ADVERTISEMENT

ದಿನ ಭವಿಷ್ಯ: ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲವನ್ನು ಇಂದು ಪಡೆಯುತ್ತೀರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ನವೆಂಬರ್ 2025, 20:52 IST
Last Updated 8 ನವೆಂಬರ್ 2025, 20:52 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪ್ರಾಪ್ತ ವಯಸ್ಸಿನ ಮಗಳಿಗೆ ಸಂಬಂಧಿಕರಲ್ಲಿಯೇ ಅಥವಾ ಅಕ್ಕ-ಪಕ್ಕದ ಮನೆಯಲ್ಲಿಯೇ ವರ ನಿಶ್ಚಯವಾಗಿ ಮದುವೆಯ ತಯಾರಿ ನಡೆಸುವಿರಿ. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲವನ್ನು ಇಂದು ಪಡೆಯುತ್ತೀರಿ.
  • ವೃಷಭ
  • ಚಾಣಕ್ಷತನದ ನಿಮ್ಮ ಮಾತುಗಳನ್ನು ಸರಿಯಾದ ಸಮಯದಲ್ಲಿ ಪ್ರಯೋಗಿಸಿ, ಅದರಿಂದಾಗಿ ಲಾಭ ಪಡೆಯುವಿರಿ. ನಿಮ್ಮ ಈ ದಿನದ ಪ್ರಮುಖ ಕೆಲಸಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳುವುದು ಅಗತ್ಯವೆನಿಸುವುದು.
  • ಮಿಥುನ
  • ಚಾಣಕ್ಷತನದ ನಿಮ್ಮ ಮಾತುಗಳನ್ನು ಸರಿಯಾದ ಸಮಯದಲ್ಲಿ ಪ್ರಯೋಗಿಸಿ, ಅದರಿಂದಾಗಿ ಲಾಭ ಪಡೆಯುವಿರಿ. ನಿಮ್ಮ ಈ ದಿನದ ಪ್ರಮುಖ ಕೆಲಸಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳುವುದು ಅಗತ್ಯವೆನಿಸುವುದು.
  • ಕರ್ಕಾಟಕ
  • ನಿಮ್ಮ ಇಂದಿನ ದಿನದದಲ್ಲಿ ಆಗುವ ಹಲವು ಘಟನೆಗಳಿಂದ ಪದೇ ಪದೇ ದಿವ್ಯಶಕ್ತಿಯ ಅನುಭೂತಿಯು ಆಗುತ್ತದೆ. ನೀವು ನಿರ್ಧರಿಸಿದ ರೀತಿಯಲ್ಲಿ ನಿಮ್ಮ ಜೀವನ ಇರುವುದು. ಈ ದಿನವು ನೆಮ್ಮದಿಯುಕ್ತ ದಿನ ಎನಿಸುವುದು.
  • ಸಿಂಹ
  • ಮಕ್ಕಳು ತಪ್ಪು ಮಾಡಿದಾಗ ಸಿಟ್ಟು ಬರುವುದು ಸಹಜವಾದರೂ ಸಹ ತಿಳುವಳಿಕೆ ಹೇಳಿ ಅವರನ್ನು ಸರಿದಾರಿಗೆ ತನ್ನಿ. ಮುಕ್ತ ಮಾತುಕತೆಗಳಿಂದ ವ್ಯವಹಾರಗಳು ನೀವು ಅಂದುಕೊಂಡ ರೀತಿಯಲ್ಲಿ ನಡೆಯುತ್ತದೆ.
  • ಕನ್ಯಾ
  • ಹಿರಿಯರ ಅಭಿಪ್ರಾಯದಂತೆ ಮನೆಯನ್ನು ಆಧುನಿಕರಣಗೊಳಿಸುವ ಕೆಲಸದಲ್ಲಿ ಮುಂದುವರಿಯುವಿರಿ. ಸ್ನೇಹಿತರ ಸಹಾಯದಿಂದ ಜಮೀನು ಖರೀದಿಯ ಕನಸು ನನಸಾಗಲಿದೆ. ಲೇವಾದೇವಿ ವ್ಯವಹಾರದಲ್ಲಿ ಜಾಗ್ರತೆ ಇರಲಿ.
