ADVERTISEMENT

ದಿನ ಭವಿಷ್ಯ: ಈ ರಾಶಿಯವರು ಎಲ್ಲಾ ವಿಷಯಗಳಲ್ಲಿಯೂ ಪ್ರಗತಿ ಕಾಣುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಉದ್ಯೋಗ ಕ್ಷೇತ್ರದಲ್ಲಿ ಪರಿಚಯವಾಗಿ ಕುಟುಂಬ ಸದಸ್ಯರಂತೆ ಆಗಿ ಹೋದ ವ್ಯಕ್ತಿಗಳೊಂದಿಗೆ ಕಳೆದ ಸಮಯ ಸಂತೋಷವನ್ನುಂಟು ಮಾಡುವುದು. ರುದ್ರಾರಾಧನೆ ಶುಭ ಫಲ ನೀಡುವುದು.
  • ವೃಷಭ
  • ಕಾರ್ಯಕ್ಷೇತ್ರದಲ್ಲಿ ಶಕ್ತಿಯುತ ಅಧಿಕಾರ ಸ್ಥಾಪಿಸಲು ಅನುಕೂಲಕರ ಸಮಯ ನಿರ್ಮಾಣವಾಗಲಿದೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಸಮಯ ಉಳಿತಾಯವಾಗಲಿದೆ.
  • ಮಿಥುನ
  • ಪತ್ರಿಕಾ ವರದಿಗಾರರಿಂದ ತಪ್ಪುಗಳು ಸಂಭವಿಸುವ ಲಕ್ಷಣಗಳಿವೆ. ವಿಷಯವನ್ನು ಪರಾಮರ್ಶಿಸಿ ಸ್ಪಷ್ಟಪಡಿಸಿಕೊಂಡು ಪ್ರಕಟಿಸುವಲ್ಲಿ ಗಮನವಹಿಸಿ. ಮಾನಸಿಕವಾಗಿ ಉದ್ವೇಗ ಕಂಡುಬಂದೀತು.
  • ಕರ್ಕಾಟಕ
  • ಇನ್ನೊಬ್ಬರಿಗೆ ಮೋಸ ಮಾಡುವ ಮನಸ್ಥಿತಿಯನ್ನು ದೂರ ಮಾಡಿಕೊಳ್ಳಿ. ತಂದೆ ತಾಯಿ ಜತೆಗೆ ಕಿರು ತಿರುಗಾಟವನ್ನು ಕೈಗೊಳ್ಳಬೇಕಾದ ಅನಿವಾರ್ಯ ಎದುರಾಗಬಹುದು. ಧನಲಾಭದಿಂದ ಹರ್ಷವಾಗುವುದು.
  • ಸಿಂಹ
  • ಪಿತ್ತದೋಷದಿಂದ ನಾನಾರೀತಿಯ ಕಾಯಿಲೆಗೆ ಒಳಗಾದವರು ಆಯುರ್ವೇದದ ಮೊರೆಹೋಗಿ. ರಾಜಕೀಯ ವರ್ಗದವರು ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ. ಈ ದಿನ ಲಾಭದಾಯಕ.
  • ಕನ್ಯಾ
  • ಎಲ್ಲಾ ವಿಷಯಗಳಲ್ಲಿಯೂ ಪ್ರಗತಿ ಕಾಣುವಿರಿ. ಯಾವುದೇ ಕೆಲಸಗಳಿಗೂ ಅಳುಕುವ ಪ್ರಮೇಯ ಇರುವುದಿಲ್ಲ. ಹಿರಿಯರ ಆಶೀರ್ವಾದ ಪಡೆಯುವಿರಿ. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಮುಂದುವರಿಯಲಿದೆ.
  • ತುಲಾ
  • ಕಾರ್ಯದೊತ್ತಡ ಜತೆಯಲ್ಲಿಯೂ ಮನೆಯ ವಿಚಾರಗಳತ್ತ ಗಮನಹರಿಸಿ. ಕಚೇರಿಯಲ್ಲಿ ಬೇಸರ ತರುವಂಥ ಘಟನೆಗಳು ನಡೆದರೂ ಧೃತಿಗೆಡದೆ ಸಮಾಧಾನದಿಂದಿರಿ.
  • ವೃಶ್ಚಿಕ
  • ಪ್ರಯತ್ನಿಸಿದ ಕಾರ್ಯಗಳು ಆಪ್ತರ ಸಕಾಲಿಕ ನೆರವಿನಿಂದ ಕೈಗೂಡುವುದು. ನೂತನ ವಸ್ತುಗಳ ಖರೀದಿಗೆ ಸಮಯವಲ್ಲ. ಮೂಕಾಂಬಿಕೆಯನ್ನು ಧ್ಯಾನಿಸಿ ಅಭೀಷ್ಟ ನೆರವೇರುವುದು.
  • ಧನು
  • ಬುದ್ಧಿ ಬಲದಿಂದ ವಿವಿಧ ಕಾರ್ಯಗಳು ಫಲಿತಗೊಂಡು, ಅನಿರೀಕ್ಷಿತ ವೆಂಬಂತೆ ಉತ್ತಮ ಅಭಿವೃದ್ಧಿ ನಿಮ್ಮದಾಗಲಿದೆ. ರೈತರಿಗೆ ವಿಪರೀತ ಕೆಲಸಗಳಿಂದ ದೇಹಾಲಸ್ಯ ತೋರಿ ವಿಶ್ರಾಂತಿ ಬಯಸುವಿರಿ.
  • ಮಕರ
  • ಕ್ರೀಡಾಪಟುಗಳು ಛಲ ಬಿಡದೆ ಪರಿಶ್ರಮ ವಹಿಸಿದ್ದಕ್ಕಾಗಿ ಉತ್ತಮ ಅವಕಾಶಗಳೊಂದಿಗೆ ಉತ್ತಮ ಮಾರ್ಗದರ್ಶಕರು ದೊರೆತು ಜಯದ ಪಥದಲ್ಲಿ ನಡೆಯುವಿರಿ. ನ್ಯಾಯಾಲಯದ ವಿಚಾರಣೆಗಳಲ್ಲಿ ಜಯ.
  • ಕುಂಭ
  • ಸ್ನೇಹಿತನ ವಿಷಯದಲ್ಲಿ ಆಸಕ್ತಿಯನ್ನು ವಹಿಸುವುದು ಸರಿಯಲ್ಲ. ಜವಾ ಬ್ದಾರಿಯಲ್ಲಿನ ಸ್ಪಷ್ಟ ವಿಷಯವೊಂದು ಮನವರಿಕೆಯಾಗುವುದು. ಆದಾಯ ಸ್ಥಿರವಾಗಿ ಇರುವುದು. ಹಣಕಾಸಿನ ಕೊರತೆ ಇರುವುದಿಲ್ಲ.
  • ಮೀನ
  • ಯಾರ ಪರ ವಹಿಸದಿದ್ದರೂ ವಿಚಾರವನ್ನು ತಿಳಿಯದೆ ಮುಂದುವರಿಯಬೇಡಿ. ಜನತಾ ನಿರ್ಧಾರವನ್ನು ಅರಿಯದೆ ರಾಜಕೀಯ ನಾಯಕರು ಇಟ್ಟ ತಪ್ಪು ಹೆಜ್ಜೆಯು ನಿಂದನೆಗೊಳಗಾಗುವ ಸಾಧ್ಯತೆಗಳಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.