ದಿನ ಭವಿಷ್ಯ: ಈ ರಾಶಿಯವರು ವೃತ್ತಿ– ಕನಸಿನ ನಡುವಿನ ಗೊಂದಲ ಪರಿಹರಿಸಿಕೊಳ್ಳುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಆಗಸ್ಟ್ 2025, 20:06 IST
Last Updated 8 ಆಗಸ್ಟ್ 2025, 20:06 IST
ದಿನ ಭವಿಷ್ಯ
ಮೇಷ
ಮಾಡುತ್ತಿರುವ ಕೆಲಸಗಳಿಗೆ ಶ್ರದ್ಧೆಯಿಂದ ಸಹಚರರು ಕೈಜೋಡಿಸದೆ ಇರುವುದು ಕಷ್ಟಕ್ಕೆ ಕಾರಣವಾಗಬಹುದು. ದೂಳು ಹಾಗು ಸಣ್ಣ ಕಸಗಳಿಂದ ಶ್ವಾಸಕೋಶ ಹಾಗು ಶ್ವಾಸನಾಳಕ್ಕೆ ತೊಂದರೆ ಉಂಟಾಗಬಹುದು.
ವೃಷಭ
ಕಟ್ಟಡ ರಚನೆಯಂಥ ಕಾರ್ಯಗಳು ಭರದಿಂದ ಸಾಗಲಿವೆ. ಈಗಿನ ಪೈಪೋಟಿ ಜೀವನದಲ್ಲಿ ಲಾಭದ ಅಂಶವನ್ನು ಪರಿಗಣಿಸಬೇಡಿ. ವಿದ್ಯುತ್ ಉಪಕರಣಗಳಿಂದ ಅಪಾಯ ಸಾಧ್ಯತೆ ಇರುವುದರಿಂದ ಎಚ್ಚರವಾಗಿರಿ.
ಮಿಥುನ
ಶಾಸ್ತ್ರಜ್ಞರಿಗೆ ಬಂದ ಉತ್ತಮ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ಇಚ್ಛೆಯ ಸಂಸ್ಥೆಯ ಕೆಲಸವನ್ನು ನಿರೀಕ್ಷಿಸುವುದರಲ್ಲಿ ಹುರುಳಿಲ್ಲವೆಂದು ಕಾಣುತ್ತದೆ. ವಿದ್ಯಾಭ್ಯಾಸದ ನಿರ್ಲಕ್ಷ್ಯ ತಲೆನೋವಾಗಬಹುದು.
ಕರ್ಕಾಟಕ
ಧಾರ್ಮಿಕ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಳ್ಳುವುದು ಶ್ರೇಯಸ್ಸಿಗೆ ಕಾರಣವಾಗುತ್ತದೆ. ವೈದ್ಯರು ವೃತ್ತಿಯಲ್ಲಿ ಮುಖ್ಯವಾಗಿ ಹೆಚ್ಚಿನ ಜಾಗ್ರತೆ ವಹಿಸುವುದು ಒಳ್ಳೆಯದು. ದೃಷ್ಟಿಕೋನದಲ್ಲಿ ಪರಾಮರ್ಶಿಸಿಕೊಳ್ಳಿರಿ.
ಸಿಂಹ
ಮನೆಯ ರಕ್ಷಣೆ ವಿಚಾರದಲ್ಲಿ ಎದುರಾದ ಸಮಸ್ಯೆಗಳು ಪರಿಹಾರ ಕಾಣಲಿವೆ. ಯಾವುದೇ ವಿಚಾರದಲ್ಲಿಯೂ ಆತುರದ ನಿರ್ಧಾರ ಒಳ್ಳೆಯದಲ್ಲ. ಹೆಂಡತಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಲಿದೆ.
