ದಿನಭವಿಷ್ಯ | ಈ ರಾಶಿಯವರಿಗೆ ದ್ವಿಚಕ್ರ ವಾಹನ ಖರೀದಿಯ ಯೋಗವಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಅಕ್ಟೋಬರ್ 2024, 23:46 IST
Last Updated 14 ಅಕ್ಟೋಬರ್ 2024, 23:46 IST
ದಿನ ಭವಿಷ್ಯ
ಮೇಷ
ಉದ್ಯೋಗದಲ್ಲಿ ಬದಲಾವಣೆಯ ಯೋಚನೆ ಮಾಡುವವರು ಸದ್ಯದ ಪರಿಸ್ಥಿತಿಯಲ್ಲಿ ಸಿಕ್ಕಿರುವ ಕೆಲಸದಲ್ಲೇ ತೃಪ್ತಿಪಡುವುದು ಒಳ್ಳೆಯದು. ಸೋಲೊಪ್ಪಿಕೊಳ್ಳದ ಗುಣವು ಸಹಚರರಲ್ಲಿ ಭಿನ್ನಾಭಿಪ್ರಾಯ ಮೂಡಿಸುವುದು.
ವೃಷಭ
ಯಾವುದೇ ರೀತಿಯ ಮಹತ್ವದ ಮಾತುಕತೆ ನಡೆಸುವಾಗ ಈ ದಿನ ಧೈರ್ಯವಾಗಿ ಮಾತನಾಡಿ. ಮಗನ ಮೇಲಿನ ನಂಬಿಕೆಯು ಕಡಿಮೆಯಾಗುವ ಪ್ರಸಂಗ ಬರಬಹುದು. ಕಾಸ್ಮೆಟಿಕ್ ವ್ಯಾಪಾರಿಗಳಿಗೆ ಲಾಭ ದಿನ.
ಮಿಥುನ
ವೈಯಕ್ತಿಕ ವಿಷಯಗಳನ್ನು ಆಪ್ತರಾದವರಲ್ಲಿ ಹಂಚಿಕೊಳ್ಳಲು ಸಮಯ ಕೂಡಿ ಬಂದಿದೆ. ಕಂಟ್ರಾಕ್ಟರ್‌ಗಳು ಮತ್ತು ಬಿಲ್ಡರ್ಸ್‌ಗಳಿಗೆ ಅನುಕೂಲಕರ ದಿನ. ದ್ವಿ ಚಕ್ರ ವಾಹನ ಖರೀದಿಯ ಯೋಗವಿದೆ.
ಕರ್ಕಾಟಕ
ಪ್ರೀತಿ ವಾತ್ಸಲ್ಯ ತೋರುವ ಜನರು ಇದ್ದಾರೆಂಬುದು ಆತ್ಮ ವಿಶ್ವಾಸ ಹೆಚ್ಚಲು ಕಾರಣ. ಒಂಟಿತನ ಹೋಗಲಾಡಿಸಿಕೊಳ್ಳಲು ಹೊಸ ಕೆಲಸಗಳತ್ತ ಮನಸ್ಸು ಹರಿಸುವ ಪ್ರಯತ್ನವನ್ನು ಮಾಡಿ.
ಸಿಂಹ
ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಎಚ್ಚರ ವಹಿಸದೇ ಅತಿ ಆತ್ಮವಿಶ್ವಾಸ, ಎಲ್ಲವೂ ತಿಳಿದಿದೆ ಎಂಬುವ ಅಹಂಕಾರ ಮುಂದುವರಿದರೆ ಸ್ಥಾನಮಾನಕ್ಕೆ ಹಾನಿಯಾಗುವ ಸನ್ನಿವೇಶ ಬರುವುದು.
ಕನ್ಯಾ
ನೂತನ ಅಧಿಕಾರಿಗಳ ಆಗಮನದಿಂದಾಗಿ ಕಚೇರಿಯಲ್ಲಿ ಹೆಚ್ಚಿನ ಕೆಲಸಗಳು ತೋರಿಬರಲಿವೆ. ಸರ್ಕಾರಿ ಕಚೇರಿಗಳಿಗೆ ಅಲೆದಾಟವು ಹೆಚ್ಚಾಗಿ ಹಣದ ಖರ್ಚಿಗೆ ಕಾರಣವಾದೀತು. ರಫ್ತಿನಿಂದ ಲಾಭ ಗಳಿಸುವಿರಿ.
ತುಲಾ
ಮಕ್ಕಳೊಂದಿಗೆ ವ್ಯವಹಾರದ ವಿಚಾರಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸುವಿರಿ. ಇತರರ ಕಷ್ಟ-ಸುಖಗಳಿಗೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಿ. ತಾಳ್ಮೆ ಪರೀಕ್ಷಿಸುವ ಕೆಲಸಕ್ಕೆ ಕೈ ಹಾಕದಿರಿ.
ವೃಶ್ಚಿಕ
ಪಥ್ಯ ಮಾಡುವುದರ ಪ್ರಭಾವದಿಂದ ಆರೋಗ್ಯ ಸುಧಾರಣೆಗೆ ಬರುತ್ತದೆ. ಕೊಟ್ಟ ಮಾತನ್ನು ಉಳಿಸಿ ಕೊಳ್ಳುವ ಮಾರ್ಗದಲ್ಲಿ ಪ್ರತಿ ಹೆಜ್ಜೆ ಇರಲಿ. ಮಗಳಿಗೆ ಉತ್ತಮ ಉದ್ಯೋಗ ದೊರೆತು ಸಂತಸವಾಗುತ್ತದೆ.
ಧನು
ಸಾಮಾಜಿಕ ಬದುಕಿನಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸೂಕ್ತ ಅವಕಾಶ ಸಿಗಲಿದೆ. ವಿದೇಶದಿಂದ ಸ್ನೇಹಿತರ ಆಗಮನ ಸಂತೋಷ ತರಲಿದೆ. ವಿಷ್ಣುಸಹಸ್ರನಾಮದ ಪಠಣೆಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.
ಮಕರ
ಸಮಾಜದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುವ ಪಾಠವನ್ನು ಇಂದಿನ ದಿನವೇ ಬೋಧಿಸುವುದು. ಕೆಲಸದತ್ತ ಹೆಚ್ಚಿನ ಗಮನ ಹರಿಸಿ. ರಾಜಕೀಯ ಭವಿಷ್ಯಕ್ಕೆ ಮೋಡಕವಿದಂತೆ ಆಗುತ್ತದೆ.
ಕುಂಭ
ಹಿರಿಯರೊಬ್ಬರ ಮಧ್ಯಸ್ಥಿಕೆಯಿಂದ ಉತ್ತಮ ಸಂಬಂಧ ಕೂಡಿ ಬರುವುದು. ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಸಿಗಲಿದೆ. ಧನಾರ್ಜನೆಗೆ ಅಡ್ಡಿಯಾಗಲಿದೆ.
ಮೀನ
ಬುದ್ಧಿವಂತಿಕೆ ಹಾಗೂ ಯೋಜನೆಗಳು ಸಂವಹನವನ್ನು ಸುಲಭಗೊಳಿಸುತ್ತದೆ. ವೃತ್ತಿಪರವಾಗಿ ಇರುವ ಸ್ಪರ್ಧೆಗಳಲ್ಲಿ ಹೆಚ್ಚಿನ ಮುನ್ನಡೆ ಇರುವುದು. ಸಕ್ರಿಯತೆ ಹಾಗೂ ಕಾರ್ಯಮಗ್ನತೆಯ ದಿನವು ಇದಾಗಿದೆ.