಇಡಲು ಇಂದು ಸುಸಮಯ. ಮನೆಗಾಗಿ ವಿಲಾಸಿ ಸಾಮಗ್ರಿಗಳನ್ನು ಖರೀದಿಸುವುದು ಖರ್ಚಿಗೆ ದಾರಿಯಾಗಲಿದೆ.
  • ಕುಂಭ
  • ಬಂಧುಗಳ ಮನೆಯಲ್ಲಿ ನಡೆಯುವ ಕೆಲವು ವಿಚಿತ್ರವಾದ ಆಚರಣೆಗಳಿಂದ ನಿಮಗೆ ಗೊಂದಲ ಮೂಡಬಹುದು. ಉದ್ಯೊಗ ನಿಮಿತ್ತ ಪ್ರಯಾಣದ ಸಾಧ್ಯತೆ ಇರುವುದು. ವಸ್ತ್ರವಿನ್ಯಾಸದಲ್ಲಿ ವಿಶೇಷ ಪರಿಣಿತಿ ಪಡೆದುಕೊಳ್ಳುವಿರಿ.
  • ಮೀನ
  • ಈ ದಿನದ ಕಾರ್ಯಸಾಧನೆಯಲ್ಲಿ ಸ್ವಲ್ಪ ಪರಿಶ್ರಮವನ್ನೂ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ನೀವು ಮಾಡುವ ಕೆಲಸದಲ್ಲಿ ದೋಷಗಳು ಇರಲಿವೆ. ಅಧಿಕಾರ, ಅನುಭವದಿಂದ ನಿಮ್ಮ ಆತ್ಮಾಭಿಮಾನ ದುರಾಭಿಮಾನವಾಗದಿರಲಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.