ಕನ್ಯಾ
ವೃತ್ತಿಪರವಾಗಿ ವಿದೇಶಕ್ಕೆ ಹೋಗುವ ಬಯಕೆಗೆ, ಕೆಲವೊಂದು ಷರತ್ತುಗಳನ್ನು ಒಪ್ಪಿಕೊಂಡಲ್ಲಿ ಈಡೇರುವ ಸಾಧ್ಯತೆಗಳಿದೆ. ಕೃಷಿ ಹಾಗೂ ಹೈನು ವ್ಯಾಪಾರಗಳಿಂದ ಅಧಿಕ ಲಾಭ. ಕೃಷ್ಣನನ್ನು ಆರಾಧಿಸಿ ಉತ್ತರ ಸಿಗುವುದು.
ತುಲಾ
ಅತಿಯಾದರೆ ಅಮೃತವು ವಿಷ ಎಂಬಂತೆ ಮಕ್ಕಳ ಮೇಲಿನ ಅತಿ ಪ್ರೀತಿ ಮಾರಕವಾಗಿ ಪರಿಣಮಿಸಬಹುದು. ಅಭಿವೃದ್ಧಿಗೆ ಕುಂಠಿತವಾಗಬಹುದು. ಸೌಹಾರ್ದಯುತ ಸಂಬಂಧಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ.
ವೃಶ್ಚಿಕ
ಮನೆಯ ವಿಸ್ತರಣೆ ವಿಷಯವಾಗಿ ಉತ್ತಮ ಆಲೋಚನೆಗಳು ಗರಿಗೆದರಲಿವೆ. ದೂರ ಪ್ರವಾಸದಿಂದ ಖರ್ಚು ಉಂಟಾದರೂ ಮನಸ್ಸಿಗೆ ಹಿತ. ಕುಟುಂಬದ ಸದಸ್ಯರ ಅಭಿವೃದ್ಧಿಯಿಂದ ಕೀರ್ತಿ ಪ್ರತಿಷ್ಠೆಗಳು ಹೆಚ್ಚಲಿವೆ.
ಧನು
ವೃತ್ತಿ ಮತ್ತು ಕನಸಿನ ನಡುವೆ ಮೂಡಿದ್ದ ಗೊಂದಲಗಳನ್ನು ಪರಿಹರಿಸಿಕೊಳ್ಳುವಿರಿ. ವೃತ್ತಿಯಲ್ಲಿ ಪ್ರತಿಭೆ ಪ್ರದರ್ಶಿಸಲು ಸಕಾಲ. ಪ್ರೇಮ ಜೀವನದ ಸಾಫಲ್ಯಕ್ಕೆ ಹೊಂದಾಣಿಕೆಯೇ ಮೈಲಿಗಲ್ಲು ಎಂಬುವುದನ್ನು ಮರೆಯದಿರಿ.
ಮಕರ
ಬಿಡುವಿಲ್ಲದ ದಿನಚರಿಯಲ್ಲಿ ಆಯಾಸವಾಗಿದ್ದರೂ ಮನೆಯವರಿಗೆ ಸಮಯವು ಅತ್ಯಂತ ಪ್ರಮುಖವಾಗಿರುತ್ತದೆ. ಹರಿತವಾದ ಮಾತುಗಳು ನಿಮ್ಮನ್ನು ಇಂದು ಘಾಸಿಗೊಳಿಸಬಹುದು.
ಕುಂಭ
ಸಂಪೂರ್ಣ ಮುಗಿಸಲೇಬೇಕೆಂದು ಪಣತೊಟ್ಟು ನಿಯೋಜಿತ ಕೆಲಸಗಳನ್ನು ಮಾಡಿದರೆ ಇನ್ನೊಂದು ಹೊಸ ಕೆಲಸ ಕಾದಿರುತ್ತದೆ. ಸಂಗೀತಗಾರರಿಗೆ, ನೃತ್ಯ ಕಲೆಗಳಿಗೆ ಮನ್ನಣೆ ಸಿಗಲಿದೆ.
ಮೀನ
ಕೆಲಸಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವುದು ಯಶಸ್ಸಿಗೆ ಕಾರಣವಾಗುತ್ತದೆ. ಆತ್ಮವಿಶ್ವಾಸದಿಂದ ಸಕಾರಾತ್ಮಕವಾಗಿ ಮುಂದುವರಿಯಿರಿ. ನೀಲಿ ಬಣ್ಣ ಶುಭದಾಯಕ.