ADVERTISEMENT

ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಫೆಬ್ರುವರಿ 2026, 22:30 IST
Last Updated 20 ಫೆಬ್ರುವರಿ 2026, 22:30 IST
   
ಮೇಷ
  • ಕೆಲಸ-ಕಾರ್ಯವನ್ನು ಜಾಣ್ಮೆಯಿಂದ ಸೂಕ್ಷ್ಮವಾಗಿ ನಿರ್ವಹಿಸುವಂಥ ಬುದ್ಧಿವಂತಿಕೆ  ತೋರುವಿರಿ. ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲಿದೆ.
  • ವೃಷಭ
  • ಗೃಹದಲ್ಲಿ ಹೊಂದಾಣಿಕೆ ಕೊರತೆಯಿಂದ  ಭಿನ್ನಾಭಿಪ್ರಾಯ ಮೂಡಿಬಂದು ದುಗುಡುತನ ಹೆಚ್ಚಾಗಲಿದೆ. ಹೊಸತನ್ನು ಸಾಧಿಸುವ ಪ್ರಚೋದನೆ ಮತ್ತು ವಿಭಿನ್ನ ವಿಷಯಗಳು ಗಮನ ಸೆಳೆಯಲಿವೆ.
  • ಮಿಥುನ
  • ಫಲಕಾರಿ ಯೋಚನಾಲಹರಿಗಳನ್ನು ಕಂಡ ವ್ಯವಹಾರದ ಪಾಲು ದಾರರು ಮಾತಿನಂತೆಯೇ ನಡೆಯುವರು. ಕಾರ್ಯಸಾಧನೆಗೆ ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಕಾದ ಸನ್ನಿವೇಶ ಎದುರಾಗುತ್ತದೆ.
  • ಕರ್ಕಾಟಕ
  • ತಂದೆ ಹೇಳುವ ವಿಚಾರಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೇ ಅಪಾರ್ಥವಾಗಿ ಅರ್ಥೈಸಿಕೊಳ್ಳುವುದರಿಂದ ಘರ್ಷಣೆಗಳಾಗಬಹುದು. ಅತಿಯಾದ ಆಲಸ್ಯತನ ಸರ್ವತೋಮುಖ ಏಳಿಗೆಗೆ ಹಾನಿ ಉಂಟುಮಾಡಲಿದೆ.
  • ಸಿಂಹ
  • ದುರ್ಬುದ್ಧಿ ಹೊಂದಿರುವ ಜನರ ಸಹವಾಸದಿಂದ ದೂರವಿರುವ ಬಗ್ಗೆ ಪ್ರಯತ್ನವಿರಲಿ. ಸಂಶೋಧಕರಿಗೆ ಕಾರ್ಯ ಪ್ರವೃತ್ತಿಯಲ್ಲಿ ದೊಡ್ಡಮಟ್ಟದಲ್ಲಿ ವಸ್ತು ನಷ್ಟ ಆಗಬಹುದು ಅಥವಾ ಸಂಶೋಧನೆಯಲ್ಲಿ ಹಿನ್ನಡೆಯಾಗುತ್ತದೆ.
  • ಕನ್ಯಾ
  • ಕಾರ್ಯದಲ್ಲಿ ಕ್ರೀಯಾಶೀಲರಾಗಿ. ನಡೆನುಡಿ ಉತ್ತಮವಾಗಿದ್ದರೆ ಪ್ರತಿಫಲ ಆಕರ್ಷಕವಾಗಿರಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳ ಸಮಸ್ಯೆಯನ್ನು ನಿವಾರಿಸಿಕೊಂಡು, ವರಮಾನವನ್ನೂ ಹೆಚ್ಚಿಸಿಕೊಳ್ಳುವಿರಿ.
  • ತುಲಾ
  • ಕೊಟ್ಟ ಮಾತನ್ನು ಅನಿವಾರ್ಯವಾಗಿ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ಅನಾಥ ಹುಡುಗನೊಬ್ಬನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಯೋಚನೆಯನ್ನು ಮಾಡುವಿರಿ.
  • ವೃಶ್ಚಿಕ
  • ಕೆಲಸದಲ್ಲಿ ತೊಡಕು ತಾಪತ್ರಯ ಉಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು. ನಿರ್ದಾಕ್ಷಿಣ್ಯ ಕಾರ್ಯ ವೈಖರಿಯಿಂದ  ಅಧಿಕಾರಿಗಳಿಗೂ ನಿಮಗೂ ಸಂಪರ್ಕ ದೂರಾಗುವಂತಾಗಲಿದೆ.
  • ಧನು
  • ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ಬಗ್ಗೆ ಜಾಗ್ರತೆ ಇರಲಿ. ಆರ್ಥಿಕ ಸ್ಥಿತಿಯು ಕೊಂಚ ಸುಧಾರಿಸಲಿದೆ. ಎಲ್ಲಾ ದಾರಿಗಳು ಸುಗಮ ಎನಿಸಿ ಎಲ್ಲಾ ಕಷ್ಟ ನಷ್ಟಗಳು ನಿವಾರಣೆಯಾಗಲಿವೆ.
  • ಮಕರ
  • ಮಗನಿಗೆ ಸದಸ್ಯತ್ವದ ಸಂಸ್ಥೆಯಿಂದ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ನೆರವು ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ವಹಿಸಿ. ಅನುಭವದಿಂದ ಆತ್ಮಾಭಿಮಾನ ವೃದ್ಧಿಯಾಗಲಿದೆ
  • ಕುಂಭ
  • ಸಣ್ಣ ಉದ್ಯಮಿಗಳಿಗೆ ಹೆಚ್ಚು ವ್ಯಾಪಾರ ಇರಲಿದೆ.  ಕೆಲಸಗಾರರ ಸಹಕಾರ ಸಿಗುವುದು. ಅಧಿಕ ರೀತಿಯ ಖರ್ಚು-ವೆಚ್ಚಗಳು ಬಂದರೂ ಉಳಿತಾಯಕ್ಕೆ ಕೊರತೆ ಕಾಣುವುದಿಲ್ಲ. ಆರೋಗ್ಯದಲ್ಲಿ ಸುಧಾರಣೆ ಕಾಣುವುದು. 
  • ಮೀನ
  • ಅಭಿವೃದ್ಧಿಗೆ ಬೇಕಾದ ಅದ್ಭುತ ಅವಕಾಶ  ದೇವರ ಆಶೀರ್ವಾದದಿಂದ ಒದಗಿ ಬರಲಿದೆ. ಪದವಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಬಂಡವಾಳ ಹೂಡಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.