ದಿನ ಭವಿಷ್ಯ: ಈ ರಾಶಿಯವರಿಗೆ ಕಚೇರಿಯಲ್ಲಿ ವಿಶೇಷ ಗೌರವ ದೊರೆಯಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಜುಲೈ 2025, 23:34 IST
Last Updated 8 ಜುಲೈ 2025, 23:34 IST
ದಿನ ಭವಿಷ್ಯ
ಮೇಷ
ಆಸ್ತಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಬಹಿರಂಗಗೊಂಡು ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ರಾಜಕೀಯ ವ್ಯಕ್ತಿಗಳಿಗೆ ದುರಹಂಕಾರಿ ಎನ್ನುವ ಪಟ್ಟ ಸಿಗಲಿದೆ.
ವೃಷಭ
ಪ್ರಮುಖ ಕೆಲಸವು ಸಂಗಡಿಗರ ಸಹಾಯದಿಂದ ಅನಾಯಾಸವಾಗಿ ಪೂರ್ಣಗೊಳ್ಳುವುದು. ಕುಟುಂಬದವರೊಂದಿಗೆ ಸಂತೋಷದಿಂದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಕಾಗದಪತ್ರಗಳ ನಿರ್ವಹಣೆಯಲ್ಲಿ ಎಚ್ಚರವಹಿಸಿ.
ಮಿಥುನ
ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ, ಹೊಸತನದಲ್ಲಿ ಜಯ ಕಾಣುವಿರಿ. ವೈವಾಹಿಕ ಜೀವನದಲ್ಲಿ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೂ, ಸುಲಭವಾಗಿ ನಡೆಯುವುದಿಲ್ಲ.
ಕರ್ಕಾಟಕ
ಕಚೇರಿಯಲ್ಲಿ ವಿಶೇಷ ಗೌರವ ದೊರೆಯಲಿದೆ. ಕಾನೂನುಪಂಡಿತರಿಗೆ ಬೇಡಿಕೆ ಇದ್ದು ಆದಾಯ ಹೆಚ್ಚುತ್ತದೆ. ಔದ್ಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ದೊರೆಯಲಿದೆ.
ಸಿಂಹ
ಸಮಾಜಸೇವೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡಿರುವವರಿಗೆ ಅಪಪ್ರಚಾರದ ಜತೆಗೆ ಅಗೌರವಗಳು ಪ್ರಾಪ್ತಿಯಾಗಬಹುದು. ವಸ್ತ್ರವಿನ್ಯಾಸಕಾರರಿಗೆ ಅವಕಾಶಗಳು ದೊರೆಯಲಿವೆ.
ಕನ್ಯಾ
ಬದುಕಿನಲ್ಲಿ ನೆಲೆ ನಿಂತ ನೆಮ್ಮದಿ ಸಿಗಲಿದೆ. ಬಾಲ್ಯದಲ್ಲಿ ಕಲಿತ ಅಥವಾ ತಿಳಿದುಕೊಂಡಿದ್ದ ಕೆಲ ವಿಷಯಗಳು ಉಪಯೋಗಕ್ಕೆ ಬರಲಿವೆ. ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನ ಮಾಡಿರಿ.
ತುಲಾ
ದೈವಾನುಗ್ರಹದಿಂದ ಸಾಹಸ ಕಾರ್ಯಗಳು ಕೈಗೂಡಿ ಬಹುಮಟ್ಟಿಗೆ ನಿರೀಕ್ಷಿತ ಫಲ ಲಭಿಸಲಿದೆ. ಬರುವ ಅವಕಾಶಗಳನ್ನು ನಿಮ್ಮತ್ತ ತಿರುಗಿಸಿಕೊಂಡು ಸದುಪಯೋಗ ಪಡೆದುಕೊಳ್ಳುವುದು ನಿಮ್ಮ ಕೈಗೆ ಬಿಟ್ಟ ವಿಷಯಗಳಾಗಿರುತ್ತದೆ.
ವೃಶ್ಚಿಕ
ನಿರುದ್ಯೋಗಿಗಳಿಗೆ ಹಂಗಾಮಿ ನೌಕರಿ ದೊರೆಯುವುದು. ಸಮಾರಂಭಗಳಲ್ಲಿ ಮುಂದಾಳತ್ವ ವಹಿಸಿ ಕೀರ್ತಿ ಗೌರವ ಪಡೆದುಕೊಳ್ಳುವಿರಿ. ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ.
ಧನು
ಮನುಷ್ಯ ಪ್ರಯತ್ನದ ಜತೆಯಲ್ಲಿ ದೇವರ ಕೃಪೆಗೆ ಪಾತ್ರರಾಗುವ ರೀತಿಯಲ್ಲಿ ನಡೆದುಕೊಂಡಾಗ ಸಂಘ ಸಂಸ್ಥೆಯಲ್ಲಿ ಸ್ಥಾನಮಾನ ಲಭ್ಯ. ತಂದೆ–ತಾಯಿ ಅಥವಾ ಹಿರಿಯರ ಆರೋಗ್ಯ ಉತ್ತಮವಾಗಿರುವುದು.
ಮಕರ
ಸ್ವಯಂಕೃತ ಅಪರಾಧದಿಂದ ಜೀವನದಲ್ಲಿ ಉಲ್ಲಾಸ ಕಳೆದುಕೊಳ್ಳುವ ಸಮಯ ಎದುರಾಗಲಿದೆ. ಕಲ್ಲಿನ ಅಥವಾ ಟೈಲ್ಸ್ ಕೆಲಸ ಮಾಡುವವರು ಜಾಗ್ರತೆ ವಹಿಸಿ. ರಾಜಕೀಯ ವ್ಯಕ್ತಿಗಳ ಹಿಂದೆ ತಿರುಗುವುದು ವ್ಯರ್ಥ.
ಕುಂಭ
ಕಾರ್ಯದೊತ್ತಡದ ನಡುವೆ ಕುಟುಂಬದ ಸಮಸ್ಯೆಯತ್ತ ಗಮನ ನೀಡಿ. ದಾಂಪತ್ಯದಲ್ಲಿ ಅನ್ಯೋನ್ಯತೆ ಕಾಪಾಡಿಕೊಳ್ಳುವುದು ಜವಾಬ್ದಾರಿಯಾಗಿರುತ್ತದೆ. ಗಣಿತಜ್ಞ, ಸಂಗೀತಗಾರರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ಸಿಗಲಿವೆ.
ಮೀನ
ಸಂಚರಿಸುವಾಗ ಮಾರ್ಗಮಧ್ಯದಲ್ಲಿ ದಂಡ ಕಟ್ಟುವಂಥ ತಪ್ಪುಗಳು ನಡೆಯಬಹುದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವಿರಿ. ಖರ್ಚುಗಳಿಗೆ ತಕ್ಕಂತೆ ಆದಾಯವಿರಲಿದೆ.