ದಿನ ಭವಿಷ್ಯ: ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನರಕ್ಕೇರಲು ಇದು ಸಕಾಲ..
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಫೆಬ್ರುವರಿ 2026, 23:30 IST
Last Updated 25 ಫೆಬ್ರುವರಿ 2026, 23:30 IST
ಮೇಷ
ಸಹೋದರರಲ್ಲಿನ ಭಿನ್ನಾಭಿಪ್ರಾಯಕ್ಕೆ ದಾಯಾದಿಗಳು ಹುಳಿಹಿಂಡುವ ಕೆಲಸವನ್ನು ಮಾಡಲಿದ್ದಾರೆ. ಸಿನಿಮಾ ಕಲಾವಿದರಿಗೆ ಅವಕಾಶಗಳು ಸಿಗುವುವು. ಆರೋಗ್ಯ ಉತ್ತಮವಾಗಿ ಮಕ್ಕಳೊಡನೆ ಆಟ ಪಾಠಗಳಲ್ಲಿ ಪಾಲ್ಗೊಳ್ಳುವಿರಿ.
ವೃಷಭ
ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಭೇಟಿಯನ್ನು ತಳ್ಳಿಹಾಕದೆ ನಿಮ್ಮ ವೃತ್ತಿ ಕ್ಷೇತ್ರಕ್ಕೆ ಲಾಭ ಉಂಟಾಗುವಂತೆ ನೋಡಿಕೊಳ್ಳುವ ಪ್ರಯತ್ನಮಾಡಿ. ಸೋದರಿಯ ವಿಷಯದಲ್ಲಿ ಅನುಕಂಪ ಮೂಡುವುದು.
ಮಿಥುನ
ಇಂಟೀರಿಯರ್ ಡೆಕೋರೇಷನ್, ಆನಿಮೇಷನ್, ಡಿಸೈನ್‌ಗೆ ಸಂಬಂಧಪಟ್ಟ ವ್ಯವಹಾರದವರಿಗೆ ಅಥವಾ ವಿದ್ಯಾರ್ಥಿಗಳಿಗೆ ಪ್ರಗತಿಯಾಗು ವುದು. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನರಕ್ಕೇರಲು ಇದು ಸಕಾಲ.
ಕರ್ಕಾಟಕ
ದುಂದುವೆಚ್ಚ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಆಲೋಚನೆ ಮಗಳ ಮದುವೆಯ ಖರ್ಚಿನ ಬಗ್ಗೆ ಇರಲಿ. ವ್ಯವಹಾರದಲ್ಲಿ ನಿಮಗಾಗಿರುವ ಮೋಸ ಬೆಳಕಿಗೆ ಬರುತ್ತದೆ.
ಸಿಂಹ
ವಿಚಾರಗಳನ್ನು ಭಿನ್ನ ಭಿನ್ನವಾದ ದೃಷ್ಟಿಯಿಂದ ನೋಡಲು ಪ್ರಯತ್ನಿಸಿ, ಸರಿ ತಪ್ಪಿನ ಅರಿವಾಗಲಿದೆ. ಹಲವಾರು ವಿಚಾರಗಳಲ್ಲಿ ತೊಂದರೆ ಕಂಡುಬಂದರೂ ಎಲ್ಲ ಸಮಸ್ಯೆಗಳು ಪರಿಹಾರವಾಗುವುವು.
ಕನ್ಯಾ
ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಸಹಾಯದಿಂದ ಗಂಭೀರ ಸಮಸ್ಯೆಯೊಂದಕ್ಕೆ ಉತ್ತರ ಸಿಗುವುದು. ದಾನ-ಧರ್ಮ ಪ್ರವೃತ್ತಿಯಿಂದ ಕೆಲವು ಶುಭ ಫಲಗಳು ನಿಮ್ಮ ಅನುಭವಕ್ಕೆ ಬರಲಿವೆ.
ತುಲಾ
ಬಹು ಕೆಲಸಗಳ ಹೊಣೆ ಇರುವ ನಿಮಗೆ ವಿನಾಕಾರಣದ ಅಲೆದಾಟ ಬೇಸರ ತರುತ್ತದೆ. ನಿಮ್ಮನ್ನು ಮನೆಯವರು ಸರಿದಾರಿಗೆ ತರಲಿದ್ದಾರೆ. ದಿನನಿತ್ಯದ ಕೆಲಸಗಳು ಎಂದಿನಂತೆ ಸಾಗಲಿವೆ.
ವೃಶ್ಚಿಕ
ನಿಮ್ಮ ಬುದ್ಧಿಶಕ್ತಿಗೆ ಸ್ವಲ್ಪ ಕೆಲಸ ಕೊಟ್ಟರೆ ಯಶಸ್ಸು ದೊರಕುತ್ತದೆ. ಸಂಸ್ಥೆಯ ಅಭಿವೃದ್ಧಿಗೆ ನೀವು ತೆಗೆದುಕೊಳ್ಳಬೇಕಾಗಿರುವ ನಿರ್ಧಾರದ ಬಗ್ಗೆ ಈ ದಿನ ಹೆಚ್ಚಿನ ಅಧ್ಯಯನ ನೆಡೆಸುವುದು ಉತ್ತಮ.
ಧನು
ಎಲ್ಲ ವಿಷಯಗಳಲ್ಲಿಯೂ ಸ್ವಾಭಾವಿಕ ಗುಣಕ್ಕಿಂತ ಹೆಚ್ಚಿನ ಸಮಾಧಾನದಿಂದಿರುವುದು ಉತ್ತಮ. ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದು ಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮಕರ
ಇನ್ನೊಬ್ಬರಿಗೆ ಕೊಡಬೇಕಾದ ವಸ್ತುಗಳನ್ನ ಅವರಿಗೆ ತಲುಪಿಸುವ ಕರ್ತವ್ಯವನ್ನು ಮರೆಯದಿರಿ. ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹೂಡಲು ತಂದೆಯವರ ಸಮ್ಮತಿಯನ್ನು ಪಡೆಯುವುದು ಒಳ್ಳೆಯದು.
ಕುಂಭ
ಕೆಲವೊಂದು ಕೆಲಸದಲ್ಲಿ ಆಡಚಣೆ ಉಂಟಾಗಿ ಮನಸ್ಸಿಗೆ ನೋವು ಆಗಬಹುದು. ಕೆಲವು ಕೆಲಸಗಳನ್ನು ಮಾಡಲು ದೀರ್ಘ ಪ್ರಯಾಣ ಕೈಗೊಳ್ಳಬೇಕಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ.
ಮೀನ
ನಿಮ್ಮ ಹಾದಿಯನ್ನು ಮಾರ್ಗದರ್ಶಕರ ಸಲಹೆಯಂತೆ ಬದಲಿಸಿಕೊಂಡಲ್ಲಿ ಯೋಜನೆಗಳು ನೀವು ಆಲೋಚಿಸಿದಕ್ಕಿಂತಲೂ ಹೆಚ್ಚು ಉತ್ತಮವಾಗಿ ನೆರವೇರುವುವು. ಸಾವಧಾನದಿಂದ ಕೆಲಸಗಳನ್ನು ಮಾಡಿ ಮುಗಿಸುವಿರಿ.