ದಿನ ಭವಿಷ್ಯ: ಲಕ್ಷ್ಮಿಸಹಿತ ನಾರಾಯಣನನ್ನು ಆರಾಧಿಸುವುದು ಶುಭ ತರುತ್ತದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಜನವರಿ 2026, 23:30 IST
Last Updated 20 ಜನವರಿ 2026, 23:30 IST
ದಿನ ಭವಿಷ್ಯ
ಮೇಷ
ಬುದ್ಧಿವಂತ, ತಿಳಿವಳಿಕೆ ಹೊಂದಿದವರಾಗಿದ್ದರೂ ಗ್ರಹಚಾರದ ಫಲವಾಗಿ ಮನೋಬಲದಿಂದ ಕಾರ್ಯ ಸಾಧಿಸುವಲ್ಲಿ ವಿಫಲರಾಗುವಿರಿ. ಗೃಹದಲ್ಲಿ ಶುಭ, ಮಂಗಳಕಾರ್ಯ ಚಟುವಟಿಕೆಗಳು ತೋರಿ ಬರಲಿವೆ.
ವೃಷಭ
ಆತಂಕ ತುಂಬಿದ ಕೆಲಸಕಾರ್ಯದಲ್ಲಿರುವವರ ಮನೆಯಲ್ಲಿ ನೆಮ್ಮದಿ ತುಂಬುವುದು. ಕಲಾ ಸೇವೆಯನ್ನು ಗುರುತಿಸಿ ಪ್ರಶಂಸೆ ಹಾಗೂ ಸನ್ಮಾನ ದೊರೆಯಲಿದೆ. ಸ್ವತಃ ಆರೈಕೆ ಮಾಡಿಕೊಳ್ಳುವುದು ಉತ್ತಮ.
ಮಿಥುನ
ವಿದ್ಯಾರ್ಜನೆಗೆಂದು ಪರ ಊರಿಗೆ ಹೋದ ನೀವು ಹಾದಿ ತಪ್ಪಿದ್ದು ಹೆತ್ತವರಿಗೆ ಸಂಕಟವನ್ನು ಉಂಟು ಮಾಡುವುದು. ಮನೆಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಬಹುದು. ಶೀತ ಬಾಧೆಯು ನಿಮ್ಮನ್ನು ಕಾಡಬಹುದು.
ಕರ್ಕಾಟಕ
ನಿದ್ದೆಯ ಅಭಾವದಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ತಂದೆಯ ಮನಸ್ಸಿಗೆ ನೋವಾಗುವ ಸಂಗತಿ ನಡೆಯಲಿದೆ. ಗಣೇಶನ ಪೂಜೆಯಿಂದ ದಿನವನ್ನು ಪ್ರಾರಂಭಿಸಿ.
ಸಿಂಹ
ಸಾಧಿಸಲೇಬೇಕೆಂಬ ಛಲವಿರುವ ನಿಮಗೆ ಕಾರ್ಯಗಳೆಲ್ಲವೂ ಸಿದ್ಧಿಸಲಿವೆ. ವ್ಯಾಪಾರದಲ್ಲಿ ಅತೀವ ಆಸಕ್ತಿ ಮೂಡುತ್ತದೆ. ಅಧಿಕ ಲಾಭಾಂಶ ಹೊಂದುವಿರಿ. ಎಲ್ಲರ ಒಪ್ಪಿಗೆಯಂತೆ ವಿವಾಹ ನಡೆಸಿರಿ.
ಕನ್ಯಾ
ಮುಖ್ಯ ವ್ಯಕ್ತಿ ನೀಡಿದ ಉಡುಗೊರೆಯೊಂದನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಭಾಷಾ ಅಧ್ಯಾಪಕರಿಗೆ ಉದ್ಯೋಗದಲ್ಲಿ ಅಸ್ಥಿರತೆ ಉಂಟಾ ಗುವುದು. ದೈನಂದಿನ ಕೆಲಸ ಕಾರ್ಯಗಳಲ್ಲಿ ಬದಲಾವಣೆ ಇರುವುದಿಲ್ಲ.
ತುಲಾ
ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಜೀವನಶೈಲಿಯೇ ಬದಲಾಗುತ್ತದೆ. ಮಕ್ಕಳು ಕೇಳುವ ಪ್ರಶ್ನೆಗಳಿಗೆ ನಿರುತ್ತರರಾಗುತ್ತೀರಿ. ತಾಳ್ಮೆಯ ಪರೀಕ್ಷೆ ಆಗಬಹುದು.
ವೃಶ್ಚಿಕ
ದೇವತಾ ಕಾರ್ಯದ ಹೆಸರಿನಲ್ಲಿ ಕಠಿಣ ವ್ರತ ಆಚರಣೆಯನ್ನು ಮಾಡುವಲ್ಲಿ ಆರೋಗ್ಯವನ್ನು ಕಡೆಗಾಣಿಸಬೇಡಿ. ಮನೆಯಲ್ಲಿ ಅಣ್ಣ-ತಮ್ಮಂದಿರ ಆಂತರಿಕ ವ್ಯವಹಾರಗಳು ಒಂದು ಹಂತ ತಲುಪುತ್ತವೆ.
ಧನು
ಕೌಶಲವನ್ನು ತೋರಲು ಹೆಚ್ಚಿನ ಅವಕಾಶಗಳು ಎದುರಾಗಲಿವೆ. ಯಾವುದೋ ಮೂಲದಿಂದ ಬಂದ ಹಣ ದೇವ ಕಾರ್ಯಗಳಿಗೆ ಉಪಯೋಗಿಸಿ. ಸಂಘ ಸಂಸ್ಥೆಗಳ ಪದಾಧಿಕಾರ ದೊರಕುವುದು.
ಮಕರ
ಕುಟುಂಬದವರ ಮಾತುಗಳಿಗೆ ಬೆಲೆ ಕೊಡುವುದು ಮತ್ತು ಎಲ್ಲರಲ್ಲೂ ಸಹನೆಯಿಂದ ವರ್ತಿಸುವುದನ್ನು ರೂಢಿಸಿಕೊಳ್ಳಿ. ಸಹೋದರರ ಬಗ್ಗೆ ನಿಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳುವ ಪ್ರಯತ್ನಮಾಡಿ.
ಕುಂಭ
ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಮನಸ್ಸು ಉಲ್ಲಾಸದಿಂದ ಇರುವುದು. ಬಂಧುಗಳು ಸಂಬಂಧ ಕೋರಿ ಬರಲಿದ್ದಾರೆ. ಲಕ್ಷ್ಮಿಸಹಿತ ನಾರಾಯಣನನ್ನು ಆರಾಧಿಸುವುದು ಶುಭ ತರುತ್ತದೆ.
ಮೀನ
ಕೇವಲ ನಿಮ್ಮ ಬಗ್ಗೆ ಯೋಚಿಸುವುದನ್ನು ಬಿಟ್ಟು ಇತರ ಕುರಿತು ಕಾಳಜಿ ವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳುವಿರಿ. ಕೆಲಸದಲ್ಲಿ ಒತ್ತಡ ಹೆಚ್ಚಿರುವುದರಿಂದ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ.