ADVERTISEMENT

ದಿನ ಭವಿಷ್ಯ: ನಂಬಿದವರೇ ನಡುನೀರಿನಲ್ಲಿ ಕೈಬಿಡುವಂತೆ ಮಾಡಬಹುದು

ಬುಧವಾರ, 12 ನವೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ನವೆಂಬರ್ 2025, 19:30 IST
Last Updated 11 ನವೆಂಬರ್ 2025, 19:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ. ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಅಸಮಾಧಾನ ಹೊಂದಬೇಡಿ.
  • ವೃಷಭ
  • ಹಲವಾರು ಕಾರಣಗಳಿಗೆ ಸ್ನೇಹಿತರು ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರ ಅಪೇಕ್ಷಿಸ ಬಹುದು. ಅವಿರೋಧ ಆಯ್ಕೆಗೆ ಒಲವು ತೋರಿದ್ದರಿಂದ ಸ್ಥಾನಗಳಿಸುವಲ್ಲಿ ಸಫಲರಾಗುವಿರಿ.
  • ಮಿಥುನ
  • ಉಂಟಾಗುತ್ತಿರುವ ದೈಹಿಕ ಬದಲಾವಣೆಗಳು ಔಷಧದ ಅಡ್ಡಪರಿಣಾಮಗಳೇ ಎಂದು ಪರೀಕ್ಷಿ ಸಿಕೊಳ್ಳಿರಿ. ಸಾಧ್ಯವಾದಷ್ಟು ಶಾಂತಚಿತ್ತದಿಂದ ಕೆಲಸ ಸಾಧಿಸಿ. ಸಂಧಿವಾತ ಕಾಡಬಹುದು.
  • ಕರ್ಕಾಟಕ
  • ಮರಗೆಲಸ ಮಾಡುವವರಿಗೆ ಅವಕಾಶಗಳು ಬಂದರೂ ಕೆಲಸಕ್ಕೆ ಸೋಮಾರಿತನ ಅಡ್ಡಿ ಉಂಟುಮಾಡುವುದು. ಹಿರಿಯರ ಆಶೀರ್ವಾದ ಪಡೆದು ಕೆಲಸ ಕಾರ್ಯಗಳನ್ನು ಆರಂಭಿಸಿ.
  • ಸಿಂಹ
  • ಆರ್ಥಿಕ ಬಲವನ್ನು ಮತ್ತು ನೆಮ್ಮದಿ ಇಲ್ಲದೇ ಇರುವುದರಿಂದ ಮಹಾಗಣಪತಿಯ ಆರಾಧನೆ ಶುಭ ಉಂಟುಮಾಡುವುದು. ಹೊಗಳಿಕೆಯ ಮಾತುಗಳನ್ನು ಕೇಳಿ ಸಂತೋಷ ಹೊಂದುವಿರಿ.
  • ಕನ್ಯಾ
  • ಬಾಣಸಿಗರಿಗೆ ಕಾರ್ಯದ ಶುಚಿತ್ವವು ರುಚಿತ್ವದಷ್ಟೇ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಮೇಲಧಿಕಾರಿಯ ಅಪರೂಪದ ಮೃದು ವರ್ತನೆಯಿಂದ ಕಾರ್ಯಗಳಲ್ಲಿ ತೃಪ್ತಿಯುಂಟಾಗುವುದು.
  • ತುಲಾ
  • ವಿವಾಹ ವಿಚಾರವಾಗಿ ಮುಂದುವರಿದ ಸಂಬಂಧಗಳು ವಿನಾಕಾರಣ ಮುರಿದು ಬೀಳಲಿವೆ. ಜೀವನದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೆಜ್ಜೆಹಾಕುವ, ಹೊಂದಿಕೊಳ್ಳುವ ಅನಿವಾರ್ಯ ಕಂಡುಬರುತ್ತದೆ.
  • ವೃಶ್ಚಿಕ
  • ನಿಮ್ಮೊಳಗಿನ ಹಲವು ವರ್ಷಗಳ ದುಃಖ ಪ್ರಕಾಶಿಸಲಿದೆ. ಅಚ್ಚರಿಯನ್ನು ಉಂಟು ಮಾಡಬಹುದು. ಕೆಟ್ಟ ಹಾಗೂ ಅನವಶ್ಯಕ ಆಲೋಚನೆಗಳು ಅನಾರೋಗ್ಯವನ್ನು ಅಧಿಕಗೊಳಿಸುವುದು.
  • ಧನು
  • ತಿಳಿಯದೆ ಮಾಡಿದ ತಪ್ಪಿನಿಂದ ಅನುಭವಿಸುತ್ತಿರುವ ಕಷ್ಟಗಳಿಗೆ ಪರಿಹಾರವನ್ನು ಪ್ರಾಜ್ಞರಿಂದ ಪಡೆಯಿರಿ. ಮಕ್ಕಳೊಂದಿಗಿನ ಸಂಜೆಯ ಸುತ್ತಾಟ, ಮಾತುಕತೆ ಮನಸ್ಸಿಗೆ ಹಿತ ತರಲಿದೆ.
  • ಮಕರ
  • ವಿದ್ಯಾರ್ಥಿ ಜೀವನವನ್ನು ಇಷ್ಟ ಪಡುವವರಿಗೆ ಅಧ್ಯಯನಕ್ಕೆ ಸಕಾಲ. ನಂಬಿಕೆಯನ್ನು ಇಟ್ಟಿರುವ ವ್ಯಕ್ತಿಗಳೇ ನಡುನೀರಿನಲ್ಲಿ ಕೈಬಿಡುವಂತೆ ಮಾಡಬಹುದು.
  • ಕುಂಭ
  • ನಡೆದು ಹೋದ ದುರ್ಘಟನೆಗಳನ್ನು ಪದೇ ಪದೇ ನೆನಪಿಸಿಕೊಂಡು ದುಃಖ ಪಡುವುದು ಸರಿಯಲ್ಲ. ಮಕ್ಕಳ ಮೇಲಿನ ಅತಿ ಮೋಹವು ಅವರ ಶ್ರೇಯೋಭಿವೃದ್ಧಿಗೆ ತೊಡಕಾಗಲಿದೆ.
  • ಮೀನ
  • ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಗೊಳ್ಳಲಿವೆ. ಸ್ವ ಅಧ್ಯಯನ ಮಾಡುವವರಿಗೆ ಸರಳವಾಗಿ ಅರ್ಥವಾಗುವ ಪುಸ್ತಕಗಳು ದೊರೆತು ಅಧ್ಯಯನಕ್ಕೆ ಅನುಕೂಲವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.