ADVERTISEMENT

ದಿನ ಭವಿಷ್ಯ: ಈ ರಾಶಿಯವರ ಸಾಲದ ಹೊರೆಯು ಕಡಿಮೆಯಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಜನವರಿ 2026, 0:12 IST
Last Updated 18 ಜನವರಿ 2026, 0:12 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮುಖ್ಯವಾದ ಕೆಲಸಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಬೇಕಾಗುವುದು. ಸ್ಟೇಷನರಿ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಬೇಡಿಕೆ ಹಾಗೂ ಮಾರಾಟದಿಂದ ಲಾಭವಿದೆ.
  • ವೃಷಭ
  • ಮಕ್ಕಳ ಮದುವೆಯಂತಹ ವಿಚಾರವನ್ನು ತಿಳಿ ಮನಸ್ಸಿನಿಂದ ಆಲೋಚಿಸಿ, ಸಮಸ್ಯೆಗಳಿಗೆ ಉತ್ತರ ಸಿಗುವುದು. ಸುಡುವ ಪದಾರ್ಥದಿಂದ ದೂರವಿರುವುದು ಉತ್ತಮ. ನಿಮ್ಮ ಆಲೋಚನೆಗಳು ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ.
  • ಮಿಥುನ
  • ಅತ್ಯಂತ ಕಠಿಣವಾದ ಪರಿಸ್ಥಿತಿಯನ್ನು ಅನುಭವಿಸಿದ ನಿಮಗೆ ಈ ದಿನ ಆಶಾದಾಯಕ ಹಾಗೂ ಆರಾಮದಾಯಕವಾಗಿರುತ್ತದೆ. ಸೂಕ್ಷ್ಮ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಎಚ್ಚರವಹಿಸುವುದು ಉತ್ತಮ.
  • ಕರ್ಕಾಟಕ
  • ಸಮಯದ ಅಭಾವದಿಂದಾಗಿ ಕೆಲವು ವಿಷಯಗಳು ನಿಮಗೆ ಮುಖ್ಯವೆಂದು ತೋರುತ್ತಿದ್ದರೂ ಸಹ ಅದನ್ನು ಇಂದಿನ ವೇಳಾಪಟ್ಟಿಯಿಂದ ತೆಗೆದು ಹಾಕುವಿರಿ. ಸಾಲದ ಹೊರೆಯು ಕಡಿಮೆಯಾಗಲಿದೆ.
  • ಸಿಂಹ
  • ಈ ದಿನ ನೀವು ಮಾಡುವ ಕೆಲಸವನ್ನು ಸಮಯೋಚಿತ ಬುದ್ಧಿಯಿಂದ ಯೋಚಿಸಿ ಮಾಡುವುದು ಉತ್ತಮ. ನಿಮ್ಮ ಚಾಣಾಕ್ಷತನದ ನಿರ್ಧಾರಗಳು ನಿಮ್ಮನ್ನು ಗಣ್ಯ ವ್ಯಕ್ತಿಯನ್ನಾಗಿ ಮಾಡಲಿದೆ. ಶ್ರೀ ದುರ್ಗಾದೇವಿಯನ್ನು ಭಜಿಸಿ ಶುಭವಾಗುತ್ತದೆ
  • ಕನ್ಯಾ
  • ಕೆಲಸ ಕಾರ್ಯಗಳು ಕೈಗೂಡಲೆಂದು ದೇವರಲ್ಲಿ ಹೊತ್ತ ಹರಕೆಯನ್ನು ತೀರಿಸಲು ಹೆಚ್ಚಿನ ಪ್ರಯತ್ನ ಮತ್ತು ಆಸಕ್ತಿ ಇರಲಿ. ನಿಮ್ಮ ಗೊಂದಲಕ್ಕೆ ಕಾರಣವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು.
  • ತುಲಾ
  • ಜೀವನದಲ್ಲಿ ಕೆಲವು ವಿಚಾರಕ್ಕೆ ಆತಂಕ ಮೂಡಿ ಮನೋಧೈರ್ಯವನ್ನು ಕಟ್ಟಿಹಾಕಿಕೊಳ್ಳುತ್ತದೆ. ನಿಮ್ಮ ಆರನೆಯ ಇಂದ್ರಿಯದ ಸೂಚನೆಯ ಸಹಾಯ ಇಂದು ನಿಮಗೆ ಉಪಯುಕ್ತವಾಗಲಿದೆ. ನಿಮ್ಮ ಸಮಸ್ಯೆಗಳಿಗೆ ಮುಕ್ತಿಸಿಗಲಿದೆ.
  • ವೃಶ್ಚಿಕ
  • ನಿಮ್ಮ ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿ ಉತ್ತಮ ಚಟುವಟಿಕೆಗಳು ಇರುವುವು ಜೊತೆಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಇರುವುದು. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಉಂಟಾಗಬಹುದು.
  • ಧನು
  • ಉನ್ನತ ಶಿಕ್ಷಣದ ಮನಸ್ಸಿದ್ದರೂ ಸಹ ಹಲವು ನಿಬಂಧನೆಗಳಿಂದ ವೃತ್ತಿಯನ್ನೇ ಆರಿಸಿಕೊಳ್ಳುವಿರಿ. ಪಿತ್ತಕೋಶಕ್ಕೆ ಸಂಬಂಧಿಸಿದಂತೆ ಅನಾರೋಗ್ಯಗಳು ಎದುರಾಗಬಹುದು. ಅಧ್ಯಯನ ನಿರತರಿಗೆ ಸೂಕ್ತ ಸಹಾಯ ಲಭ್ಯವಾಗುವುದು.
  • ಮಕರ
  • ಕ್ಷಣಿಕ ಸುಖಗಳಿಗೆ ಗಮನ ನೀಡದೆ, ಮುಖ್ಯವಾದ ವಿಷಯಗಳ ಬಗ್ಗೆ ಗಂಭೀರವಾಗಿ ಆಲೋಚಿಸುವುದು ನಿಮ್ಮ ಏಳಿಗೆಗೆ, ಅಭಿವೃದ್ಧಿಗೆ ಮೆಟ್ಟಿಲುಗಳಾಗುವುದು. ಆಟಿಕೆಗಳ ಮಾರಾಟದವರಿಗೆ ಉತ್ತಮ ಮಾರಾಟ ಹಾಗೂ ಲಾಭವಿದೆ.
  • ಕುಂಭ
  • ಈ ದಿನ ದೇವತಾನುಗ್ರಹದಿಂದ ಆರ್ಥಿಕ ಖರ್ಚು-ವೆಚ್ಚಗಳ ಸಮತೋಲನ, ಕುಟುಂಬದಲ್ಲೂ ತೃಪ್ತಿ ಇರುವುದು. ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಇಂದು ಬೇಕಾದಷ್ಟು ಅವಕಾಶಗಳು ಒದಗಿ ಬರುವುವು.
  • ಮೀನ
  • ಜೀವನದಲ್ಲಿನ ಪ್ರಮುಖ ಬದಲಾವಣೆಯನ್ನು ನೀವು ಈ ಸಮಯದಲ್ಲಿ ಕಾಣಲಿದ್ದೀರಿ. ಲಾಟರಿಯಂತಹ ಯೋಜನೆಗಳು ಕಣ್ಣಾಮುಚ್ಚಾಲೆಯಾಟ ನಡೆಸಲಿದೆ. ಇಂದು ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿಯೇ ಇರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.