  • ತುಲಾ
  • ಈ ದಿನ ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ಹೆಜ್ಜೆ ಇಡುವುದು ಸೂಕ್ತ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ನಿಮ್ಮ ನಾಯಕತ್ವದ ಗುಣ ಪ್ರದರ್ಶಿಸಲು ವೇದಿಕೆ ಸಿಗಲಿದೆ.
  • ವೃಶ್ಚಿಕ
  • ಹೊಸ ಮನೆಯ ಕೆಲಸಗಳು ಮುಕ್ತಾಯ ಹಂತ ತಲುಪುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ. ದೇವತಾ ಕಾರ್ಯಗಳಿಗಾಗಿ ಪ್ರಯಾಣ ಮಾಡಲಿದ್ದೀರಿ.
  • ಧನು
  • ನಿಮ್ಮ ಮೇಲುಸ್ತುವಾರಿಯಲ್ಲಿ ಕೆಲಸ ಕಾರ್ಯ ಸುಗಮವಾಗಿ ಸಾಗುವುದು. ಯಂತ್ರೋಪಕರಣಗಳ ಸಹಾಯದಿಂದ ಕೆಲಸ ಮಾಡುವ ವೇಳೆಯಲ್ಲಿ ಅಪಾಯ ಸಂಭವಿಸಬಹುದು. ಆದ್ದರಿಂದ ಹೆಚ್ಚಿನ ಗಮನದಿಂದ ಕೆಲಸವನ್ನು ಮಾಡಿ.
  • ಮಕರ
  • ಬೇರೆಯವರ ಸಹಾಯ ಅಪೇಕ್ಷಿಸದೆ ಕಠಿಣವಾದ ಕಾರ್ಯಗಳನ್ನು ಸಹ ನೀವೆ ಸಾಧಿಸಿಕೊಳ್ಳಿ. ದೈವಾನುಗ್ರಹದಿಂದ ಸಕಲ ಅಭೀಷ್ಟವು ಸಿದ್ಧಿಯಾಗಿ ಸಂತೃಪ್ತಿ ಪಡೆಯುತ್ತೀರಿ. ಹಣಕಾಸಿನ ವಿವಾದಗಳನ್ನು ಬಗೆಹರಿಸಿಕೊಳ್ಳುವಿರಿ.
  • ಕುಂಭ
  • ಇತರರ ಕಷ್ಟಕಾಲದಲ್ಲಿ ಮಾಡಿದ ಸದುಪಕಾರದ ಉತ್ತಮ ಫಲಗಳು ನಿಮ್ಮ ಈ ಕಷ್ಟಕಾಲದಲ್ಲಿ ನಿಮ್ಮ ಸಹಾಯಕ್ಕೆ ಬರುತ್ತವೆ. ನಿಮ್ಮ ಅತಿಯಾದ ಸರಳತೆಯು ಸಮಾಜದಲ್ಲಿನ ನಿಮ್ಮ ಉತ್ತಮ ಗೌರವಕ್ಕೆ ಕಾರಣವಾಗುತ್ತದೆ.
  • ಮೀನ
  • ನೀವು ಇಂದು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮನಸ್ಸಿಗೆ ನೆಮ್ಮದಿ ತರಲಿವೆ. ಎಲೆಕ್ಟ್ರಿಕಲ್‌ ಉಪಕರಣಗಳ ಮಾರಾಟಗಾರರಿಗೆ ಮತ್ತು ಕಬ್ಬಿಣ ವ್ಯಾಪಾರಿಗಳಿಗೆ ಹೆಚ್ಚು ಲಾಭ ಇರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.